Hero: ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿವೆ. ನೀವು ದಿನನಿತ್ಯದ ಬಳಕೆಗಾಗಿ ಹೊಚ್ಚ ಹೊಸ ಸ್ಕೂಟರ್ ತೆಗೆದುಕೊಳ್ಳಲು ಆಲೋಚಿಸಿದ್ದರೆ.. 'ಹೀರೋ ಪ್ಲೆಷರ್ ಪ್ಲಸ್' ಉತ್ತಮ ಆಯ್ಕೆಯಾಗಲಿದೆ. ಇಲ್ಲಿ ನೂತನ ಸ್ಕೂಟರ್‌ನ ಆನ್-ರೋಡ್ ಬೆಲೆ (On-Road Price) ಎಷ್ಟು?.. ಇಎಂಐ (EMI) ಏನು ಎಂಬುದರ ಕುರಿತಂತೆ ತಿಳಿಸಿಕೊಟ್ಟಿದ್ದೇವೆ.
ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಎಲ್ಎಕ್ಸ್ (LX) ಮಾದರಿಯು ರೂ.91,005 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.10,000 ಡೌನ್ ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಖರೀದಿಸಿದರೆ, ರೂ.81,005 ಸಾಲವಿರುತ್ತದೆ. ಇದಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.2,602 ಇಎಂಐ ಕಟ್ಟಬೇಕು.

ನೂತನ ಪ್ಲೆಷರ್ ಪ್ಲಸ್ ವಿಎಕ್ಸ್ (VX) ರೂಪಾಂತರವು ರೂ.94,519 ಆನ್-ರೋಡ್ ದರವನ್ನು ಪಡೆದಿದೆ. ರೂ.10,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಸ್ಕೂಟರ್‌ನ್ನು ತೆಗೆದುಕೊಂಡರೆ, ಉಳಿದ ರೂ.84,519 ಸಾಲದ ಹಣಕ್ಕೆ (Loan Amount) ಶೇಕಡ 9.7% ಬಡ್ಡಿ ಹಾಕಿ 3 ವರ್ಷಕ್ಕೆ ತಿಂಗಳಿಗೆ ರೂ.2,715 ಇಎಂಐ ಪಾವತಿಸಬೇಕು.
ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್ (Xtec Sports) ಮಾದರಿಯು ರೂ.97,750 ಆನ್-ರೋಡ್ (On-Road) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.10,000 ಡೌನ್ ಪೇಮೆಂಟ್ ಪಾವತಿಸಿ ಈ ಸ್ಕೂಟರ್‌ನ್ನು ಮನೆಗೆ ತಂದರೆ, ರೂ.87,750 ಸಾಲವಿರುತ್ತದೆ. ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ ಮಾಸಿಕ 2,819 ಇಎಂಐ ಕಟ್ಟಬೇಕು.
ಹೊಸ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಕನೆಕ್ಟ್ದ್ (XTEC Connected) ರೂಪಾಂತರವು ರೂ.1.04 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ರೂ.10,000 ಡೌನ್ ಪೇಮೆಂಟ್ ಕಟ್ಟಿ ಈ ಸ್ಕೂಟರ್‌ನ್ನು ಖರೀದಿಸಿದರೆ, ಉಳಿದ ರೂ.94,792 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ಹಾಕಿ 3 ವರ್ಷಕ್ಕೆ ತಿಂಗಳಿಗೆ ರೂ.3,045 ಇಎಂಐ ಪಾವತಿಸಬೇಕು.
ನೂತನ ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಸ್ಕೂಟರ್ 110 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.1 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 8.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಬರೋಬ್ಬರಿ 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಸ್ಕೂಟರ್ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. 10-ಇಂಚಿನ ಸ್ಟೀಲ್ ವೀಲ್‌ಗಳು, 90/100-10 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. 104 ಕೆಜಿ ತೂಕವಿರುವ ಈ ಸ್ಕೂಟರ್, 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.
ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್‌ಗೆ ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest) ಮತ್ತು ಹೋಂಡಾ ಡಿಯೋ (Honda Dio) ಪ್ರಬಲ ಎದುರಾಳಿಯಾಗಿವೆ. ನಿಮ್ಮ ಗಮನಕ್ಕೆ.. ಈ ಸ್ಕೂಟರ್‌ನ ಕೆಲವು ರೂಪಾಂತರಗಳ ಆನ್-ರೋಡ್ ದರ ಹಾಗೂ ಸಾಲದ ಆಯ್ಕೆಯ ಬಗ್ಗೆ ಮಾತ್ರ ವಿವರಿಸಿದ್ದೇವೆ. ರಾಜ್ಯದಿಂದ ರಾಜ್ಯಕ್ಕೆ ಈ ಬೆಲೆಗಳು ವ್ಯತ್ಯಾಸವಾಗಬಹುದು. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








