ಭಾರತದ ಮೊದಲ ಹೈ-ವೋಲ್ಟೇಜ್ ಇವಿ ಮೋಟಾರ್‌ಸೈಕಲ್ ಬಿಡುಗಡೆ: ವಿಶೇಷತೆಗಳೇನು?

ಚೆನ್ನೈ ಮೂಲದ ಹೊಸ EV ಸ್ಟಾರ್ಟ್‌ಅಪ್ ಕಂಪನಿಯಾದ ರಾಪ್ಟೀ.ಎಚ್‌ವಿ (Raptee.HV) ಇಂದು ಭಾರತದ ಮೊದಲ ಹೈ - ವೋಲ್ಟೇಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ವಿಶ್ವದಾದ್ಯಂತ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಗಮನಾರ್ಹವಾಗಿ ಕಡಿಮೆ ಶಾಖದೊಂದಿಗೆ 250-300 cc ಸಾಮರ್ಥ್ಯದ ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಷ್ಟು ಪರ್ಫಾಮೆನ್ಸ್ ನೀಡುವಂತಹ ಮೋಟಾರ್‌ಸೈಕಲ್ ಆಗಿದೆ ಎಂದು ಕಂಪನಿ ತಿಳಿಸಿದೆ. ಈ ಹೊಸ ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

Raptee.HV ಮೋಟಾರ್‌ಸೈಕಲ್‌ಗಳು, ಎಲೆಕ್ಟ್ರಿಕ್ ಕಾರುಗಳು ಬಳಸುವ ಚಾರ್ಜಿಂಗ್ ಮಾನದಂಡಗಳು ಹಾಗೂ ಹೈ-ವೋಲ್ಟೇಜ್ (HV) ತಂತ್ರಜ್ಞಾನದೊಂದಿಗೆ ಬರುವ ಭಾರತದ ಮೊದಲ ದ್ವಿಚಕ್ರ ವಾಹನಗಳಾಗಿವೆ. ಇವು ಆನ್‌ಬೋರ್ಡ್ ಚಾರ್ಜರ್‌ನೊಂದಿಗೆ, ದೇಶದಾದ್ಯಂತ ಲಭ್ಯವಿರುವ 13,500 CCS2 ಕಾರ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಹೊಂದಿಕೆಯಾಗುತ್ತವೆ ಎಂದು ಕಂಪನಿ ಹೇಳಿದೆ.

india-s-first-high-voltage-electric-motorcycle-launched

ಈ ಮೋಟಾರ್‌ಸೈಕಲ್ ಅನ್ನು 250-300cc ICE ಮೋಟಾರ್‌ಸೈಕಲ್‌ಗಳಿಗೆ ಸರಿಸಮಾನವಾಗಿ ರೂ.2.39 ಲಕ್ಷಗಳ ಸ್ಪರ್ಧಾತ್ಮಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. Raptee.HV ಮೋಟಾರ್‌ಸೈಕಲ್ ಸುಮಾರು 200 ಕಿ.ಮೀಗಳ IDC Est ರೇಂಜ್ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 150 ಕಿಮೀಗಿಂತ ನಷ್ಟು ನೈಜ್ ರೇಂಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಈ ಮೋಟಾರ್‌ಸೈಕಲ್ 3.5 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ IP67 ರೇಟ್ ಮಾಡಲಾದ ಬ್ಯಾಟರಿ ಪ್ಯಾಕ್ ಅನ್ನು ನೀಡುವ ಮೂಲಕ ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಖಾತ್ರಿಪಡಿಸಿದೆ. Raptee.HV ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಬಹುದಾದ ಬ್ಯಾಟರಿಯನ್ನು ಹೊಂದಿದ್ದು, 8 ವರ್ಷಗಳು ಅಥವಾ 80,000 ಕಿ.ಮೀಗಳವರೆಗೆ, ಗ್ರಾಹಕರಿಗೆ ದೀರ್ಘಾವಧಿಯ ಮೌಲ್ಯವನ್ನು ಒದಗಿಸುತ್ತದೆ ಎಂದು ಕಂಪನಿ ತಿಳಿಸಿದೆ.

