Hero: ನಮ್ಮ ಮಣ್ಣಿನ ಹೀರೋ ಕಂಪನಿಯೇ ನಂಬರ್ 1.. 'ಸ್ಪ್ಲೆಂಡರ್'ನಿಂದ ಸುನಾಮಿ, ರೆಕಾರ್ಡ್ ಸಂಖ್ಯೆಯಲ್ಲಿ ಮಾರಾಟ!

ನವದೆಹಲಿ ಮೂಲದ ಹೀರೋ ಮೋಟೊಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಅಕ್ಟೋಬರ್ ತಿಂಗಳ ಬೈಕ್ ಹಾಗೂ ಸ್ಕೂಟರ್‌ಗಳ ಮಾರಾಟದ ಅಂಕಿಅಂಶದ ವರದಿಯನ್ನು ಕಂಪನಿಯು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾಧಿಸಿದೆ. ಈ ಮೂಲಕ ಪ್ರಬಲ ಪ್ರತಿಸ್ಪರ್ಧಿಗಳಾದ ಹೋಂಡಾ ಮೋಟಾರ್‌ಸೈಕಲ್‌, ಟಿವಿಎಸ್ ಮೋಟಾರ್‌, ಸುಜುಕಿ ಮೋಟಾರ್‌ಸೈಕಲ್ ಹಾಗೂ ಬಜಾಜ್ ಆಟೋಗಳನ್ನು ಹಿಂದಿಕ್ಕಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಳೆದ ತಿಂಗಳು (ಅಕ್ಟೋಬರ್ - 2024) ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಹೀರೋ ಮೋಟೊಕಾರ್ಪ್ ಬರೋಬ್ಬರಿ 6,79,091 ಯುನಿಟ್ ದ್ವಿಚಕ್ರ ವಾಹನಗಳನ್ನು (ಬೈಕ್ - ಸ್ಕೂಟರ್‌) ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 5,74,930 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 18.12% ಪ್ರಗತಿ ಸಾಧಿಸಿದೆ.

Hero October 2024 Sales Report 6 79 091 Units Sold Huge Number Customers Buy Splendor Bikes

ಹೀರೋ ಕಂಪನಿಯ ತಿಂಗಳ ಮಾರಾಟವು ಹೆಚ್ಚಳಗೊಂಡಿದ್ದು. ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿದ 6,37,050 ಯುನಿಟ್‌ಗಳಿಗೆ ಹೋಲಿಸಿದರೆ, ಈ ಅಕ್ಟೋಬರ್‌ನಲ್ಲಿ ಶೇಕಡ 6.60% ಬೆಳವಣಿಗೆಯಾಗಿದೆ. ಹೀರೋಗೆ ದೊಡ್ಡಮಟ್ಟದಲ್ಲಿ ಸ್ಪರ್ಧೆಯೊಡ್ಡುವ ಹೋಂಡಾ ಕಂಪನಿ 5,97,711 ಯುನಿಟ್ (ಅಕ್ಟೋಬರ್‌) ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಮಾತ್ರ ಶಕ್ತವಾಗಿದೆ.

ಸ್ಕೂಟರ್‌ಗಳಿಗೆ ಹೋಲಿಕೆ ಮಾಡಿದರೆ, ಹೀರೋ ಕಂಪನಿ ಗರಿಷ್ಠ ಸಂಖ್ಯೆಯಲ್ಲಿ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. 6,35,787 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಿದೆ. 2023ರ ಅಕ್ಟೋಬರ್‌ನಲ್ಲಿ ಮಾರಲ್ಪಟ್ಟ 5,29,341 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಶೇಕಡ 20.11% ಪ್ರಗತಿ ಕಂಡಿದೆ. ಆದರೆ, ಸ್ಕೂಟರ್ ಮಾರಾಟದಲ್ಲಿ ಹಿನ್ನೆಡೆ ಅನುಭವಿಸಿದ್ದು, 43,304 ಯುನಿಟ್‌ಗಳನ್ನು ಮಾರಾಟ ಮಾಡಿದೆ.

Hero October 2024 Sales Report 6 79 091 Units Sold Huge Number Customers Buy Splendor Bikes

ಹೀರೋ ಕಂಪನಿ ಈ ಪರಿಪ್ರಮಾಣದಲ್ಲಿ ಪ್ರಗತಿ ಸಾಧಿಸಲು 'ಸ್ಪ್ಲೆಂಡರ್' ಬೈಕ್ ಪ್ರಮುಖ ಕಾರಣವಾಗಿದೆ. ಇದು ಹಲವು ವಿಧದ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಸ್ಪ್ಲೆಂಡರ್ ಪ್ಲಸ್ ಅತಿ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿದ್ದು, ರೂ.76,356 ರಿಂದ ರೂ.77,496 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 80.6 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus XTEC) ಮೋಟಾರ್‌ಸೈಕಲ್‌ ಬಗ್ಗೆ ಕುರಿತಂತೆ ಹೇಳುವುದಾದರೆ, ಇದು ರೂ.97,089 ರಿಂದ ರೂ.1 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.02 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor) ಕೂಡ ಜನಪ್ರಿಯ ಬೈಕ್ ಆಗಿದೆ. ರೂ.82,298 ರಿಂದ ರೂ.86,298 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 10.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿದೆ. 69 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಮೋಟಾರ್‌ಸೈಕಲ್‌ ಕುರಿತಂತೆ ಮಾತನಾಡುವುದಾದರೆ, ಇದು ರೂ.83,350 ರಿಂದ ರೂ.87,350 (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 10.84 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಹೀರೋ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಮಾತ್ರವಲ್ಲದೆ, ಹೆಚ್ಎಫ್ ಡಿಲಕ್ಸ್, ಮಾವ್ರಿಕ್ 440, ಕರಿಜ್ಮಾ ಎಕ್ಸ್ಎಂಆರ್ ಹಾಗೂ ಗ್ಲಾಮರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸುತ್ತಿದೆ. ಇದರೊಟ್ಟಿಗೆ ಪ್ಲೆಷರ್ ಪ್ಲಸ್, ಜೂಮ್, ಡೆಸ್ಟಿನಿ 125 ಎಕ್ಸ್‌ಟೆಕ್ ಮತ್ತು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Friday, November 8, 2024, 10:10 [IST]
English summary
Hero october 2024 sales report 679091 units sold huge number customers buy splendor bikes
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+