Hero Splendor: ಮೊದಲ ಬಾರಿಗೆ ಹೊಸ ಫೀಚರ್‌ನೊಂದಿಗೆ ಹೀರೋ ಸ್ಪ್ಲೆಂಡರ್ ಬಿಡುಗಡೆ.. ಅತ್ಯಂತ ಕಡಿಮೆ ಬೆಲೆ!
ದೇಶದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಹಳ್ಳಿಯಿಂದ ದಿಲ್ಲಿವರೆಗೆ ಹಲವು ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಜನರ ಮನಸ್ಸನ್ನು ಗೆದ್ದಿವೆ. ಹೀರೋ ಕಂಪನಿ ಬುಧವಾರ ಹೊಸ ವೈಶಿಷ್ಟ್ಯ (ಫೀಚರ್) ಹೊಂದಿರುವ ನೂತನ ಸ್ಪ್ಲೆಂಡರ್ (Splendor) ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಹೀರೋ ಮೋಟೋಕಾರ್ಪ್, ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಸ್ಪ್ಲೆಂಡರ್ ಬೈಕ್‌ನ್ನು ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್‌ನೊಂದಿಗೆ ನವೀಕರಿಸಿದೆ. ಇದು ಸ್ಪ್ಲೆಂಡರ್ ಮಾರಾಟಕ್ಕೆ ಬಂದು 30 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಪಡೆದುಕೊಂಡಿರುವ ನೂತನ ಬ್ರೇಕಿಂಗ್ ಸೆಟಪ್ ಆಗಿದೆ. ಡಿಸ್ಕ್ ಬ್ರೇಕ್ ವೈಶಿಷ್ಟ್ಯ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Splendor Plus XTEC) ರೂಪಾಂತರದಲ್ಲಿ (Variant) ಮಾತ್ರ ಲಭ್ಯವಿದ್ದು, ರೂ.83,461 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ.

ಈ ದರವು ಡ್ರಮ್ ಬ್ರೇಕ್ (Drum Brake) ರೂಪಾಂತರಕ್ಕಿಂತ ರೂ.3,550 ಅಧಿಕವಾಗಿದೆ. ಆದಾಗ್ಯೂ ಡಿಸ್ಕ್ ಬ್ರೇಕ್‌ನೊಂದಿಗೆ ಖರೀದಿಗೆ ದೊರೆಯುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಪವರ್‌ಟ್ರೈನ್‌ನಲ್ಲಿ ಯಾವುದೇ ಬದಲಾವಣಿಗಳನ್ನು ಮಾಡಿಲ್ಲ. ಈ ಬೈಕ್, 97.2 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.9 ಬಿಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ನೂತನ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮುಂಭಾಗ (ಫ್ರಂಟ್) 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿರುವುದರಿಂದ ಡ್ರಮ್ ಬ್ರೇಕ್ ರೂಪಾಂತರಕ್ಕೆ ಹೋಲಿಕೆ ಮಾಡಿದರೆ, 1.6 ಕೆಜಿ ಹೆಚ್ಚುವರಿ ತೂಕವನ್ನು ಹೊಂದಿದೆ. ಬರೋಬ್ಬರಿ 113.6 ಕೆಜಿಯಿದೆ. ಹಿಂಭಾಗ (ರೇರ್) 130 ಡ್ರಮ್ ಬ್ರೇಕ್ ಸಿಸ್ಟಮ್ ಪಡೆದಿದೆ. ಜೊತೆಗೆ ಐಬಿಎಸ್ (ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್) ಕೂಡ ಇದೆ.

ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂದೆ (ರೇರ್) 5-ಸ್ಟೆಪ್ ಅಡ್ಜಸ್ಟಬಲ್ ಡುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಬ್ಲ್ಯಾಕ್ ಸ್ಪಾರ್ಕ್ಲಿಂಗ್ ಬ್ಲೂ, ಬ್ಲ್ಯಾಕ್ ಟೊರ್ನಾಡೊ ಗ್ರೇ ಹಾಗೂ ಬ್ಲ್ಯಾಕ್ ರೆಡ್ ಎಂಬ 3 ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus XTEC) ಮೋಟಾರ್‌ಸೈಕಲ್, ಎಲ್ಇಡಿ ಹೆಡ್‌ಲ್ಯಾಂಪ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಐ3ಎಸ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್. ಬೈಕ್ ಸೈಡ್-ಸ್ಟ್ಯಾಂಡ್ ಕಟ್-ಆಫ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದೆ.

ಕೆಲವೇ ದಿನಗಳ ಹಿಂದೆ, ಹೊಸ ಬಣ್ಣದೊಂದಿಗೆ ಹೀರೋ ಗ್ಲಾಮರ್ (Hero Glamour) ಮೋಟಾರ್‌ಸೈಕಲ್‌ನ್ನು ಪರಿಚಯಿಸಲಾಗಿತ್ತು. ಇದು 'ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್' ಎಂಬ ಆಕರ್ಷಕ ಬಣ್ಣದ ಆಯ್ಕೆಯಲ್ಲಿ ಮಾರುಕಟ್ಟೆಗೆ ಬಂದಿದೆ. ಇದರ ಡ್ರಮ್ ಬ್ರೇಕ್ ರೂಪಾಂತರ (ವೇರಿಯೆಂಟ್) ರೂ.83,598 ಹಾಗೂ ಡಿಸ್ಕ್ ಬ್ರೇಕ್ ರೂಪಾಂತರ ರೂ.87,598 ಎಕ್ಸ್ ಶೋರೂಂ ದರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








