Hero: ಹೀರೋ ಗ್ರಾಹಕರಿಗೆ ಬಿಗ್‌ಶಾಕ್.. ಏಕೆ?

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳು ದಶಕಗಳಿಂದ ಸಾಮಾನ್ಯ ಜನರ ಮನಸ್ಸನ್ನು ಗೆದ್ದಿವೆ. ಅದರಲ್ಲೂ 'ಹೀರೋ ಸ್ಪ್ಲೆಂಡರ್' ಬಗ್ಗೆ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ?.. ಈ ಬೈಕ್‌ನ್ನು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಸ್ಪ್ಲೆಂಡರ್ ಮಾತ್ರವಲ್ಲದೆ ನೂತನ ಪ್ಯಾಶನ್ ಪ್ಲಸ್ ಮತ್ತು ಗ್ಲಾಮರ್ ಮೋಟಾರ್‌ಸೈಕಲ್‌ಗಳು.. ಪ್ಲೆಷರ್ ಪ್ಲಸ್ ಹಾಗೂ ಜೂಮ್ ಸ್ಕೂಟರ್‌ಗಳನ್ನು ಕೈಗಟುಕುವ ಬೆಲೆಯಲ್ಲಿ ಮನೆಗೆ ತರಬಹುದು.

ನೀವು ಹೀರೋ (Hero) ಬೈಕ್ ಅಥವಾ ಸ್ಕೂಟರ್ ಖರೀದಿಸಲು ಯೋಚಿಸಿದ್ದರೆ, ಈ ವಾರವೇ ತೆಗೆದುಕೊಂಡು ಬಿಡಿ.. ಆ ಬಳಿಕ, ಕಂಪನಿಯು ಆಯ್ದ ಮಾದರಿ (ಮಾಡೆಲ್)ಗಳ ಎಕ್ಸ್ ಶೋರೂಂ (Ex-Showroom) ಬೆಲೆಯನ್ನು ಹೆಚ್ಚಳ ಮಾಡಲಿದೆ. ನೂತನ ದರಗಳು ಜುಲೈ 1ರಿಂದ ಜಾರಿಗೆ ಬರಲಿದ್ದು, ಸರಿ ಸುಮಾರು ರೂ.1,500ವರೆಗೆ ಬೆಲೆ ಅಧಿಕಗೊಳ್ಳಬಹುದು ಎನ್ನಲಾಗಿದೆ.

Hero Increase Motorcycles Scooters Prices From July 1 Details

ಹೀರೋ ಮೋಟೊಕಾರ್ಪ್, ಇನ್‌ಪುಟ್ (ತಯಾರಿಕಾ) ವೆಚ್ಚವನ್ನು ಸರಿದೂಗಿಸಲು ತನ್ನ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳ ದರವನ್ನು ಏರಿಕೆ ಮಾಡುತ್ತಿದೆ ಎಂದು ತಿಳಿದುಬಂದಿದೆ. ಕೊನೆಯ ಬಾರಿಗೆ 2023ರ ಅಕ್ಟೋಬರ್‌ನಲ್ಲಿ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಿತ್ತು. ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೊದಲ ಸ್ಥಾನದಲ್ಲಿದ್ದರೂ ಮೇ ತಿಂಗಳು 4,98,123 ಯುನಿಟ್ ವಾಹನಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 4.11% ಕುಸಿತವನ್ನು ಕಂಡಿದೆ. 2023ರ ಮೇನಲ್ಲಿ 5,19,474 ಯುನಿಟ್‌ ಮಾರಿತ್ತು.

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FADA) ಪ್ರಕಾರ, 2024ರ ಮೇ ತಿಂಗಳವರೆಗೆ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ ಶೇಕಡ 29.05% ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (25.45%), ಟಿವಿಎಸ್ ಮೋಟಾರ್ (17.15%) ಹಾಗೂ ಬಜಾಜ್ ಆಟೋ (11.41%) ಕಂಪನಿಗಳಿವೆ.

Hero Increase Motorcycles Scooters Prices From July 1 Details

ಈಚೆಗೆ ಹೀರೋ ಮೋಟೊಕಾರ್ಪ್ 'ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0' ಮೋಟಾರ್‌ಸೈಕಲ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದು ರೂ.82,911 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದ್ದು, ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಪಡೆದಿದೆ. ಎಲ್ಇಡಿ ಹೆಡ್‌ಲೈಟ್, 'ಹೆಚ್' ಆಕಾರದ ಎಲ್ಇಡಿ ಟೈಲ್ಯಾಂಪ್‌ನ್ನು ಒಳಗೊಂಡಿದೆ. ಮ್ಯಾಟ್ ಗ್ರೇ, ಗ್ಲೋಸ್ ಬ್ಲ್ಯಾಕ್ ಮತ್ತು ಗ್ಲೋಸ್ ರೆಡ್ ಎಂಬ ಬಣ್ಣ (ಕಲರ್)ಗಳನ್ನು ಹೊಂದಿದೆ.

ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 (Hero Splendor Plus Xtec 2.0) ಪವರ್‌ಟ್ರೇನ್ ಕುರಿತು ಮಾತನಾಡುವುದಾದರೆ, ಇದು 100 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಒಳಗೊಂಡಿದೆ. 7.09 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

Hero Increase Motorcycles Scooters Prices From July 1 Details

ಹೊಸ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಹತ್ತಾರು ವೈಶಿಷ್ಟ್ಯ (ಫೀಚರ್)ಗಳನ್ನು ಹೊಂದಿದೆ. ಇಕೋ-ಇಂಡಿಕೇಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ ಬಗ್ಗೆ ವಿವರಗಳನ್ನು ತೋರಿಸಲು ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಪಡೆದಿದೆ. ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 26, 2024, 15:42 [IST]
English summary
Hero increase motorcycles scooters prices from july 1 details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+