ಕೇವಲ ಒಂದೇ ಲಕ್ಷಕ್ಕೆ ಖರೀದಿಸಿ ಸ್ಪೋರ್ಟಿ ಸ್ಟೈಲ್‌ ಬೈಕ್‌: ಫುಲ್‌ ಟ್ಯಾಂಕ್‌ ಪೆಟ್ರೋಲ್‌ಗೆ 660 ಕಿಮೀ ವರೆಗೆ ಓಡುತ್ತೆ!

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಬೈಕ್‌ ಸೆಗ್ಮೆಂಟ್‌ನಲ್ಲಿ 125 ಸಿಸಿ ವಿಭಾಗಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಈ 125 ಸಿಸಿ ವಿಭಾಗದ ವಿಶೇಷತೆ ಏನೆಂದರೆ, ಇದರಲ್ಲಿ ನಿಮಗೆ ಅಗತ್ಯಕ್ಕೆ ಬೇಕಾದಷ್ಟು ಪವರ್‌ ಜೊತೆಗೆ ಉತ್ತಮ ಮೈಲೇಜ್‌ ಸಹ ಸಿಗುತ್ತದೆ. ಇದರಿಂದಾಗಿ ಮೈಲೇಜ್‌ ಮತ್ತು ಪರ್ಫಾಮೆನ್ಸ್‌, ಇವೆರಡನ್ನೂ ಪರ್ಫೆಕ್ಟ್‌ ಆಗಿ ಬ್ಯಾಲೆನ್ಸ್ ಮಾಡಲು ಈ ಸೆಗ್ಮೆಂಟ್‌ನ ಬೈಕ್‌ಗಳಿಗೆ ಸಾಧ್ಯವಾಗುತ್ತದೆ. ಈ ಸೆಗ್ಮೆಂಟ್‌ ಬಗ್ಗೆ ಮಾತನಾಡುವಾಗ ನಾವು ಪ್ರಮುಖವಾಗಿ ಮಾತನಾಡಲೇ ಬೇಕಾದ ಒಂದು ಬೈಕ್‌ ಇದೆ. ಅದುವೇ ಇತ್ತೀಚೆಗೆ ಬಿಡುಗಡೆಯಾದ ಹೀರೋ ಎಕ್ಸ್‌ಟ್ರೀಂ 125 ಆರ್‌.

ಈ ಬೈಕ್‌ ಬಗ್ಗೆ ಮಾತನಾಡುವುದಾದರೆ ಈ ವರ್ಷದ ಆರಂಭದಲ್ಲಿ ಹೀರೋ ಕಂಪನಿ ಈ ಹೊಸ ಹೀರೋ ಎಕ್ಸ್‌ಟ್ರೀಂ 125 ಆರ್ ಬೈಕ್‌ ಅನ್ನು ಮಾರುಕಟ್ಟೆಗೆ ತಂದಿತ್ತು. ನೋಡಲು ಸಖತ್ ಅಗ್ರೆಸಿವ್‌ ಲುಕ್‌ ಮತ್ತು ರಗಡ್‌ ಪರ್ಫಾಮೆನ್ಸ್‌ ನಿಂದ ಕೂಡಿರುವ ಈ ಬೈಕ್‌, ಸಾಕಷ್ಟು ಜನಪ್ರಿಯತೆಯನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದೆ.

Hero Xtreme 125R Things You Need To Know Price Mileage Engine And More

ಮೊದಲಿಗೆ ಈ ಬೈಕ್‌ನ ಮಾರುಕಟ್ಟೆಯ ಬೆಲೆಯನ್ನು ನೋಡುವುದಾದರೆ, 98,709 ಬೆಲೆಯಿಂದ ಹೀರೋ ಎಕ್ಸ್‌ಟ್ರೀಂ 125 (Hero Xtreme 125R) ಆರ್ ಬೈಕ್ ಆರಂಭವಾಗುತ್ತಿದೆ. ಇದಕ್ಕೆ ರೋಡ್‌ ಟ್ಯಾಕ್ಸ್‌ ಮತ್ತು ಇನ್ಸುರೆನ್ಸ್‌ ಸೇರಿ ಇದರ ಆನ್‌ ರೋಡ್‌ ಬೆಲೆ 1,28,302 ರೂ ಆಗುತ್ತದೆ.

ನೀವೇನಾದರೂ ಒಂದು ಲಕ್ಷ ರೂಪಾಯಿ ಬಜೆಟ್‌ನಲ್ಲಿ ಒಂದೊಳ್ಳೆ ಸ್ಟೈಲ್‌ ಮತ್ತು ಉತ್ತಮ ಪರ್ಫಾಮೆನ್ಸ್‌ ಇರುವ ಬೈಕ್‌ ಬೇಕೆಂದರೆ ನೀವು ಈ ಹೊಸ ಹೀರೋ ಎಕ್ಸ್‌ಟ್ರೀಂ 125 ಬೈಕ್‌ ಒಂದು ಉತ್ತಮ ಆಯ್ಕೆಯಾಗಬಲ್ಲದು. ಹೀಗೆನ್ನಲು ಪ್ರಮುಖ ಕಾರಣವೇನೆಂದರೆ ಈ ಬೈಕ್‌ನ ಪವರ್‌ ಫಿಗರ್ಸ್‌.

Hero Xtreme 125R Things You Need To Know Price Mileage Engine And More

ನೂತನ ಬೈಕ್, ಕಪ್ಪು (Black) ಸೇರಿದಂತೆ 3 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಈ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್‌ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ - ಕೂಲ್ಡ್ ಎಂಜಿನ್ ಹೊಂದಿದ್ದು, 11.5 bhp ಗರಿಷ್ಠ ಪವರ್, 10.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

ಇನ್ನು ಈ ಬೈಕ್‌ನ ಇತರ ಮಾಹಿತಿಗಳನ್ನು ನೋಡುವುದಾದರೆ, ಕ್ರಮವಾಗಿ ರೂ.95,000 ದಿಂದ ರೂ.99,500 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿವೆ. ಈ ಬೈಕ್ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದ್ದು, ನೋಡುಗರನ್ನು ಆಕರ್ಷಿಸುತ್ತದೆ. ಮುಂಭಾಗ ಎಕ್ಸ್‌ಟ್ರಿಮ್ 200ಎಸ್ (Xtreme 200S) ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುವ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದಿದೆ. ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಹಿಂಭಾಗದ ವಿನ್ಯಾಸವು ಆಕರ್ಷಕವಾಗಿದೆ.

ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್‌ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ (ಮುಂಭಾಗ) 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌, ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ ಮುಂಭಾಗ ಡಿಸ್ಕ್ ಮತ್ತು ಹಿಂಭಾಗ ಡ್ರಮ್/ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 20, 2024, 13:28 [IST]
English summary
Hero xtreme 125r things you need to know price mileage engine and more
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+