Oben: ಬೆಂಗಳೂರಿನ ಓಬೆನ್‌ನಿಂದ ಫ್ರೀಡಂ ಆಫರ್.. 25,000 ಡಿಸ್ಕೌಂಟ್.. 187 Km ಓಡುವ ಎಲೆಕ್ಟ್ರಿಕ್ ಬೈಕ್ 1.24 ಲಕ್ಷಕ್ಕೆ!

ಭಾರತ 78ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಆಚರಿಸಲು ಸಿದ್ಧವಾಗಿದೆ. ಬೆಂಗಳೂರು ಮೂಲದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ (Electric Two Wheeler) ತಯಾರಕ ಸಂಸ್ಥೆ ಓಬೆನ್‌ ಎಲೆಕ್ಟ್ರಿಕ್ (Oben Electric), 'ಫ್ರೀಡಂ ಆಫರ್‌'ನ್ನು ಘೋಷಣೆ ಮಾಡಿದೆ. ಕಂಪನಿಯ ಜನಪ್ರಿಯ ರೋರ್‌ (Rorr) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಖರೀದಿ ಮೇಲೆ ರೂ.25,000 ರಿಯಾಯಿತಿ ನೀಡಲು ಮುಂದಾಗಿದೆ. ಈ ಪ್ರಯೋಜನ ಆಗಸ್ಟ್ 15ರವರೆಗೆ ಲಭ್ಯವಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಓಬೆನ್‌ ಎಲೆಕ್ಟ್ರಿಕ್ ಫ್ರೀಡಂ ಆಫರ್‌ನ್ನು ಜಾರಿಗೊಳಿಸಿರುವುದರಿಂದ ರೂ.1,49,999 ಬೆಲೆ ಹೊಂದಿದ್ದ ರೋರ್‌ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ರೂ.1,24,999 (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಸಿಗುತ್ತದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ಭೇಟಿ ನೀಡಿ, ಬುಕ್ಕಿಂಗ್ ಮಾಡಬಹುದು. ಸದ್ಯ ಒಬೆನ್ ಎಲೆಕ್ಟ್ರಿಕ್ ಬೆಂಗಳೂರು, ದೆಹಲಿ, ಕೊಚ್ಚಿ ಹಾಗೂ ತಿರುವನಂತಪುರಂ ಸೇರಿದಂತೆ ದೇಶಾದ್ಯಂತ 8 ಶೋರೂಂಗಳನ್ನು ಹೊಂದಿದೆ. ವರ್ಷಾಂತ್ಯದೊಳಗೆ ರಾಷ್ಟ್ರವ್ಯಾಪಿ 50 ಹೊಸ ಶೋರೂಂಗಳನ್ನು ತೆರೆಯಲು ಯೋಜಿಸಿದೆ.

Independence Day 2024 Oben Rorr Electric Bike Get Rs 25 000 Discount Details

ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹೊಚ್ಚ ಹೊಸ ಓಬೆನ್‌ ರೋರ್‌ (Oben Rorr) ಎಲೆಕ್ಟ್ರಿಕ್ ಮೋಟಾರ್‌ಸೈಕಲ್, 4.4 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 187 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇಕೋ, ಸಿಟಿ ಮತ್ತು ಹ್ಯಾವೋಕ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಈ ಎಲೆಕ್ಟ್ರಿಕ್ ಬೈಕ್ ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, 100 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. ಇದರ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಶೇಕಡ 0 ರಿಂದ 80% ಚಾರ್ಜ್ ಆಗಲು 2 ಗಂಟೆ ತೆಗೆದುಕೊಳ್ಳುತ್ತದೆ.

ನೂತನ ಓಬೆನ್‌ ರೋರ್‌ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಯುವ ಗ್ರಾಹಕರನ್ನು ಸೆಳೆಯುವಂತಹ ವಿವಿಧ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್ಇಡಿ ಲೈಟಿಂಗ್ ಸಿಸ್ಟಮ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯೊಂದಿಗೆ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಜೊತೆಗೆ ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡಿಸ್ಕ್ ಬ್ರೇಕ್‌ನ್ನು ಒಳಗೊಂಡಿದೆ. 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿದ್ದು, 230 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಓಬೆನ್ ರೋರ್ ಬೈಕ್‌ಗೆ ಟಾರ್ಕ್ ಕ್ರಾಟೋಸ್ ಆರ್ (Tork Kratos R) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಈ ಕ್ರಾಟೋಸ್ ಆರ್ ರೂ.1.50 ಲಕ್ಷದಿಂದ ರೂ.1.67 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 180 ಕಿ.ಮೀ ಓಡುತ್ತದೆ. 105 ಕೆಎಂಪಿಹೆಚ್ ಟಾಪ್ ಸ್ಪೀಡ್ ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, August 2, 2024, 12:26 [IST]
English summary
Independence day 2024 oben rorr electric bike get rs 25000 discount details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+