Hero: ತಕ್ಷಣ ಶೋರೂಂಗೆ ಹೋಗಿ.. ಆಮೇಲೆ ಬೇಕು ಅಂದ್ರು ಸಿಗಲ್ಲ, ಹೀರೋ ದ್ವಿಚಕ್ರ ವಾಹನಗಳಿಗೆ ಭರ್ಜರಿ ಆಫರ್!
ಭಾರತದ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ಟ್ರೆಂಡ್ ಸೆಟರ್ ಆಗಿದೆ. ದೇಶೀಯವಾಗಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳಿಗೆ ಗ್ರಾಹಕರು ಕೂಡ ಮನಸೊತ್ತಿದ್ದು, ದೊಡ್ಡಸಂಖ್ಯೆಯಲ್ಲಿ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳು ಕರ್ನಾಟಕದ ಆಯ್ದ ಹೀರೋ ಡೀಲರ್‌ಶಿಪ್‌ಗಳು ನೂತನ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಖರೀದಿ ಮೇಲೆ ಭರ್ಜರಿ ಹಣಕಾಸಿನ ಪ್ರಯೋಜನವನ್ನು ಘೋಷಣೆ ಮಾಡಿವೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ.
ಹೀರೋದ ಹೊಸ ಬೈಕ್ ಅಥವಾ ಸ್ಕೂಟರ್‌ನ್ನು ತೆಗೆದುಕೊಳ್ಳಬೇಕು ಅಂದುಕೊಳ್ಳುವ ಶಿಕ್ಷಕರಿಗೆ ಉತ್ತಮ ರಿಯಾಯಿತಿ ಸೌಲಭ್ಯಗಳು ಲಭ್ಯವಿವೆ. ಹೆಚ್ಎಫ್ ಡಿಲಕ್ಸ್, ಸ್ಪ್ಲೆಂಡರ್ ಹಾಗೂ ಪ್ಯಾಶನ್ ಬೈಕ್ ಮೋಟಾರ್‌ಸೈಕಲ್ ಖರೀದಿಗೆ ಮೇಲೆ ರೂ.2,500 ಹಣಕಾಸಿನ ಪ್ರಯೋಜನ ದೊರೆಯುತ್ತದೆ. ಇದರೊಟ್ಟಿಗೆ ಡೆಸ್ಟಿನಿ ಪ್ರೈಮ್ ಸ್ಕೂಟರ್ ರೂ.3,000, ಎಲ್ಲ ವಿವಿಧ 125 ಸಿಸಿ ಬೈಕ್‌ಗಳು ರೂ.2,500 ಹಾಗೂ ಪ್ರೀಮಿಯಂ ಮೋಟಾರ್‌ಸೈಕಲ್‌ಗಳು ರೂ.4000ವರೆಗೆ ಆಫರ್‌ಗಳನ್ನು ಹೊಂದಿವೆ.

ಶಿಕ್ಷಕರಿಗಾಗಿ ಘೋಷಿಸಲಾಗಿರುವ ಈ ಹಣಕಾಸು ಪ್ರಯೋಜನದ ಅವಧಿ ಸೆಪ್ಟೆಂಬರ್ 31ಕ್ಕೆ ಮುಕ್ತಾಯವಾಗಿದೆ. ಆದರೂ ಅಕ್ಟೋಬರ್ 15ರವರೆಗೆ ವಿಸ್ತರಿಸಲಾಗಿದ್ದು, ಹೆಚ್ಎಫ್100 ಬೈಕ್ ತೆಗೆದುಕೊಳ್ಳುವ ಶಿಕ್ಷಕರಿಗೆ ಯಾವುದೇ ರಿಯಾಯಿತಿ ಸೌಲಭ್ಯಗಳು ಸಿಗುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಇತರೆ ಗ್ರಾಹಕರಿಗೆ ರೂ.1000ವರೆಗೆ ಕಾರ್ಪೊರೇಟ್ ಆಫರ್ ಮತ್ತು ರೂ.2500ವರೆಗೆ ಡೆಲಿವೆರಿ ಸೆಗ್ಮೆಂಟ್ ಆಫರ್ ಲಭ್ಯವಿದೆ.
