ಅತ್ಯಂತ ಕಡಿಮೆ ಬೆಲೆ ಹೀರೋ ಎಕ್ಸ್‌ಪಲ್ಸ್ ಡಾಕರ್ ಎಡಿಷನ್ ಬೈಕ್ ವಿಶೇಷತೆಗಳು
ಹೀರೋ ಮೋಟೋಕಾರ್ಪ್ (Hero MotoCorp) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಮಹಾನಗರಗಳಿಂದ ಹಿಡಿದು ಹಳ್ಳಿಗಳವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.67 ಲಕ್ಷವಾಗಿದೆ. ಈ ಹೊಸ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಇಂದಿನಿಂದ ಪ್ರಾರಂಭವಾಗಲಿದೆ.
ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ (Hero Xpulse 200 4V Pro Dakar Edition) ಎಂಬ ಸ್ಪೆಷಲ್ ಎಡಿಷನ್ ಬೆಲೆಯು ಪ್ರೊ ಆವೃತ್ತಿಗಿಂತ ರೂ.3,000 ಹೆಚ್ಚು ಬೆಲೆಯನ್ನು ಹೊಂದಿದೆ. ಈ ಹೊಸ ಮಾದರಿಯು ಎಕ್ಸ್‌ಪಲ್ಸ್ 200 4ವಿ ಪ್ರೊ ಆವೃತ್ತಿಯನ್ನು ಆಧರಿಸಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಮಾದರಿಯು ಡಾಕರ್-ಪ್ರೇರಿತ ಲೈವರಿ ಸೇರಿದಂತೆ ಹಲವಾರು ನವೀಕರಣಗಳೊಂದಿಗೆ ಬರುತ್ತದೆ.

ವಿನ್ಯಾಸ: ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಆವೃತ್ತಿಯು ಪ್ರೊ ರೂಪಾಂತರವನ್ನು ಆಧರಿಸಿದೆ ಮತ್ತು ಅದೇ ಮೆಕ್ಯಾನಿಕಲ್‌ಗಳನ್ನು ಹೊಂದಿದೆ. ಹೊಸ ಸ್ಪೆಷಲ್ ಡಾಕರ್ ಎಡಿಷನ್ ಮಾದರಿಯಲ್ಲಿ ಫ್ಯೂಯಲ್ ಟ್ಯಾಂಕ್‌ನಲ್ಲಿ ಹೊಸ ಡಾಕರ್ ಲೋಗೋ, ಬೈಕ್ ಡ್ಯೂನ್ ಬಶಿಂಗ್‌ನ ಸಿಲೂಯೆಟ್ ಮತ್ತು ಸ್ಟೋರೇಜ್ ಅಂಶಗಳು ಹೆಚ್ಚಿದೆ. ಇನ್ನು ಈ ಡಾಕರ್ ಎಡಿಷನ್ ಆವೃತ್ತಿಯಲ್ಲಿ ಸೈಡ್ ಮತ್ತು ಟೈಲ್ ಪ್ಯಾನೆಲ್‌ಗಳಲ್ಲಿ ಹೊಸ ಗ್ರಾಫಿಕ್ಸ್ ಇವೆ.
ಸಸ್ಪೆಕ್ಷನ್ ಮತ್ತು ರೈಡಿಂಗ್ ಮೋಡ್: ಈ ಹೊಸ ಬೈಕಿನಲ್ಲಿ ರೋಡ್. ಆಫ್-ರೋಡ್ ಮತ್ತು ರ್ಯಾಲಿ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನ ಹೆಚ್ಚಿನ ಸುರಕ್ಷತೆಗಾಗಿ ಎಬಿಎಸ್‌ನೊಂದಿಗೆ ಬರುತ್ತಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ 250 ಎಂಎಂ ಟ್ರ್ಯಾವೆಲ್ ನೊಂದಿಗೆ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸಸ್ಪೆನ್ಶನ್ ಅನ್ನು ಪಡೆಯುತ್ತದೆ, ಆದರೆ ಗ್ರೌಂಡ್ ಕ್ಲಿಯರೆನ್ಸ್ 270 ಎಂಎಂ ಆಗಿದೆ.

