Hero: ಹೊಸ ಫೀಚರ್‌ನೊಂದಿಗೆ ಬಂದ ಹೀರೋ ಸ್ಪ್ಲೆಂಡರ್ ಕುರಿತ ಪ್ರಮುಖಾಂಶಗಳು.. 83,000 ಬೆಲೆ

ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಖರೀದಿದಾರರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ಹೀರೋ ಕಂಪನಿ ಬುಧವಾರ ಹೊಸ ವೈಶಿಷ್ಟ್ಯ (ಫೀಚರ್‌) ಹೊಂದಿರುವ ನೂತನ ಸ್ಪ್ಲೆಂಡರ್ (Splendor) ಬೈಕ್‌ನ್ನು ಮಾರಾಟಕ್ಕೆ ತಂದಿತ್ತು. ಇಲ್ಲಿ ಹೊಸ ಮೋಟಾರ್‌ಸೈಕಲ್‌ನ ಬೆಲೆ ಹಾಗೂ ವಿಶೇಷತೆ ಕುರಿತ ಪ್ರಮುಖಾಂಶಗಳನ್ನು ವಿವರಿಸಿದ್ದೇವೆ.

ಬೆಲೆ: ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್‌ನೊಂದಿಗೆ ನವೀಕರಣಗೊಂಡಿರುವ ಸ್ಪ್ಲೆಂಡರ್, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.83,461 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಈ ಡಿಸ್ಕ್ ಬ್ರೇಕ್‌ ವೈಶಿಷ್ಟ್ಯವು ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Splendor Plus XTEC) ರೂಪಾಂತರದಲ್ಲಿ (ವೇರಿಯೆಂಟ್) ಮಾತ್ರ ಲಭ್ಯವಿದೆ.

Hero Splendor Plus XTEC Disc Brake Variant Top Things Rs 83 461 Price

ಕಾರ್ಯಕ್ಷಮತೆ: ಈ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್, 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 7.9 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಬಣ್ಣಗಳು, ವೈಶಿಷ್ಟ್ಯಗಳು: ನೂತನ ಮೋಟಾರ್‌ಸೈಕಲ್‌ ಬ್ಲ್ಯಾಕ್ ಸ್ಪಾರ್ಕ್ಲಿಂಗ್ ಬ್ಲೂ, ಬ್ಲ್ಯಾಕ್ ಟೊರ್ನಾಡೋ ಗ್ರೇ ಮತ್ತು ಬ್ಲ್ಯಾಕ್ ರೆಡ್ ಎಂಬ 3 ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐ3ಎಸ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್. ಬೈಕ್ ಸೈಡ್-ಸ್ಟ್ಯಾಂಡ್ ಕಟ್-ಆಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Hero Splendor Plus XTEC Disc Brake Variant Top Things Rs 83 461 Price

ಬ್ರೇಕಿಂಗ್ ಸಿಸ್ಟಮ್ & ಸಸ್ಪೆನ್ಷನ್ ಸೆಟಪ್: ಹೀರೋ ಸ್ಪ್ಲೆಂಡರ್ ಪ್ಲಸ್ ಮುಂಭಾಗ (ಫ್ರಂಟ್) 240 ಎಂಎಂ ಡಿಸ್ಕ್ ಬ್ರೇಕ್‌ನೊಂದಿಗೆ ಹಿಂಭಾಗ (ರೇರ್) 130 ಡ್ರಮ್ ಬ್ರೇಕ್ ಸಿಸ್ಟಮ್ ಪಡೆದಿದೆ. ಇದರೊಟ್ಟಿಗೆ ಐಬಿಎಸ್ (ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ. ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂದೆ (ರೇರ್) 5-ಸ್ಟೆಪ್ ಅಡ್ಜಸ್ಟಬಲ್ ಡುಯಲ್ ಶಾಕ್‌ ಸಸ್ಪೆನ್ಷನ್ ಸೆಟಪ್ ಹೊಂದಿದೆ.

ಹೊಸ ಬಣ್ಣದೊಂದಿಗೆ ಹೀರೋ ಗ್ಲಾಮರ್ ಸಹ ಖರೀದಿಗೆ ಲಭ್ಯ: ಈ ಬೈಕ್‌ನ್ನು 'ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್' ಎಂಬ ಅತ್ಯಾಕರ್ಷಕ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಈ ನೂತನ ಬಣ್ಣವನ್ನು ಹೊಂದಿರುವ ಡ್ರಮ್ ಬ್ರೇಕ್ ರೂಪಾಂತರ ರೂ.83,598 ಮತ್ತು ಡಿಸ್ಕ್ ಬ್ರೇಕ್ ರೂಪಾಂತರ ರೂ.87,598 (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಹೀರೋ ಗ್ಲಾಮರ್ ಮೋಟಾರ್‌ಸೈಕಲ್‌ 124.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಎಲ್ಇಡಿ ಹೆಡ್‌ಲೈಟ್‌, ಡಿಜಿಟಲ್ ಇನ್‌ಸ್ಟ್ರುಮೆಂಟೇಶನ್ ಸ್ಕ್ರೀನ್, ಸ್ಮಾರ್ಟ್‌ಫೋನ್ ಚಾರ್ಜಿಂಗ್ ಪೋರ್ಟ್, ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, September 8, 2024, 13:00 [IST]
English summary
Hero splendor plus xtec disc brake variant top things rs 83461 price
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+