Hero: ಪೆಟ್ರೋಲ್‌ಗೆ ಹಾಕಿಸುವ ಚಿಂತೆ ಬೇಡ.. ಈಗಾಗಲೇ ಅಗ್ಗದ ಹೀರೋ ವಿಡಾ ಇ-ಸ್ಕೂಟರ್ ತನ್ನಿರಿ!

ಹೀರೋ ಮೋಟೊಕಾರ್ಪ್ (Hero MotoCorp), ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ನಗರ ಪದೇಶದಿಂದ ಹಿಡಿದು ಹಳ್ಳಿ - ಹಳ್ಳಿಗಳಲ್ಲಿಯೂ ಜನಪ್ರಿಯತೆ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ವಿಡಾ' ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಂಪನಿಯು ಈ ನವೆಂಬರ್‌ನಲ್ಲಿ ಬರೋಬ್ಬರಿ 7,309 ಯುನಿಟ್ ವಿಡಾ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 3047 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 140% ಪ್ರಗತಿಯಾಗಿದೆ.

ನಿಮಗೆ ಪೆಟ್ರೋಲ್ ಹಾಕಿಸಲು ದುಡ್ಡು ಖರ್ಚು ಮಾಡಿ ಬೇಸರವಾಗಿದ್ದು, ದಿನನಿತ್ಯದ ಬಳಕೆಗೆ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಹೀರೋ ವಿಡಾ ವಿ1 & ವಿ2 ಮಾಡೆಲ್‌ಗ‌ಳು ಉತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

Hero Vida V1 And V2 Electric Scooter Models Best For Buy Daily Use Details

ಹೀರೋ ವಿಡಾ ವಿ1 (Hero Vida V1): ಈ ಎಲೆಕ್ಟ್ರಿಕ್ ಸ್ಕೂಟರ್, ವಿ1 ಪ್ಲಸ್ ಮತ್ತು ವಿ1 ಪ್ರೊ ಎಂಬ ರೂಪದಲ್ಲಿ ಖರೀದಿ ಲಭ್ಯವಿದೆ. ರೂ.1.20 ಲಕ್ಷದಿಂದ ರೂ.1.50 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 3.44 & 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 100 ರಿಂದ 110 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.

ಈ ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ 6 ಕೆಡಬ್ಲ್ಯೂ ಎಲೆಕ್ಟ್ರಿಕ್ ಮೋಟರ್ ಒಳಗೊಂಡಿದೆ. 80 ಟಾಪ್ ಸ್ಪೀಡ್‌ನ್ನು ಹೊಂದಿದ್ದು, ಕೇವಲ 3.4 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Hero Vida V1 And V2 Electric Scooter Models Best For Buy Daily Use Details

ಹೀರೋ ವಿಡಾ ವಿ2 (Hero Vida V2): ಈ ಎಲೆಕ್ಟ್ರಿಕ್ ಸ್ಕೂಟರ್ ವಿ2 ಲೈಟ್, ವಿ2 ಪ್ಲಸ್ ಹಾಗೂ ವಿ2 ಪ್ರೊ ಎಂಬ ಮೂರು ವಿಧದಲ್ಲಿ ಖರೀದಿಗೆ ಲಭ್ಯವಿದೆ. ರೂ.96,000 ದಿಂದ ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಶಕ್ತಿಯುತವಾದ 2.2 ಕೆಡಬ್ಲ್ಯೂಹೆಚ್, 3.44 ಕೆಡಬ್ಲ್ಯೂಹೆಚ್ ಮತ್ತು 3.94 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ.

ನೂತನ ಹೀರೋ ವಿಡಾ ವಿ2 ಇ-ಸ್ಕೂಟರ್ ಭರ್ತಿ ಚಾರ್ಜ್‌ನಲ್ಲಿ 94 ರಿಂದ 165 ಕಿಲೋಮೀಟರ್‌ವರೆಗೂ ಓಡುತ್ತದೆ. ಮ್ಯಾಟ್ ನೆಕ್ಸಸ್ ಬ್ಲೂ-ಗ್ರೇ ಹಾಗೂ ಗ್ಲೋಸ್ ಸ್ಪೋರ್ಟ್ಸ್ ರೆಡ್ ಬಣ್ಣಗಳೊಂದಿಗೂ ಸಿಗುತ್ತದೆ. ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (7-ಇಂಚು), ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೀ-ಜೆನ್ ಬ್ರೇಕಿಂಗ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು, ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಸಾಕಷ್ಟು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಬಹುತೇಕರ ಆಯ್ಕೆಯ ದ್ವಿಚಕ್ರ ವಾಹನವಾಗುವುದರಲ್ಲಿ ಎರಡು ಮಾತಿಲ್ಲ. ಕೆಲವೇ ದಿನಗಳ ಹಿಂದೆ ಕಂಪನಿಯು 'ವಿಡಾ ವಿ1' ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಸ್ಟಾಕ್ ಖಾಲಿ ಇರುವವರೆಗೂ ಮಾತ್ರ ಈ ಸ್ಕೂಟರ್ ಖರೀದಿಗೆ ದೊರೆಯಲಿದೆ ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 20, 2024, 15:14 [IST]
English summary
Hero vida v1 and v2 electric scooter models best for buy daily use details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+