ಮನೆಗೆ ತನ್ನಿ ಈ ಬಡವರ ಬೈಕ್: ಅತಿ ಕಡಿಮೆ EMI.. ಎಷ್ಟು ಗೊತ್ತಾ?
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಮನೆ ಮಾತಾಗಿದೆ. ಹೀರೋ ಕಂಪನಿಯು ತನ್ನ 2024ರ ಹೀರೋ ಗ್ಲಾಮರ್ (Hero Glamour) ಬೈಕ್‌ನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಇದು ಮಧ್ಯಮ ವರ್ಗದ ಯುವಕರಿಗೆ ಹೇಳಿ ಮಾಡಿಸಿದ ರೀತಿಯಲಿದ್ದು, ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಈ ಹೀರೋ ಗ್ಲಾಮರ್ ಬೈಕಿನ ಇಎಂಐ, ಆನ್ ರೋಡ್ ಬೆಲೆ ಮತ್ತು ಸಂಪೂರ್ಣ ಮಾಹಿತಿಗಳ ವಿವರ ಇಲ್ಲಿದೆ.
ಹೀರೋ ಗ್ಲಾಮರ್ ಬೈಕಿನ ಬೆಲೆಯು ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ರೂ.84,548 ಆದರೆ ಆನ್ ರೋಡ್ ಬೆಲೆಯು ರೂ.1,02,152 ಆಗಿದೆ. ಈ ಬೈಕಿಗೆ 9.7% ಬಡ್ಡಿ ದರದಲ್ಲಿ 36 ತಿಂಗಳುಗಳ ಲೋನ್ ಆಯ್ಕೆ ಮಾಡಿದರೆ ಪ್ರತಿ ತಿಂಗಳು ನೀವು ರೂ.2,747 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಹೀರೋ ಗ್ಲಾಮರ್ ಬೈಕಿನ ಡೌನ್ ಪೇಮೆಂಟ್ ರೂ.10000 ಆಗಿದೆ.

ಈ ಹೀರೋ ಗ್ಲಾಮರ್ ಮೋಟಾರ್‌ಸೈಕಲ್, 124.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 10.72 ಬಿಹೆಚ್‌ಪಿ ಪವರ್ ಮತ್ತು 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 55 ಕಿ.ನೀ.ವರೆಗೆ ಮೈಲೇಜ್ ಕೊಡಲಿದೆ ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು & ಇತರೆ ಬಣ್ಣಗಳು: ಈ ಬೈಕ್ ಎಲ್ಇಡಿ ಹೆಡ್‌ಲೈಟ್, ಡಿಜಿಟಲ್ ಇನ್‌ಸ್ಟ್ರುಮೆಂಟೇಶನ್ ಸ್ಕ್ರೀನ್, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್, ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್, ಹಝರ್ಡ್ ಲೈಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ನವೀನವಾದ ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್ ಬಣ್ಣದೊಂದಿಗೆ ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ-ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್-ಬ್ಲಾಕ್ ಬಣ್ಣದ ಆಯ್ಕೆಯಲ್ಲಿಯೂ ಖರೀದಿಗೆ ಸಿಗುತ್ತದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್: ಈ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಡ್ರಮ್ ಬ್ರೇಕ್ ರೂಪಾಂತರ 122 ಕೆಜಿ ಮತ್ತು ಡಿಸ್ಕ್ ಬ್ರೇಕ್ ರೂಪಾಂತರ 123 ಕೆಜಿ ತೂಕವಿದೆ.
ವೀಲ್ ಮತ್ತು ಟೈಯರ್‌ಗಳು: ಈ ಬೈಕ್ ಸವಾರರಿಗೆ ರಸ್ತೆಯ ಮೇಲೆ ಬಲವಾದ ಹಿಡಿತ ಸಾಧಿಸಲು 18-ಇಂಚಿನ ವೀಲ್‌ಗಳು, ಮುಂದೆ (ಫ್ರಂಟ್) 80/100-18 ಮತ್ತು ಹಿಂದೆ (ರೇರ್) 100/80-18 ಅಳತೆಯ ಟೈಯರ್‌ಗಳನ್ನು ಒಳಗೊಂಡಿದೆ. ವೀಲ್‌ಬೇಸ್ 1273 ಎಂಎಂ ಇದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.

ಪ್ರತಿಸ್ಪರ್ಧಿ ಮೋಟಾರ್‌ಸೈಕಲ್: ಈ ಹೀರೋ ಗ್ಲಾಮರ್ ಬೈಕ್‌ಗೆ ಟಿವಿಎಸ್ ರೈಡರ್ 125 ನೇರ ಎದುರಾಳಿಯಾಗಿದೆ. ಈ ಬೈಕ್ 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 67 ಕಿ.ಮೀ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