india-s-first-high-voltage-electric-motorcycle-launched

Raptee.HV ಯ ಆಂತರಿಕ ತಂತ್ರಜ್ಞಾನವು HV ತಂತ್ರಜ್ಞಾನಕ್ಕಾಗಿ ಎಲೆಕ್ಟ್ರಾನಿಕ್ಸ್ ಅನ್ನು ಅಭಿವೃದ್ಧಿಪಡಿಸಿದೆ. ಇದರ ಕಸ್ಟಮ್-ನಿರ್ಮಿತ ಆಪರೇಟಿಂಗ್ ಸಿಸ್ಟಮ್, ಆಟೋಮೋಟಿವ್-ಗ್ರೇಡ್ ಲಿಂಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಹೆಚ್ಚು ಸ್ಪಂದಿಸುತ್ತದೆ. Raptee.HV ಮೋಟಾರ್‌ಸೈಕಲ್‌ಗಳು ಹರೈಸನ್ ರೆಡ್, ಆರ್ಕ್ಟಿಕ್ ವೈಟ್, ಮರ್ಕ್ಯುರಿ ಗ್ರೇ ಮತ್ತು ಎಕ್ಲಿಪ್ಸ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಸಿಗಲಿವೆ.

ಕಂಪನಿಯ ಸಹ-ಸ್ಥಾಪಕ ಮತ್ತು CEO ದಿನೇಶ್ ಅರ್ಜುನ್ ಮಾತನಾಡಿ, ಜನವರಿಯಿಂದ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಡೆಲಿವರಿಗಳನ್ನು ಆರಂಭಿಸಿ, ಆಯ್ದ ಮಾರುಕಟ್ಟೆಗಳಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯ ಅಳವಡಿಕೆಯ ಆಧಾರದ ಮೇಲೆ ಇತರ ಪ್ರಮುಖ ನಗರಗಳಿಗೆ ವಿಸ್ತರಿಸಲಿದ್ದೇವೆ. ನಮ್ಮ ಗುರಿ ಇಂಧನ ಚಾಲಿತ ಮೋಟಾರ್‌ಸೈಕಲ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ರಚಿಸುವುದು ಅಲ್ಲ, ನಿಜವಾದ ಪ್ರವರ್ತಕ ತಂತ್ರಜ್ಞಾನದೊಂದಿಗೆ ಮೋಟಾರ್‌ಸೈಕ್ಲಿಂಗ್‌ಗೆ ನ್ಯಾಯ ಸಲ್ಲಿಸುವುದು ಎಂದು ಹೇಳಿದ್ದಾರೆ.

india-s-first-high-voltage-electric-motorcycle-launched

ಭಾರತದ ಮೊದಲ ಹೈ-ವೋಲ್ಟೇಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದು ಮೊದಲಿನಿಂದಲೂ ತಾಂತ್ರಿಕ ಸವಾಲಾಗಿತ್ತು. ಕಳೆದ 5 ವರ್ಷಗಳಲ್ಲಿ ನಮ್ಮ ಅದ್ಭುತ ತಂಡವು HV ಅನ್ನು ಸಾಧ್ಯವಾಗಿಸಲು ಮೊದಲಿನಿಂದಲೂ ಸಂಪೂರ್ಣವಾಗಿ ನಿರ್ಮಿಸಬೇಕಾಗಿತ್ತು. ಇದನ್ನು ಕೊನೆಗೂ ಯಶಸ್ವಿಯಾಗಿಸುವಲ್ಲಿ ನಮ್ಮ ದೃಷ್ಟಿ ಮತ್ತು ನಾವೀನ್ಯತೆಯು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, October 14, 2024, 19:33 [IST]
English summary
India s first high voltage electric motorcycle launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+