Hero: ಮಧ್ಯಮ ವರ್ಗದವರಿಗಾಗಿ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಬೈಕ್ ಬಿಡುಗಡೆ.. ಬೆಲೆ ಎಷ್ಟು?

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯು ಮಾರಾಟಗೊಳಿಸುವ ಬೈಕ್‌ಗಳು ದಶಕಗಳಿಂದ ಮಧ್ಯಮ ವರ್ಗದವರ ಮನಸ್ಸನ್ನು ಗೆದ್ದಿವೆ. ಅದರಲ್ಲೂ 'ಹೀರೋ ಸ್ಪ್ಲೆಂಡರ್' ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?.. ಈ ಮೋಟಾರ್‌ಸೈಕಲ್‌ನ್ನು ಪ್ರತಿಯೊಂದು ಹಳ್ಳಿಯಲ್ಲಿಯೂ ನೋಡಬಹುದಾಗಿದೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ 30 ವರ್ಷಗಳು ಕಳೆದಿದ್ದು, ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ಸ್ಪ್ಲೆಂಡರ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ನೂತನ ಬೈಕ್ ಕೈಗೆಟುಕುವ ಬೆಲೆಯೊಂದಿಗೆ ದೊರೆಯಲಿದ್ದು, ಗರಿಷ್ಠ ಮೈಲೇಜ್ ಕೂಡ ನೀಡಲಿದೆ.

ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 (Hero Splendor Plus Xtec 2.0) ಮೋಟಾರ್‌ಸೈಕಲ್‌ ರೂ.82,911 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದ್ದು, ಸಾಮಾನ್ಯ ಸ್ಪ್ಲೆಂಡರ್ ಎಕ್ಸ್‌ಟೆಕ್ ಮಾದರಿಗಿಂತ ರೂ.3,000 ಹೆಚ್ಚಿನ ದರವನ್ನು ಪಡೆದಿದೆ. ಈ ಬೈಕ್ ಅತ್ಯಾಧುನಿಕ ವಿನ್ಯಾಸ (ಡಿಸೈನ್)ವನ್ನು ಹೊಂದಿದ್ದು, ಎಲ್ಇಡಿ ಹೆಡ್‌ಲೈಟ್, 'ಹೆಚ್' ಆಕಾರದ ಎಲ್ಇಡಿ ಟೈಲ್ಯಾಂಪ್‌ನ್ನು ಒಳಗೊಂಡಿದೆ. ಜೊತೆಗೆ ಮ್ಯಾಟ್ ಗ್ರೇ, ಗ್ಲೋಸ್ ಬ್ಲ್ಯಾಕ್ ಮತ್ತು ಗ್ಲೋಸ್ ರೆಡ್ ಎಂಬ ನವೀನ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Hero Splendor Plus XTEC 2 0 Launched In India Rs 82 911 Price 73 Km Mileage

ಈ ಹೊಚ್ಚ ಹೊಸ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಇಕೋ-ಇಂಡಿಕೇಟರ್, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಸರ್ವೀಸ್ ರಿಮೈಂಡರ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ ಕುರಿತಂತೆ ಮಾಹಿತಿಯನ್ನು ತೋರಿಸಲು ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಒಳಗೊಂಡಿದೆ. ಇದಲ್ಲದೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ 2.0 ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು 100 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.09 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 8.05 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 4 ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, 73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರಸ್ತುತ ದೇಶೀಯವಾಗಿ ಸ್ಪ್ಲೆಂಡರ್ ಸರಣಿ ವಿವಿಧ ಮೋಟಾರ್‌ಸೈಕಲ್‌ಗಳು ಗ್ರಾಹಕರಿಗೆ ಸಿಗುತ್ತವೆ. ಅವುಗಳಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿದ್ದು, ರೂ.75,191 ದಿಂದ ರೂ.76,396 ಎಕ್ಸ್ ಶೋರೂಂ ದರಕ್ಕೆ ಮನೆಗೆ ತರಬಹುದು. 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 80.6 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಹೀರೋ ಸೂಪರ್ ಸ್ಪ್ಲೆಂಡರ್ ರೂ.80,798 ದಿಂದ ರೂ.86,298 ಎಕ್ಸ್ ಶೋರೂಂ ದರವನ್ನು ಹೊಂದಿದೆ. 124.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಪಡೆದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌‍ಬಿ ಚಾರ್ಜರ್ ಹಾಗೂ 18-ಇಂಚಿನ ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ರೂ.85,628 ದಿಂದ ರೂ.89,628 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 10.8 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 68 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 31, 2024, 12:54 [IST]
English summary
Hero splendor plus xtec 2 0 launched in india rs 82911 price 73 km mileage
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+