79,999 ರೂ.ಗಳ ಆರಂಭಿಕ ಬೆಲೆಯಲ್ಲಿ ಐವೂಮಿ ಜೀತ್ಎಕ್ಸ್ ಝಡ್ಇ ಇ-ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ತಿಂಗಳಲ್ಲಿ ಕನಿಷ್ಟ ಎರಡು ಇವಿ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಈಗಲೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉದ್ಯಮದ ಪ್ರಮುಖ ಕಂಪನಿಯಾದ ಐವೂಮಿ ಜೀತ್ಎಕ್ಸ್ ಝಡ್ಇ (iVOOMi JeetX ZE) ಇ-ಸ್ಕೂಟರ್ ಅನ್ನು 79,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ.

ಜೀತ್ಎಕ್ಸ್ ಝಡ್ಇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ, 18 ತಿಂಗಳ ವ್ಯಾಪಕ ಆರ್ &ಡಿ ಪ್ರಯತ್ನ ಮತ್ತು ಒಂದು ಲಕ್ಷ ಕಿ.ಮೀ ಪರೀಕ್ಷೆ ನಡೆಸಿ ನಿರ್ಮಿಸಲಾಗಿದೆ. ಇದು ಅದರ ಹಿಂದಿನ ಜೀತ್ ಎಕ್ಸ್ ಮಾದರಿಗಿಂತ ಪ್ರಮುಖ ನವೀಕರಣ ಪಡೆದಿದ್ದು, ಈಗ ಇ-ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಅಂದರೆ 2.1 ಕಿಲೋವ್ಯಾಟ್, 2.5 ಕಿಲೋವ್ಯಾಟ್ ಮತ್ತು 3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಗಳನ್ನು ಒಳಗೊಂಡಿದೆ. ಇದು ಒಂದೇ ಚಾರ್ಜ್‌ನಲ್ಲಿ 170 ಕಿ.ಮೀ ಓಡಬಲ್ಲದು. ಸದ್ಯ ಈಗಿರುವ ದೊಡ್ಡ ಎಲೆಕ್ಟ್ರಿಕ್ ಬ್ರಾಂಡ್‌ ಸ್ಕೂಟರ್‌ಗಳಿಗೆ ಸಲೀಸಾಗಿ ಪೈಪೋಟಿ ನೀಡುವ ರೇಂಜ್ ಹೊಂದಿದೆ ಎಂದು ಹೇಳಬಹುದು.

ivoomi-jeetx-ze-electric-scooter-launched-in-india

ಬ್ಯಾಟರಿ, ರೇಂಜ್, ಮತ್ತು ಚಾರ್ಜಿಂಗ್: ವಿನ್ಯಾಸ ಮತ್ತು ಎಂಜಿನಿಯರಿಂಗ್ ಆವಿಷ್ಕಾರವು ಸ್ಕೂಟರ್ ಅನ್ನು ಅದರ ಹಿಂದಿನದಕ್ಕೆ ಹೋಲಿಸಿದರೆ ಶೇ20 ರಷ್ಟು ಹಗುರವಾಗಿರಿಸಿದೆ. ಇದಲ್ಲದೆ, ಇದರ ಕೂಲಿಂಗ್ ಸಿಸ್ಟಮ್ ಜೀತ್ ಎಕ್ಸ್ ಗೆ ಹೋಲಿಸಿದರೆ 2.4 ಪಟ್ಟು ಉತ್ತಮ ತಂಪಾಗಿಸುವಿಕೆ ಮತ್ತು ಸುಧಾರಿತ ಸ್ಥಳ ಬಳಕೆಯನ್ನು ಒದಗಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ಜೀತ್ ಎಕ್ಸ್ ಝಡ್ ಇ ಪೇಟೆಂಟ್ ಪಡೆದ ಜೆನ್ 3 ಬ್ಯಾಟರಿ ಪ್ಯಾಕ್ ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಇದು ಎಲ್ಲಾ ಸಮಯದಲ್ಲೂ ಸರಿಯಾದ ಎಲೆಕ್ಟ್ರಿಕ್ ಬಳಕೆಯನ್ನು ಖಚಿತಪಡಿಸುತ್ತದೆ. ಹೀಗಾಗಿ, ಇ-ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 170 ಕಿ.ಮೀ ರೇಂಜ್ ನೀಡುತ್ತದೆ. ಬ್ಯಾಟರಿ ಪ್ಯಾಕ್ 7 ಕಿಲೋವ್ಯಾಟ್ ವರೆಗೆ ಪವರ್ ಒದಗಿಸುತ್ತದೆ.

ಜೀತ್ ಎಕ್ಸ್ ಕಾಂಪ್ಯಾಕ್ಟ್, 12 ಕೆ.ಜಿ ತೆಗೆಯಬಹುದಾದ ಬ್ಯಾಟರಿ ಪ್ಯಾಕ್ ಹೊಂದಿದೆ. ಆಯಾಮಗಳು ಮತ್ತು ತೂಕವು ಎಲ್ಲಾ ರೀತಿಯ ಬಳಕೆದಾರರಿಗೆ ಬ್ಯಾಟರಿಯನ್ನು ಸುಲಭವಾಗಿ ಬದಲಾಯಿಸಲು, ತೆಗೆದುಹಾಕಲು ಮತ್ತು ಮರುಹೊಂದಿಸಲು ಅನುವು ಮಾಡಿಕೊಡುತ್ತದೆ. ಇದರ ಪೋರ್ಟಬಲ್ ಚಾರ್ಜರ್ ಕೇವಲ 826 ಗ್ರಾಂ ತೂಕವನ್ನು ಹೊಂದಿದ್ದು, ಚಾರ್ಜಿಂಗ್ ಅನ್ನು ತುಂಬಾ ಅನುಕೂಲಕರವಾಗಿಸುತ್ತದೆ ಎಂದು ಕಂಪನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸ್ಕೂಟರ್ ಸಿಟಿ ರೈಡ್‌ಗಳಿಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಎಲ್ಲಾ ರೀತಿಯ ಹವಾಮಾನಗಳಲ್ಲೂ ಉತ್ತಮವಾಗಿ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಕಂಪನಿ ಭರವಸೆ ನೀಡಿದೆ.

ಐವೂಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅಶ್ವಿನ್ ಭಂಡಾರಿ ಮಾತನಾಡಿ, "ಜೀತ್ ಎಕ್ಸ್ ಝಡ್-ಇ ಇವಿ ಜಾಗದಲ್ಲಿ ಉತ್ತಮ ಗುಣಮಟ್ಟದ ಎಂಜಿನಿಯರಿಂಗ್ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ. ಇದರ ಸುಧಾರಿತ ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಶೈಲಿಯು ಜನರು ಇವಿ ದ್ವಿಚಕ್ರ ವಾಹನಗಳನ್ನು ಗ್ರಹಿಸುವ ವಿಧಾನವನ್ನು ಮರುವ್ಯಾಖ್ಯಾನಿಸುತ್ತದೆ. ಇ-ಮೊಬಿಲಿಟಿಗೆ ಭಾರತದ ಪರಿವರ್ತನೆಯನ್ನು ತ್ವರಿತಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, May 7, 2024, 16:16 [IST]
English summary
Ivoomi jeetx ze electric scooter launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+