ಫೈಟರ್ ಜೆಟ್ ಹೋಲುವ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್ ಬಿಡುಗಡೆ: ವಿಶೇಷತೆಗಳೇನು?
ಭಾರತದಲ್ಲಿ ಹೀರೋ ಮೋಟಾರ್ ಸೈಕಲ್ಸ್ & ಸ್ಕೂಟರ್ಸ್, ಪೈಪೋಟಿ ಹೆಚ್ಚಾದಂತೆ ಹೊಸ ಅಪ್‌ಡೇಟೆಡ್ ಮಾಡೆಲ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಹೊಸ ಫೈಟರ್ ಜೆಟ್ ಅನ್ನು ಹೋಲುವಂತಹ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗಾಗಿ ಬಿಡುಗಡೆ ಮಾಡಿದೆ. ಹೀರೋ ಕಂಪನಿಯು ಈ ಹಿಂದೆ ಕ್ಸೂಮ್ ಸ್ಕೂಟರ್ ಶ್ರೇಣಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲೀಗ ಹೊಸ ಕಾಂಬ್ಯಾಟ್ ಎಡಿಷನ್ ಎಂಬ ವೇರಿಯೆಂಟ್ ಅನ್ನು ಬಿಡುಗಡೆಗೊಳಿಸಿದ್ದು, ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.80,967 ಗಳಾಗಿದೆ. ಹೊಸ ಫೈಟರ್ ಜೆಟ್ ಹೋಲುವ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಕ್ಸೂಮ್ ಕಾಂಬ್ಯಾಟ್ ಆವೃತ್ತಿಯು (Combat edition) ಸ್ಪೋರ್ಟಿ ಹೀರೋ ಸ್ಕೂಟರ್‌ನ ಟಾಪ್-ಸ್ಪೆಕ್ ಝಡ್‌ಎಕ್ಸ್ (ZX) ರೂಪಾಂತರವನ್ನು ಆಧರಿಸಿದೆ. ಇದು 'ಮ್ಯಾಟ್ ಶಾಡೋ ಗ್ರೇ' (Matte Shadow Grey) ಎಂಬ ವಿಶೇಷ ಬಣ್ಣದ ಸ್ಕೀಮ್‌ನಲ್ಲಿ ಬರುತ್ತದೆ. ನೋಡಲು ಆಕರ್ಷಕ ಲುಕ್‌ನೊಂದಿಗೆ ಹಳದಿ ಮತ್ತು ಬ್ಲಾಕ್ ಅಕ್ಸೆಂಟ್‌ಗಳಿಂದ ಡಿಸೈನ್ ಮಾಡಲಾದ ಒರಿಜಿನಲ್ ಗ್ರೇ ಕೋಟ್ ಅನ್ನು ಹೊಂದಿದೆ.

ಈ ವಿಶೇಷ ಆವೃತ್ತಿಯ (Special edition) ಬಣ್ಣವನ್ನು ಕೂಡ ಫೈಟರ್ ಜೆಟ್ ವಿಮಾನಗಳಲ್ಲಿ ಕಂಡುಬರುವ ಅದೇ ಬಣ್ಣ ನೆನಪಾಗುವ ಉದ್ದೇಶದಿಂದ ನೀಡಲಾಗಿದೆ. ಈ ಬಣ್ಣವನ್ನು ಹೊರತುಪಡಿಸಿ, ಕ್ಸೂಮ್ ಕಾಂಬ್ಯಾಟ್ ಆವೃತ್ತಿಯು ಯಾಂತ್ರಿಕವಾಗಿ ಟಾಪ್ ವೇರಿಯೆಂಟ್ ಝಡ್ಎಕ್ಸ್ ರೂಪಾಂತರಕ್ಕೆ ಹೋಲುತ್ತದೆ. ಅಂದರೆ ಕಾಂಬ್ಯಾಟ್ ಎಡಿಷನ್ ಕೂಡ ಟಾಪ್ ವೇರಿಯೆಂಟ್ ಎಂದು ಅರ್ಥ.
