Hero: ಹೀರೋ ಗ್ಲಾಮರ್ ಬೈಕ್‌ನ್ನು ಬಡವರು ಸುಲಭವಾಗಿ ಮನೆಗೆ ತರಬಹುದು.. ಅತಿ ಕಡಿಮೆ ಇಎಂಐ!

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್‌ ಹಾಗೂ ಸ್ಕೂಟರ್‌ಗಳು ಸಾಮಾನ್ಯ ಜನರ ಮನಸ್ಸನ್ನು ಗೆದ್ದಿವೆ. ಸದ್ಯ ಹೀರೋ ಗ್ಲಾಮರ್ (Hero Glamour) ಮೋಟಾರ್‌ಸೈಕಲ್‌ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನಿಮ್ಮ ದಿನನಿತ್ಯದ ಬಳಕೆಗಾಗಿ ಈ ಬೈಕ್ ಹೆಚ್ಚು ಉಪಯುಕ್ತವಾಗಿದ್ದು, ಕೆಲವೇ ಸಾವಿರಗಳಲ್ಲಿ ಮನೆಗೆ ತರಬಹುದು. ಇಲ್ಲಿ ನೂತನ 'ಗ್ಲಾಮರ್'ನ ಆನ್ ರೋಡ್ (On Road) ಬೆಲೆ ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೀರೋ ಗ್ಲಾಮರ್ ಬೈಕ್ ಡ್ರಮ್ ಹಾಗೂ ಡಿಸ್ಕ್ ಎಂಬ 2 ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ಇದರ 'ಡ್ರಮ್' ಮಾದರಿಯು ರೂ.1,04,651 ಆನ್ ರೋಡ್ ಬೆಲೆಯನ್ನು ಹೊಂದಿದ್ದು, ರೂ.10,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ ಖರೀದಿಸಿದರೆ, ರೂ.94,651 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.3,041 ಇಎಂಐ ಕಟ್ಟಬೇಕು.

Hero Glamour Bike On Road Price And Emi Details

ನೂತನ ಹೀರೋ ಗ್ಲಾಮರ್ 'ಡಿಸ್ಕ್' ಆವೃತ್ತಿಯು ರೂ.1,09,398 ಆನ್ ರೋಡ್ ದರವನ್ನು ಪಡೆದಿದೆ. ರೂ.11,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಬೈಕ್ ಕೊಂಡುಕೊಂಡರೆ, 9.7% ಬಡ್ಡಿಯನ್ನು ಹಾಕಿ ರೂ.98,398 ಸಾಲದ ಹಣಕ್ಕೆ (Loan Amount) ಮೂರು ವರ್ಷಗಳಿಗೆ ತಿಂಗಳಿಗೆ ರೂ.3,161 ಇಎಂಐ (EMI) ಪಾವತಿಸಬೇಕು.

ಹೊಸ ಹೀರೋ ಗ್ಲಾಮರ್ (Hero Glamour) ಬೈಕ್ 125 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 10.83 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Hero Glamour Bike On Road Price And Emi Details

ಈ ಮೋಟಾರ್‌ಸೈಕಲ್‌ ಫುಲ್ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್, ಎಲ್ಇಡಿ ಹೆಡ್ ಲೈಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಪೋರ್ಟ್ಸ್ ರೆಡ್, ಟೊರ್ನಾಡೋ ಗ್ರೇ, ಟೆಕ್ನೋ ಬ್ಲೂ ಮತ್ತು ರೇಡಿಯಂಟ್ ರೆಡ್ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ

ನೂತನ ಹೀರೋ ಗ್ಲಾಮರ್ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಈ ಮೋಟಾರ್‌ಸೈಕಲ್‌ 122.5 ಕೆಜಿ ತೂಕವಿದ್ದು, ಗ್ರೌಂಡ್ ಕ್ಲಿಯರೆನ್ಸ್ 180 ಎಂಎಂ ಇದೆ.

ಈ ಬೈಕ್‌ಗೆ ಹೋಂಡಾ ಶೈನ್ (Honda Shine) ಪ್ರಬಲ ಎದುರಾಳಿಯಾಗಿದೆ. ಹೊಸ ಶೈನ್ ಮೋಟಾರ್‌ಸೈಕಲ್‌, ರೂ.81,100 ಲಕ್ಷದಿಂದ ರೂ.85,100 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. 123.94 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 10.74 ಪಿಎಸ್ ಪವರ್ ಹಾಗೂ 11 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, June 14, 2024, 19:54 [IST]
English summary
Hero glamour bike on road price and emi details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+