ಹೀರೋ ಮೋಟೊಕಾರ್ಪ್ ಅನ್ನದಾತರಿಗೂ ಸಹ ಹಣಕಾಸು ಪ್ರಯೋಜನವನ್ನು ನೀಡುತ್ತದೆ. ಕೆಎಂಎಫ್ ಡೈರಿಗಳಿಗೆ ಹಾಲು ಪೂರೈಸುವ ರೈತರಿಗೆ ಎಲ್ಲ ಬೈಕ್ ಅಥವಾ ಸ್ಕೂಟರ್ ಖರೀದಿ ಮೇಲೆ ರೂ.2,500 ಆಫರ್‌ನ್ನು ಕೊಡುತ್ತಿದೆ. ಈ ರಿಯಾಯಿತಿ ಸೌಲಭ್ಯ ಜನವರಿ 31, 2025ರವರೆಗೆ ಮಾನ್ಯವಾಗಿರಲಿದೆ. ಆದರೆ, ಹೆಚ್ಎಫ್100 ಮೋಟಾರ್‌ಸೈಕಲ್ ಮತ್ತು ಡೆಸ್ಟಿನಿ ಪ್ರೈಮ್ ಸ್ಕೂಟರ್‌ಗಳಿಗೆ ಯಾವುದೇ ಆಫರ್‌ಗಳನ್ನು ನೀಡಲಾಗುತ್ತಿಲ್ಲ.

ಇತ್ತೀಚೆಗೆ, ದೇಶೀಯ ಮಾರುಕಟ್ಟೆಯಲ್ಲಿ ಹೊಸ ವೈಶಿಷ್ಟ್ಯದೊಂದಿಗೆ (ಫೀಚರ್) ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus XTEC) ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆಯುವುದರೊಂದಿಗೆ ರೂ.83,461 ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟಕ್ಕೆ ಬಂದಿತ್ತು.
ಈ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (ಡಿಸ್ಕ್ ಬ್ರೇಕ್) ಬೈಕ್, 97.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐ3ಎಸ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್. ಬೈಕ್ ಸೈಡ್ ಸ್ಟ್ಯಾಂಡ್ ಕಟ್-ಆಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್‌ಗೂ ಮುನ್ನ ನೂತನ 'ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್' ಬಣ್ಣದ ಆಯ್ಕೆಯಲ್ಲಿ ಹೀರೋ ಗ್ಲಾಮರ್ (Hero Glamour) ಸಹ ಮಾರಾಟಕ್ಕೆ ಬಂದಿತ್ತು. ಇದರ ಡ್ರಮ್ ಬ್ರೇಕ್ ರೂಪಾಂತರವನ್ನು (ವೇರಿಯೆಂಟ್) ರೂ.83,598 ಹಾಗೂ ಡಿಸ್ಕ್ ಬ್ರೇಕ್ ರೂಪಾಂತರವನ್ನು ರೂ.87,598 ಎಕ್ಸ್ ಶೋರೂಂ ಬೆಲೆಯಲ್ಲಿ ಪರಿಚಯಿಸಲಾಗಿತ್ತು.
ಹೊಸ ಹೀರೋ ಗ್ಲಾಮರ್ 124.7 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್, ಡಿಜಿಟಲ್ ಇನ್‌ಸ್ಟ್ರುಮೆಂಟೇಶನ್ ಸ್ಕ್ರೀನ್, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ನಿಮ್ಮ ಗಮನಕ್ಕೆ.. ಈ ಹಣಕಾಸಿನ ಪ್ರಯೋಜನಗಳು ನಗರದಿಂದ ನಗರಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








