ತಿಂಗಳಾರಂಭದಲ್ಲಿ ಬಿಡುಗಡೆಯಾದವು ಸ್ಪ್ಲೆಂಡರ್ & ಚೇತಕ್.. 83,461 ಆರಂಭಿಕ ಬೆಲೆ, ಏನಿದೆ ವೈಶಿಷ್ಟ್ಯಗಳು!

ಭಾರತದ ಮಧ್ಯಮ ವರ್ಗದ ಜನರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ದಿನಬಳಕೆಗಾಗಿ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ದೇಶೀಯ ಮಾರುಕಟ್ಟೆಯಲ್ಲಿ ಈ ತಿಂಗಳಾರಂಭದಲ್ಲಿ ವಿವಿಧ ದ್ವಿಚಕ್ರ ವಾಹನಗಳು ಮಾರಾಟಕ್ಕೆ ಬಂದಿದ್ದವು. ಪ್ರಮುಖವಾಗಿ ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್‌ನೊಂದಿಗೆ ನವೀಕರಣಗೊಂಡಿರುವ ಹೀರೋ ಸ್ಪ್ಲೆಂಡರ್ (Hero Splendor) ಹಾಗೂ ಬಜಾಜ್‌ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನ 'ಬ್ಲೂ 3202' ರೂಪಾಂತರ ಬಿಡುಗಡೆಯಾಗಿವೆ. ಬನ್ನಿ.. ಈ ನೂತನ ದ್ವಿಚಕ್ರ ವಾಹನಗಳ ವಿಶೇಷತೆ ಬಗ್ಗೆ ಸಂಕ್ಷಿಪ್ತವಾದ ವಿವರ ತಿಳಿಯೋಣ.

ಮೊದಲಿಗೆ ಫ್ರಂಟ್ ಡಿಸ್ಕ್ ಬ್ರೇಕ್‌ನೊಂದಿಗೆ ಪರಿಚಯಿಸಿರುವ ಹೀರೋ ಸ್ಪ್ಲೆಂಡರ್ ಬಗ್ಗೆ ಮಾತನಾಡೋಣ. ಈ ವೈಶಿಷ್ಟ್ಯವು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Splendor Plus XTEC) ರೂಪಾಂತರದಲ್ಲಿ (ವೇರಿಯೆಂಟ್) ಮಾತ್ರ ದೊರೆಯಲಿದ್ದು, ರೂ.83,461 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

Hero Splendor Plus XTEC Disc Brake Model And Bajaj Chetak Blue 3202 Came Indian Market recent Details

ಈ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್ ಬ್ಲ್ಯಾಕ್ ಸ್ಪಾರ್ಕ್ಲಿಂಗ್ ಬ್ಲೂ, ಬ್ಲ್ಯಾಕ್ ಟೊರ್ನಾಡೋ ಗ್ರೇ ಹಾಗೂ ಬ್ಲ್ಯಾಕ್ ರೆಡ್ ಎಂಬ 3 ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದೆ. ಎಲ್ಇಡಿ ಹೆಡ್‌ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐ3ಎಸ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್. ಬೈಕ್ ಸೈಡ್-ಸ್ಟ್ಯಾಂಡ್ ಕಟ್-ಆಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮುಂಭಾಗ (ಫ್ರಂಟ್) 240 ಎಂಎಂ ಡಿಸ್ಕ್ ಬ್ರೇಕ್‌ ಮತ್ತು ಹಿಂಭಾಗ (ರೇರ್) 130 ಡ್ರಮ್ ಬ್ರೇಕ್ ಆಯ್ಕೆವನ್ನು ಹೊಂದಿದೆ. ಬರೋಬ್ಬರಿ 113.6 ಕೆಜಿ ತೂಕವಿದೆ. ಸಸ್ಪೆನ್ಷನ್ ಸೆಟಪ್ ಕುರಿತಂತೆ ಹೇಳುವುದಾದರೆ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂದೆ (ರೇರ್) 5-ಸ್ಟೆಪ್ ಅಡ್ಜಸ್ಟಬಲ್ ಡುಯಲ್ ಶಾಕ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ.

Hero Splendor Plus XTEC Disc Brake Model And Bajaj Chetak Blue 3202 Came Indian Market recent Details

ಹೊಸ ಬಜಾಜ್ ಚೇತಕ್ ಬ್ಲೂ 3202 (Bajaj Chetak Blue 3202) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಮಾರಾಟಕ್ಕೆ ಬಂದಿದ್ದು, ರೂ.1.15 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 3.2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 5.3 ಬಿಹೆಚ್‍ಪಿ ಗರಿಷ್ಠ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 16 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ.

ಈ ಬಜಾಜ್ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್, ಸಂಪೂರ್ಣ ಚಾರ್ಜ್‌ನಲ್ಲಿ 137 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಜೊತೆಗೆ ಇದರಲ್ಲಿರುವ ಬ್ಯಾಟರಿ ಪ್ಯಾಕ್ 5 ಗಂಟೆ 50 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿಬಿಡುತ್ತದೆ.

ನೂತನ ಚೇತಕ್ ಬ್ಲೂ 3202 ಎಲೆಕ್ಟ್ರಿಕ್ ಸ್ಕೂಟರ್ ಇಕೋ ರೈಡಿಂಗ್ ಮೋಡ್‌ನ್ನು ಹೊಂದಿದೆ. ಡಿಜಿಟಲ್ ಕನ್ಸೋಲ್, ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿನಿಂದ ಡಿಸ್ಕ್, ಡ್ರಮ್ ಬ್ರೇಕ್‌ನ್ನು ಹೊಂದಿದೆ. ಬ್ರೂಕ್ಲಿನ್ ಬ್ಲ್ಯಾಕ್, ಸೈಬರ್ ವೈಟ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, September 15, 2024, 12:00 [IST]
English summary
Hero splendor plus xtec disc brake model bajaj chetak blue 3202 came indian market recent details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+