ಮೈಲೇಜ್ ಕಿಂಗ್ ಸ್ಪ್ಲೆಂಡರ್ ಬಗ್ಗೆ ಯಾರಿಗೂ ತಿಳಿಯದ ವಿಷಯಗಳು: ಕಂಪನಿ ಕೂಡ ಹೇಳುವುದಿಲ್ಲ!

ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಒಂದು ಸಮಯವಿತ್ತು, ಆಗ ಜನರು ಪ್ರಯಾಣಕ್ಕಾಗಿ ಸ್ಕೂಟರ್‌ಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಿದ್ದರು. ನಂತರ ಹೀರೋ ಹೋಂಡಾ ತನ್ನ ಸ್ಪ್ಲೆಂಡರ್ ಪರಿಚಯಿಸಿ ಹೊಸ ಅಧ್ಯಾಯ ಆರಂಭಿಸಿತು. ಅಂದಿನಿಂದ ಇಂದಿನವರೆಗೆ, ಹೀರೋ ಸ್ಪ್ಲೆಂಡರ್ ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿಸಬಹುದಾದ ಮೋಟಾರ್ ಸೈಕಲ್ ಆಗಿ ಜನಪ್ರಿಯತೆ ಪಡೆದಿದೆ. ಅಲ್ಲದೇ ಮೈಲೇಜ್ ವಿಷಯದಲ್ಲಿ ಈ ಬೈಕ್ ಕ್ರೇಜ್ ಅನ್ನು ಯಾವುದೇ ವಾಹನ ಮುರಿದಿಲ್ಲ. ಈ ಅತ್ಯದ್ಭುತ ವಾಹನದ ಬಗ್ಗೆ ಯಾರಿಗೂ ತಿಳಿಯದ ಮಾಹಿತಿಯನ್ನು ಈ ಲೇಖದಲ್ಲಿ ನೀಡಿದ್ದೇವೆ.

ಈ ಹಿಂದೆ, ಹೀರೋ ಮೋಟೊಕಾರ್ಪ್ ಜಪಾನಿನ ವಾಹನ ತಯಾರಕ ಹೋಂಡಾ ಸಹಯೋಗದಲ್ಲಿತ್ತು ಎಂಬುದು ನಮಗೆಲ್ಲರಿಗೂ ನೆನಪಿದೆ. ಈ ಎರಡೂ ಬ್ರಾಂಡ್‌ಗಳ ಪಾಲುದಾರಿಕೆಯಲ್ಲಿ 1994 ರಲ್ಲಿ ಸ್ಪ್ಲೆಂಡರ್ ಬಿಡುಗಡೆಯಾಗಿತ್ತು. ಕಡಿಮೆ ಮೇಂಟೆನನ್ಸ್ ಮತ್ತು ಹೆಚ್ಚಿನ ಮೈಲೇಜ್ ಈ ಬೈಕ್ ಅನ್ನು ಶೀಘ್ರವಾಗಿ ಮಾರುಕಟ್ಟೆ ನಾಯಕನನ್ನಾಗಿ ಮಾಡಿತು. ಭಾರತೀಯ ಗ್ರಾಹಕರನ್ನು ಸ್ಕೂಟರ್‌ಗಳಿಂದ ಬೈಕ್‌ಗಳಿಗೆ ಬದಲಾಯಿಸುವಂತೆ ಮಾಡಿತು.