ಎಂಜಿನ್: ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಆವೃತ್ತಿಯು 199.6cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500rpm ನಲ್ಲಿ 18.9 bhp ಪವರ್ ಮತ್ತು 6,500rpm ನಲ್ಲಿ 17.35 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
ಫೀಚರ್ಸ್: ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ನಲ್ಲಿ ಇತರ ಹೊಸ ಫೀಚರ್ಸ್ ಗಳು ರ್ಯಾಲಿ-ಶೈಲಿಯ ವಿಂಡ್‌ಶೀಲ್ಡ್, ಹೊಸ ಕ್ಲೋಸ್ಡ್-ಲೂಪ್ ನಕಲ್ ಗಾರ್ಡ್‌ಗಳು ಮತ್ತು USB ಚಾರ್ಜರ್ ಅನ್ನು ಒಳಗೊಂಡಿವೆ. ಡಾಕರ್ ಎಡಿಷನ್ ಮಾದರಿಯು ಡ್ಯೂನ್ಸ್ ಒರಟಾದ ಭೂಪ್ರದೇಶವನ್ನು ಸೂಚಿಸುವ ವಿಶೇಷ ಲೈವರಿಯನ್ನು ಪಡೆಯುತ್ತದೆ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಸಮನ್ವಯಗೊಳಿಸಿದೆ.

ಈ ಹೊಸ ಹೀರೋ ಡಾಕರ್ ಎಡಿಷನ್ ರೈಡಿಂಗ್ ನಿಲುವನ್ನು ಸುಧಾರಿಸಲು ಹ್ಯಾಂಡಲ್‌ಬಾರ್ ರೈಸರ್‌ನೊಂದಿಗೆ ನವೀಕರಿಸಿದ ಏರೋಗಾಮಿಕ್ಸ್ ನೊಂದಿಗೆ ಬರುತ್ತದೆ. ಈ ಹೀರೋ ಬೈಕ್ 21-ಇಂಚಿನ ಮುಂಭಾಗ ಮತ್ತು 18-ಇಂಚಿನ ಹಿಂಭಾಗದ ವೈರ್-ಸ್ಪೋಕ್ಡ್ ವ್ಹೀಲ್ ಗಳಲ್ಲಿ ಡ್ಯುಯಲ್-ಪರ್ಪಸ್ ಟೈರ್‌ಗಳೊಂದಿಗೆ ಬಂದಿದೆ. ಇನ್ನು ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.
ಹೀರೋ ಎಕ್ಸ್‌ಪಲ್ಸ್ 200 4ವಿ ಪ್ರೊ ಡಾಕರ್ ಎಡಿಷನ್ ಸೌದಿ ಅರೇಬಿಯಾದಲ್ಲಿ ಜನವರಿ 3 ರಂದು ಪ್ರಾರಂಭವಾಗಲಿರುವ 2025ರ ಡಾಕರ್ ರ್ಯಾಲಿಯಲ್ಲಿ Hero MotoSports ಟೀಮ್ ರ್ಯಾಲಿಯ ಮುಂದಿನ ಡಕರ್ ಔಟಿಂಗ್ ಸಮಯಕ್ಕೆ ಸರಿಯಾಗಿ ಬರುತ್ತದೆ. ಈ ಟೀಮ್ ರೈಡರ್ಸ್ ರಾಸ್ ಬ್ರಾಂಚ್, ಸೆಬಾಸ್ಟಿಯನ್ ಬುಹ್ಲರ್ ಮತ್ತು ನ್ಯಾಚೊ ಕಾರ್ನೆಜೊ ಅವರನ್ನು ಒಳಗೊಂಡಿರಲಿದೆ.


Click it and Unblock the Notifications








