ಕೇವಲ 1 ಲಕ್ಷದೊಳಗೆ ಸಿಗುವ ಬೆಸ್ಟ್ ಸ್ಟೈಲಿಷ್ ಬೈಕ್ ಯಾವುದು? ವಿಶೇಷತೆಗಳೇನು?

ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಕಳೆದ ಹತ್ತು ವರ್ಷಗಳಲ್ಲಿ ಭಾರೀ ಬದಲಾವಣೆ ಕಂಡಿದೆ. ಈ ಹಿಂದೆ ಸ್ಟೈಲಿಷ್ ಮೋಟಾರ್‌ಸೈಕಲ್‌ಗಳು ಅಥವಾ ಸ್ಕೂಟರ್‌ಗಳು ದುಬಾರಿ ಬೆಲೆಯನ್ನು ಹೊಂದಿದ್ದವು ಆದ್ರೆ ಈಗ ಎಲ್ಲವೂ ಬದಲಾಗಿದೆ. 125 ಸಿಸಿ ಸೆಗ್ಮೆಂಟಿನಲ್ಲಿ ಸ್ಟೈಲಿಷ್ ವಾಹನಗಳನ್ನು ತಯಾರಕರು ಪರಿಚಯಿಸುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ಸಣ್ಣ ಸಿಸಿ ವಿಭಾಗದಲ್ಲಿನ ವಾಹನಗಳು ಹೆಚ್ಚಿನ ಮೈಲೇಜ್ ಗುರಿಯನ್ನು ಹೊಂದಿರುತ್ತವೆ. ಇದರ ಜೊತೆಗೆ ಸ್ಟೈಲಿಂಗ್ ಅನ್ನು ಕೂಡ ಸೇರಿಸಿದರೆ ಗ್ರಾಹಕರನ್ನು ಹೆಚ್ಚಾಗಿ ಸೆಳೆಯಬಹುದು ಎಂಬುದು ಇತ್ತೀಚೆಗೆ ಸಾಭೀತಾಗಿದೆ. 125 ಸಿಸಿ ಸೆಗ್ಮೆಂಟಿನಲ್ಲಿ ನಮಗೆ ಸಿಗುವ ಎರಡು ಬೆಸ್ಟ್‌ ಬೈಕ್‌ಗಳನ್ನು ಇಲ್ಲಿ ನೋಡೋಣ.

ಭಾರತದ 125 ಸಿಸಿ ಸೆಗ್ಮೆಂಟಿನಲ್ಲಿ ಟಿವಿಎಸ್ ರೈಡರ್ 125 ಮತ್ತು ಹೀರೋ ಎಕ್ಸ್‌ಟ್ರೀಮ್ 125ಆರ್ ಬೈಕುಗಳು ಸದ್ಯದ ಬೆಸ್ಟ್ ಮೈಲೇಜ್, ಸ್ಟೈಲಿಂಗ್ ಸೇರಿದಂತೆ ಕಡಿಮೆ ಬೆಲೆಯೊಂದಿಗೆ ಖರೀದಿಗೆ ಸಿಗುವ ಮೋಟಾರ್‌ಸೈಕಲ್‌ಗಳಾಗಿವೆ. ಈ ಎರಡೂ ಬೈಕ್‌ಗಳ ನಡುವೆ ಕೇವಲ ಸ್ಟೈಲಿಂಗ್ ಮಾತ್ರವಲ್ಲ, ಎಲ್ಲಾ ವಿಷಯಗಳಲ್ಲೂ ಒಂದಕ್ಕೊಂದು ಸರಿಯಾದ ಪೈಪೋಟಿ ನೀಡುತ್ತವೆ.

hero-xtreme-125r-vs-tvs-raider-125-price-design-comparison

ಕೈಗೆಟುಕುವ ಬೆಲೆಯನ್ನು ಪ್ರಮುಖ ಅಂಶವಾಗಿ ತೆಗೆದುಕೊಂಡು, ಟಿವಿಎಸ್ ಕಂಪನಿಯು ಡ್ರಮ್ ಬ್ರೇಕ್‌ಗಳೊಂದಿಗೆ ರೈಡರ್ 125ನ ಹೊಸ ವೇರಿಯೆಂಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷಣಗಳ ವಿಷಯದಲ್ಲಿ ಈ ಎರಡು ಬೈಕುಗಳು ಹೇಗೆ ಒಂದಕ್ಕೊಂದು ಹೋಲಿಕೆಯಾಗುತ್ತವೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ.