ಹೀರೋ ಕ್ಸೂಮ್ ಕಾಂಬ್ಯಾಟ್ ಟಾಪ್ ವೇರಿಯೆಂಟ್, ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಕಾರ್ನರಿಂಗ್ ಲೈಟ್ಸ್ ವೈಶಿಷ್ಟ್ಯದೊಂದಿಗೆ ಎಲ್‌ಇಡಿ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ. ಇದರ ಎಂಜಿನ್ ವಿಷಯಕ್ಕೆ ಬಂದರೆ, ಏರ್ ಕೂಲ್ಡ್ 110.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 7,250 ಆರ್‌ಪಿಎಂನಲ್ಲಿ 8.2 ಬಿಹೆಚ್‌ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಝಡ್ಎಕ್ಸ್ ರೂಪಾಂತರದಲ್ಲಿ ಕಂಡುಬರುವ ಅದೇ ಡಿಜಿಟಲ್ ಡಿಸ್ಪ್ಲೇಯನ್ನು ಕ್ಸೂಮ್ ಕಾಂಬ್ಯಾಟ್ ಸ್ಪೆಷಲ್ ಎಡಿಷನ್‌ನಲ್ಲೂ ನೀಡಲಾಗಿದೆ. ಅಂದರೆ ಇದು ಕರೆ ಮತ್ತು ಎಸ್ಎಂಎಸ್ ಎಚ್ಚರಿಕೆಗಳನ್ನು ಸಕ್ರಿಯಗೊಳಿಸುವ ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ. ಅಲ್ಲದೇ ಉತ್ತಮ ಬ್ರೇಕಿಂಗ್ ಹಾಗೂ ಅತ್ಯುತ್ತಮ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಆರಾಮದಾಯಕ ಪ್ರಯಾಣ ಅನುಭವವನ್ನು ನೀಡುತ್ತದೆ.
80,967 ರೂ.ಗಳೊಂದಿಗೆ, ಹೀರೋ ಕ್ಸೂಮ್ ಕಾಂಬ್ಯಾಟ್ ಆವೃತ್ತಿಯು ಪ್ರಸ್ತುತ ಮಾರಾಟವಾಗುತ್ತಿರುವ ಸ್ಪೋರ್ಟಿ ಹೀರೋ ಸ್ಕೂಟರ್‌ನ ಅತ್ಯಂತ ದುಬಾರಿ ವೇರಿಯೆಂಟ್ ಆಗಿದೆ. ಏಕೆಂದರೆ ಈ ಸರಿಣಿಯಲ್ಲಿನ ಬೇಸ್ ವೇರಿಯೆಂಟ್ ಸ್ಕೂಟರ್‌ಗಳು ಕ್ಸೂಮ್ ಕಾಂಬ್ಯಾಟ್ ಆವೃತ್ತಿಗಿಂತ ಹತ್ತು ಸಾವಿರ ರೂ. ಕಡಿಮೆ ಬೆಲೆಯಲ್ಲಿ ಲಭ್ಯವಿವೆ.

ಕಾಂಬ್ಯಾಟ್ ಆವೃತ್ತಿಯು ಬೆಸ್ಟ್ ಪರ್ಫಾಮೆನ್ಸ್ ಹಾಗೂ ಆಕರ್ಷಕ ಡಿಸೈನ್‌ನಿಂದಾಗಿ ಬೆಲೆ ಹೆಚ್ಚಳವನ್ನು ಪಡೆದಿದೆ. ಇನ್ನು ಹೀರೋ ಕ್ಸೂಮ್ ಸರಣಿಯ ಬೆಲೆಗಳು ಮೂಲ ಎಲ್ಎಕ್ಸ್ ರೂಪಾಂತರಕ್ಕೆ 71,484 ರೂ.ಗಳಿಂದ ಪ್ರಾರಂಭವಾಗುತ್ತವೆ. ಹೀರೋ ಕ್ಸೂಮ್‌ನ ಪ್ರಾಥಮಿಕ ಪ್ರತಿಸ್ಪರ್ಧಿ ಹೋಂಡಾ ಡಿಯೋ ಆಗಿದ್ದು, ಇದರ ಬೆಲೆಯು ರೂ.70,211 ರಿಂದ ರೂ.77,712ಗಳಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