hero-splendor-mileage-price-features-details

ಆಗಿನ ಕಾಲಕ್ಕೆ ಈ ಬೈಕ್ 97.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಎಂಜಿನ್ ಹೊಂದಿತ್ತು. ಇದು 7.44 ಬಿಹೆಚ್ ಪವರ್ ಮತ್ತು 7.95 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. 50 ಕಿ.ಮೀ.ಗಿಂತ ಹೆಚ್ಚಿನ ಮೈಲೇಜ್ ನೀಡುವುದಾಗಿ ಅಂದಿನ ಸ್ಪ್ಲೆಂಡರ್ ಮಾಲೀಕರು ಇಂದಿಗೂ ಹೇಳುತ್ತಾರೆ. ಬಿಡುಗಡೆಯಾದ 10 ವರ್ಷಗಳ ನಂತರ, ಸ್ಪ್ಲೆಂಡರ್ ಅನ್ನು ನವೀಕರಿಸಿ, ಸ್ಪ್ಲೆಂಡರ್ ಪ್ಲಸ್ ಅನ್ನು ಪರಿಚಯಿಸಲಾಯಿತು. ಮತ್ತೇ 2005 ರಲ್ಲಿ ಪವರ್‌ ಹೆಚ್ಚಿಸಿ ಸ್ಪ್ಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಆಗ ಹೊಸ ಬೈಕ್ 125 ಸಿಸಿ ಅಡ್ವಾನ್ಸ್ಡ್ ಸ್ವಿರ್ಲ್ ಫ್ಲೋ ಇಂಡಕ್ಷನ್ ಸಿಸ್ಟಮ್ (ಎಎಸ್ಎಫ್ಎಸ್) ಎಂಜಿನ್‌ನೊಂದಿಗೆ ಬಿಡುಗಡೆಯಾಯಿತು. ಹೀರೋ ಮತ್ತು ಹೋಂಡಾ ಸಹಯೋಗದಲ್ಲಿ ಬಂದ ಕೊನೆಯ ಸ್ಪ್ಲೆಂಡರ್ ಇದಾಗಿತ್ತು. ಈ ಜಂಟಿ ಉದ್ಯಮವನ್ನು 2010 ರಲ್ಲಿ ನಿಲ್ಲಿಸಲಾಯಿತು. ಆದರೆ ಒಪ್ಪಂದದ ಅಡಿಯಲ್ಲಿ ಹೋಂಡಾ 2014 ರವರೆಗೆ ತಾಂತ್ರಿಕವಾಗಿ ಹೀರೋವನ್ನು ಬೆಂಬಲಿಸಬೇಕಾಗಿತ್ತು. ಈ ಸಮಯದಲ್ಲಿ ಸ್ಪ್ಲೆಂಡರ್ ಪ್ರೊವನ್ನು ಬಿಡುಗಡೆ ಮಾಡಲಾಯಿತು.

hero-splendor-mileage-price-features-details

2014 ರ ಬಳಿಕ ಹೀರೋ ತನ್ನಷ್ಟಕ್ಕೆ ತಾನೇ ಸ್ಪ್ಲೆಂಡರ್ ಬೈಕ್‌ನ್ನು ಮುಂದುವರಿಸುವುದನ್ನು ಪ್ರಾರಂಭಿಸಿ, ಪ್ರಸ್ತುತ ಹೀರೋ ಸ್ಪ್ಲೆಂಡರ್ ಅನ್ನು ಹಲವು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದೆ. ಸದ್ಯ ಸ್ಪ್ಲೆಂಡರ್ ಪ್ಲಸ್ ಸ್ಟ್ಯಾಂಡರ್ಡ್, ಐ3ಎಸ್, ಐ3ಎಸ್, ಬ್ಲ್ಯಾಕ್ & ಅಕ್ಸೆಂಟ್ ಮತ್ತು ಐ3ಎಸ್, ಮ್ಯಾಟ್ ಆಕ್ಸಿಸ್ ಗ್ರೇ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೆಲೆಯು ರೂ.75,441 ರಿಂದ ಆರಂಭವಾಗಿ ರೂ.78,286 (ಎಕ್ಸ್‌ ಶೋರೂಂ) ಗಳವರೆಗೆ ಇದೆ.

