1 ರೂ. ಪಾವತಿಸದೆ 1 ಲಕ್ಷ ಬೆಲೆಯ ಸ್ಕೂಟರ್ ಮನೆಗೆ ತನ್ನಿ: ದಸರಾ ಆಫರ್, 10,000 ರಿಯಾಯಿತಿ
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ iVOOMi, ತನ್ನ ಅತ್ಯುತ್ತಮ ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಈ ಹಬ್ಬದ ಋತುವಿನ ಸಂಭ್ರಮಾಚರಣೆಯಲ್ಲಿ, iVOOMi ತನ್ನ ಪ್ರಮುಖ ಮಾದರಿಗಳ ಮೇಲೆ ರೂ.10,000 ವರೆಗಿನ ಉಳಿತಾಯವನ್ನು ವಿಸ್ತರಿಸುತ್ತಿದೆ. ತನ್ನ ಗ್ರಾಹಕರ ಹಣಕಾಸಿನ ಅಗತ್ಯತೆಗಳನ್ನು ಅರ್ಥಮಾಡಿಕೊಂಡು, iVOOMi ಪ್ರಮುಖ ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಶೇಷ ಸಾಲದ ಆಯ್ಕೆಗಳನ್ನು ನೀಡುತ್ತಿದೆ. ಖರೀದಿದಾರರು ಈಗ iVOOMi ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಗ್ಗದ ಬೆಲೆಗೆ ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಕಂಪನಿ ಹೇಳಿದೆ.
ಜೀರೋ ಡೌನ್ ಪೇಮೆಂಟ್: ನಿಮ್ಮ ಸ್ಕೂಟರ್ ಖರೀದಿಸಲು ಯಾವುದೇ ಮುಂಗಡ ವೆಚ್ಚದ ಅಗತ್ಯವಿಲ್ಲ. ಹಾಗೆಯೇ ಸಾಲದ ಮೇಲೆ ಯಾವುದೇ ಬಡ್ಡಿಯಿಲ್ಲದೆ ಅಸಲು ಮೊತ್ತವನ್ನು ಮಾತ್ರ ಪಾವತಿಸಿದರೆ ಸಾಕು. ತಿಂಗಳಿಗೆ ರೂ. 1,411 ಕ್ಕಿಂತ ಕಡಿಮೆ EMI ಪಾವತಿಸುವ ಮೂಲಕ, ಪರಿಸರ ಸ್ನೇಹಿ ಸ್ಕೂಟರ್‌ಗಳನ್ನು ಮನೆಗೆ ಕೊಂಡೊಯ್ಯಬಹುದು.

ಅತ್ಯಾಕರ್ಷಕ ಹಬ್ಬದ ಕೊಡುಗೆಗಳು ಮತ್ತು ಪ್ರಯೋಜನಗಳು: ಕಂಪನಿಯ Jeet X ZE ಸ್ಕೂಟರ್ ಪ್ರಭಾವಶಾಲಿ ಶ್ರೇಣಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬಾಳಿಕೆ ಬರುವ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಈ ಉನ್ನತ-ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ರೂ.10,000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಡಿಸೈನ್ ಮತ್ತು ಪರ್ಫಾಮೆನ್ಸ್ ಎರಡನ್ನೂ ಹುಡುಕುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.
S1 ಸರಣಿ: ಸ್ಟೈಲಿಶ್ ಮತ್ತು ಶಕ್ತಿಯುತ S1 ಸರಣಿಯ ಮೇಲೆ ರೂ.5,000 ರಿಯಾಯಿತಿಯನ್ನು ಪಡೆದುಕೊಳ್ಳಬಹುದು, ಇದು ಸುಗಮ ಸವಾರಿ ಮತ್ತು ವರ್ಧಿತ ಸೌಕರ್ಯದೊಂದಿಗೆ ಬರುತ್ತದೆ. ಹಬ್ಬದ ರಿಯಾಯಿತಿಗಳು ಮತ್ತು ಹಣಕಾಸಿನ ಪ್ರಯೋಜನಗಳ ಈ ಸಂಯೋಜನೆಯು ಸ್ಕೂಟರ್ ಖರೀದಿ ಇನ್ನೂ ಸುಲಭವಾಗಿಸಿದೆ. ಈ ಹಬ್ಬದ ಡೀಲ್‌ಗಳು ಎಲ್ಲಾ iVOOMi ಡೀಲರ್‌ಶಿಪ್‌ಗಳಲ್ಲಿ ನವೆಂಬರ್ ಮಧ್ಯದವರೆಗೆ ಸೀಮಿತ ಅವಧಿಗೆ ಲಭ್ಯವಿರುತ್ತವೆ.

