80km ಮೈಲೇಜ್ ಕೊಡುವ ಹೀರೋ ಕಂಪನಿಯ ಈ ಬೈಕ್‌ನ EMI ಕೇವಲ 2,292 ರೂ!
ಭಾರತದಲ್ಲಿ ಹೀರೋ ಬೈಕ್‌ಗಳೆಂದರೆ ಅದೊಂದು ರೀತಿಯ ಎಮೋಷನ್. ಅದರಲ್ಲೂ ೯೦ರ ದಶಕದ ಯುವಕರಂತೂ ಈ ಕಂಪನಿಯು ಬೈಕ್ ಅನ್ನು ನೋಡುತ್ತಾ ಬೆಳೆದವರು. ಹೀರೋ ಕಂಪನಿಯ ಅತ್ಯಂತ ಪ್ರಸಿದ್ದ ಬೈಕ್‌ಗಳಲ್ಲಿ ಸ್ಪ್ಲೆಂಡರ್ ಪ್ಲಸ್ ಪ್ರಮುಖವಾದುದು. ಸಿಂಪಲ್ ಡಿಸೈನ್ ಮತ್ತು ಉತ್ತಮ ಬಾಳಿಕೆ, ಅಧಿಕ ಮೈಲೇಜ್ ಹೊಂದಿರುವ ಈ ಬೈಕ್‌ನ ಇಎಂಐ ಡೌನ್ ಪೇಮೆಂಟ್ ಮತ್ತು ಇತರ ವಿಷಯಗಳನ್ನು ನೋಡೋಣ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ನ ಎಕ್ಸ್ ಶೋ ರೂಮ್ ಬೆಲೆಯನ್ನು ನೋಡುವುದಾದರೆ 75,191 ರೂಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್ ನೋಡುವುದಾದರೆ ಅದು ಸುಮಾರು 10,014 ರೂಪಾಯಿಗಳಷ್ಟು ಬರುತ್ತದೆ. ಈ ಬೈಕ್‌ನ ಇನ್ಸ್ಯುರೆನ್ಸ್ ಸುಮಾರು 6,145 ರೂಗಳು.
ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಸ್ಪ್ಲೆಂಡರ್ ಪ್ಲಸ್ ಬೆಲೆ ಸುಮಾರು 91,350 ರೂಗಳಷ್ಟಾಗುತ್ತದೆ. ಇನ್ನು ಈ ಬೈಕ್‌ನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 20000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೩ ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 2,292 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

ಇನ್ನು ಈ ಬೈಕ್‌ನ ಎಂಜಿನ್ ಬಗ್ಗೆ ನೋಡಿದರೆ, ಈ ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 80.6 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಈ ಬೈಕ್‌ನ ಬೆಲೆಯ ಆಸುಪಾಸಿನಲ್ಲಿ ಸಿಗುವ ಇತರ ಹೀರೋ ಕಂಪನಿಯ ಬೈಕ್‌ಗಳನ್ನು ನೋಡುವುದಾದರೆ, ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟ್ರಿಮ್ (Hero Splendor Plus XTEC) ಬೈಕ್, ಬರೋಬ್ಬರಿ ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.02 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, 83.2 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಈ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟ್ರಿಮ್ ಮಾದರಿ (ಮಾಡೆಲ್) ಕೂಡ ಹಲವು ಅತ್ಯಾಕರ್ಷಕ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಅಲಾಯ್ ವೀಲ್ಸ್, ಐಡಲ್ ಸ್ಟಾಪ್/ ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ವಿವಿಧಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 112 ಕೆಜಿ ತೂಕವಿರುವ ಈ ಮೋಟಾರ್‌ಸೈಕಲ್, 9.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor), ರೂ.80,798 ದಿಂದ ರೂ.86,298 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜರ್ ಹಾಗೂ 18-ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, 10-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಈ ಹೀರೋ ಸೂಪರ್ ಸ್ಪ್ಲೆಂಡರ್, 124.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 10.8 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 55 ಕೆಎಂಪಿಎಲ್ ವರೆಗೆ ಮೈಲೇಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತಂಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ ಗಳನ್ನು ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