ಮೈಲೇಜ್ ಕಿಂಗ್: ಪರೀಕ್ಷೆಗಳಲ್ಲಿ ಸ್ಪ್ಲೆಂಡರ್ ಪ್ಲಸ್ ನಗರದಲ್ಲಿ 83.2 ಕಿ.ಮೀ ಮತ್ತು ಹೆದ್ದಾರಿಯಲ್ಲಿ 95.8 ಕಿ.ಮೀ ಮೈಲೇಜ್ ನೀಡಿರುವುದಾಗಿ ಹಲವು ವರದಿಗಳು ಹೇಳಿವೆ. 9.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದೊಂದಿಗೆ, ನೀವು ಪೂರ್ಣ ಟ್ಯಾಂಕ್‌ನಲ್ಲಿ ಬರೋಬ್ಬರಿ 800 ಕಿ.ಮೀ ಪ್ರಯಾಣಿಸಬಹುದು. ಇದೇ ಕಾರಣಕ್ಕೆ ಹೀರೋ ಸ್ಪ್ಲೆಂಡರ್ ಪ್ಲಸ್ ಅನ್ನು ಇನ್ಯಾವುದೇ ವಾಹನ ಸೋಲಿಸಲಾಗಿಲ್ಲ. ವಿಶ್ವಾಸಾರ್ಹತೆ, ಕಾರ್ಯಕ್ಷಮತೆ, ಉತ್ತಮ ಮೈಲೇಜ್, ಆರಾಮದಾಯಕ ಸವಾರಿಯಿಂದ ತುಂಬಾ ಪ್ರಸಿದ್ಧವಾಗಿದೆ.

hero-splendor-mileage-price-features-details

ಖರೀದಿಸಲು ಯೋಗ್ಯವಾಗಿದೆಯೇ?: ಸ್ಪ್ಲೆಂಡರ್ ಪ್ಲಸ್ ಸಂಪೂರ್ಣವಾಗಿ ಖರೀದಿಸಲು ಯೋಗ್ಯವಾಗಿದೆ. ಆರಾಮದಾಯಕ ಸವಾರಿ ಅನುಭವ, ಯೋಗ್ಯವಾದ ವೈಶಿಷ್ಟ್ಯಗಳು, ಅದ್ಭುತ ಮೈಲೇಜ್ ಹೊಂದಿದೆ. ಆದ್ದರಿಂದ ನೀವು ವಿಶ್ವಾಸಾರ್ಹ 110 ಸಿಸಿ ಕಮ್ಯೂಟರ್ ಬೈಕ್ ಖರೀದಿಸಲು ಬಯಸಿದರೆ, ಸ್ಪ್ಲೆಂಡರ್ ಪ್ಲಸ್ ನಿಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು ಎಂಬುದು ನಮ್ಮ ಅಭಿಪ್ರಾಯ.

ಮಾರುಕಟ್ಟೆಯಲ್ಲಿ ಒಂದು ಬೈಕ್ ಹತ್ತು ವರ್ಷಗಳು ಇರುವುದೇ ಕಷ್ಟವಾದ ಇಂದಿನ ಪರಿಸ್ಥಿತಿಗಳಲ್ಲಿ ಸ್ಪ್ಲೆಂಡರ್ ಬರೋಬ್ಬರಿ ಮೂರು ದಶಕಗಳು ಯಶಸ್ವಿಯಾಗಿ ಮಾರಾಟವಾಗಿದೆ. ಈ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗೆ ಸದ್ಯ ಹೋಂಡಾ ಸಿಡಿ 110 ಡ್ರೀಮ್, ಬಜಾಜ್ ಸಿಟಿ 110ಎಕ್ಸ್, ಹೋಂಡಾ ಶೈನ್ 100, ಟಿವಿಎಸ್ ರೇಡಿಯನ್, ಟಿವಿಎಸ್ ಸ್ಪೋರ್ಟ್ ಬೈಕುಗಳು ಪ್ರತಿಸ್ಪರ್ಧಿಗಳಾಗಿವೆ.

More from DriveSpark

Article Published On: Saturday, November 9, 2024, 13:00 [IST]
English summary
Hero splendor mileage price features details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+