iVOOMi Jeet X ZE ಸ್ಕೂಟರ್ ಅನ್ನು ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ, ಒಂದೇ ಚಾರ್ಜ್‌ನಲ್ಲಿ 170 ಕಿ.ಮೀ ವರೆಗಿನ ಉನ್ನತ ಶ್ರೇಣಿಯನ್ನು ಹೊಂದಿದೆ. ಇದರ 3ನೇ ತಲೆಮಾರಿನ IP67 ಬ್ಯಾಟರಿಯು ಧೂಳು ಮತ್ತು ನೀರು-ನಿರೋಧಕವಾಗಿದೆ. ಸ್ಕೂಟರ್‌ನ ಡೈನಾಮಿಕ್ ವಿನ್ಯಾಸ, ದೃಢವಾದ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಮೋಟಾರು ರಾಜಿಯಿಲ್ಲದ ಪರ್ಫಾಮೆನ್ಸ್ ನೀಡುತ್ತದೆ.
ಮತ್ತೊಂದೆಡೆ, iVOOMi S1 ಸರಣಿಯು ಆರಾಮ ಮತ್ತು ಚುರುಕುತನದ ಸಂಯೋಜನೆಯನ್ನು ಬಯಸುವ ನಗರ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಎರಡೂ ಸ್ಕೂಟರ್‌ಗಳು ಈಗ ಉತ್ತಮ ಕೊಡುಗೆಗಳೊಂದಿಗೆ, ಕೈಗೆಟುಕುವ ಮತ್ತು ಹಸಿರು ಚಲನಶೀಲತೆಗೆ ಈ ಹಬ್ಬದ ಸೀಸನ್‌ನಲ್ಲಿ ಉತ್ತಮ ಆಯ್ಕೆಯಾಗಲಿವೆ. ಇದು ರಾಷ್ಟ್ರವನ್ನು ಎಲೆಕಟ್ರಿಕ್ ಭವಿಷ್ಯಕ್ಕೆ ಹತ್ತಿರವಾಗಿಸುತ್ತವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

iVOOMi ನ CEO ಮತ್ತು ಸಹ-ಸಂಸ್ಥಾಪಕರಾದ ಅಶ್ವಿನ್ ಭಂಡಾರಿ ಮಾತನಾಡಿ, "iVOOMi ನಲ್ಲಿ, ನಮ್ಮ ಧ್ಯೇಯವು ಯಾವಾಗಲೂ ಸುಸ್ಥಿರ ಚಲನಶೀಲತೆಯನ್ನು ಕೈಗೆಟುಕುವಂತೆ ಮಾಡುವುದಾಗಿದೆ. ಹಬ್ಬದ ಸೀಸನ್ ಸಮೀಪಿಸುತ್ತಿರುವಂತೆ, ನಾವು ಅದನ್ನು ಇನ್ನಷ್ಟು ಸುಲಭಗೊಳಿಸಲು ಉತ್ಸುಕರಾಗಿದ್ದೇವೆ. ಆಕರ್ಷಕ ರಿಯಾಯಿತಿಗಳು ಮತ್ತು ಹಣಕಾಸು ಆಯ್ಕೆಗಳೊಂದಿಗೆ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದ್ದೇವೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