ಡಿಸೈನ್: ಹೀರೋ ಎಕ್ಸ್‌ಟ್ರೀಮ್ 125ಆರ್ ಬೈಕಿನ ಸ್ಟೈಲಿಂಗ್‌ನಿಂದಾಗಿ ಸಾಕಷ್ಟು ಗಮನ ಸೆಳೆಯುತ್ತದೆ. ಟಿವಿಎಸ್ ರೈಡರ್‌ಗಿಂತ ಹೀರೋ ಎಕ್ಸ್‌ಟ್ರೀಮ್ 125ಆರ್ ಹೆಚ್ಚು ಮಸ್ಕುಲರ್ ಆಗಿ ಕಾಣುತ್ತದೆ. ಅಲಾಯ್ ವೀಲ್‌ಗಳು, ಆಕರ್ಷಕ ವಿನ್ಯಾಸ ಮತ್ತು ಶೋವಾ ಸಸ್ಪೆಂಷನ್ ಹೊಂದಿದೆ. ಇದು ಹಾರ್ಡ್ ವೇರ್ ವಿಷಯದಲ್ಲಿ ಉತ್ತಮವಾಗಿ ಸಜ್ಜುಗೊಂಡಿದೆ.

hero-xtreme-125r-vs-tvs-raider-125-price-design-comparison

ರೈಡರ್ ಟಿವಿಎಸ್ ರೈಡರ್ 125 ಬೈಕ್ ಕೂಡ ಸ್ಟೈಲಿಷ್ ಆಗಿ ಕಾಣುತ್ತದೆಯಾದರೂ, ಕಡಿಮೆ ಮಸ್ಕುಲರ್ ಅಂಶಗಳನ್ನು ಹೊಂದಿದೆ. ಇದು ಹೆಚ್ಚಾಗಿ ಏರೋ ಡೈನಮಿಕ್ ಸ್ಟೈಲ್ ಹೊಂದಿರುವುದರಿಂದ ತುಂಬಾ ಚೂಪಾದ ಮುಂಭಾಗದ ಡಿಸೈನ್ ಹೊಂದಿದೆ. ಇಂತಹ ಡಿಸೈನ್ ಅನ್ನು ಹೀರೋ ಎಕ್ಸ್‌ಟ್ರೀಮ್ 125ಆರ್ ಬೈಕಿನಲ್ಲಿ ಸಿಗುವುದಿಲ್ಲ.

ಬೆಲೆ: ಹೀರೋ ಎಕ್ಸ್ ಟ್ರೀಮ್ 125ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.95,181ಗಳಾಗಿದೆ. ಇನ್ನು ಟಿವಿಎಸ್ ರೈಡರ್ 125 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.84,869ಗಳಾಗಿದೆ. ರೈಡರ್ ಒಟ್ಟು ಐದು ರೂಪಾಂತರಗಳಲ್ಲಿ ಲಭ್ಯವಿದ್ದರೆ, ರೇಂಜ್-ಟಾಪಿಂಗ್ ಎಸ್ಎಕ್ಸ್ ಆವೃತ್ತಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1.04 ಲಕ್ಷಗಳಾಗಿದೆ.

hero-xtreme-125r-vs-tvs-raider-125-price-design-comparison

ರೈಡರ್ 125 ಸ್ಕೂಟರ್ ಸ್ಪ್ಲಿಟ್ ಸೀಟ್, ಅಲಾಯ್ ವ್ಹೀಲ್ ಗಳು, ಡಿಸ್ಕ್ ಬ್ರೇಕ್ ಅಪ್ ಫ್ರಂಟ್, ಎಲ್ಇಡಿ ಲೈಟಿಂಗ್ ಮತ್ತು ಟಿಎಫ್‌ಟಿ ಡಿಸ್ಪ್ಲೆ ಹೊಂದಿದೆ. ಈ ಎರಡೂ ಬೈಕುಗಳಲ್ಲಿ ಸಿಂಗಲ್ ಸಿಲಿಂಡರ್ ಏರ್‌ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಎರಡೂ ಒಂದೇ ರೀತಿಯ ಪವರ್ ಮತ್ತು ಟಾರ್ಕ್ ಅನ್ನು ಹೊಂದಿದ್ದರೆ, ರೈಡರ್ 125 ಎಕ್ಸ್ ಟ್ರೀಮ್ ಹೀರೋ 125 ಆರ್‌ಗಿಂತ ಹಗುರವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 25, 2024, 15:39 [IST]
English summary
Hero xtreme 125r vs tvs raider 125 price design comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+