ಸಿಂಗಲ್ ಚಾರ್ಜ್‌... 170 ಕಿ.ಮೀ ರೇಂಜ್: ಸ್ಟೈಲಿಷ್ ಸ್ಕೂಟರ್ ಪರಿಚಯಿಸಿದ iVOOMi

iVOOMi ಕಂಪನಿಯು 3 KWH ಬ್ಯಾಟರಿ ಪ್ಯಾಕ್‌ನೊಂದಿಗೆ ಸಿಂಗಲ್‌ ಚಾರ್ಜ್‌ನಲ್ಲಿ 170 ಕಿ.ಮೀ ರೇಂಜ್ ನೀಡುವ ಹೊಸ Jeet X ZE ಎಂಬ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ. ಇದರ ಬೆಲೆಯು ರೂ. 99,999 ಇದ್ದು, iVOOMi ಡೀಲರ್‌ಶಿಪ್‌ನಲ್ಲಿ ಖರೀದಿಗೆ ಲಭ್ಯವಿದೆ. ಈ ಹೊಸ ವೇರಿಯೆಂಟ್ ಅನ್ನು ಅಂಡರ್‌ಬೋನ್ ಫ್ರೇಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, 42 mm ವ್ಯಾಸವನ್ನು ಹೊಂದಿರುವ ERW1 ಸ್ಟೀಲ್ ಟ್ಯೂಬ್‌ನಿಂದ ನಿರ್ಮಿಸಲಾಗಿದೆ. ಹೊಸ ರೂಪಾಂತರವು ಮೊಬೈಲ್ ಅಪ್ಲಿಕೇಶನ್ ಸಂಪರ್ಕದೊಂದಿಗೆ ಸಂಯೋಜಿಸಲ್ಪಟ್ಟ ಅತ್ಯಾಧುನಿಕ ಸ್ಮಾರ್ಟ್ ಸ್ಪೀಡೋಮೀಟರ್‌ನೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

ಮೊಬೈಲ್ ಅಪ್ಲಿಕೇಶನ್ ಸಂಪರ್ಕದ ಮೂಲಕ ಸವಾರರು ಹಲವು ವೈಶಿಷ್ಟ್ಯಗಳನ್ನು ಪಡೆಯಬಹದು. ಇವುಗಳಲ್ಲಿ ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಸಂಪರ್ಕ, ಕಾಲ್ - ಮೆಸೇಜ್ ನೋಟಿಫಿಕೇಷನ್, ಟ್ರಿಪ್ ಡೇಟಾ, SOC ಅಲರ್ಟ್ ಹೆಚ್ಚುವರಿಯಾಗಿ, ಬ್ಯಾಟರಿಯ ಚಾರ್ಜ್ ಸ್ಥಿತಿಯನ್ನು ಸ್ಟೇಟಸ್ ಬಾರ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ivoomi-unveils-new-variant-of-jeetx-ze-with-3-kwh-battery

ವಿಭಿನ್ನ ರೈಡ್ ಮೋಡ್‌ಗಳು: JEET X ZE 3 KWH ರೂಪಾಂತರವು ಇಕೋ ಮೋಡ್, ರೈಡರ್ ಮೋಡ್, ಸ್ಪೀಡ್ ಮೋಡ್ ಎಂಬ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. 'ಇಕೋ ಮೋಡ್'ನಲ್ಲಿ 170 ಕಿಮೀ ರೇಂಜ್ ಸಿಗಲಿದ್ದು, ನಗರ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ.

'ರೈಡರ್ ಮೋಡ್'ನಲ್ಲಿ 140 ಕಿ.ಮೀ ರೇಂಜ್‌ನೊಂದಿಗೆ ದೈನಂದಿನ ಉತ್ತಮ ಪರ್ಫಾಮೆನ್ಸ್ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ. 'ಸ್ಪೀಡ್ ಮೋಡ್'ನಲ್ಲಿ 130 ಕಿ.ಮೀ ರೇಂಜ್ ನೀಡಲಿದ್ದು, ತ್ವರಿತ ಮತ್ತು ಡೈನಾಮಿಕ್ ರೈಡ್‌ಗಳಿಗೆ ಪರಿಪೂರ್ಣ ಆಯ್ಕೆಯಾಗಿದೆ. ಈ ರೈಡ್‌ ಮೋಡ್‌ಗಳು ರೈಡರ್‌ಗಳಿಗೆ ವಿಭಿನ್ನ ಚಾಲನಾ ಅನುಭವ ನೀಡುತ್ತವೆ ಎಂದು ಕಂಪನಿ ತಿಳಿಸಿದೆ.

ivoomi-unveils-new-variant-of-jeetx-ze-with-3-kwh-battery

63 ಕಿ.ಮೀ ಗರಿಷ್ಠ ವೇಗದೊಂದಿಗೆ, ಈ ಹೊಸ ಸ್ಕೂಟರ್ ತ್ವರಿತ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಗೊಳಿಸುತ್ತದೆ. 75 mm ಟೆಲಿಸ್ಕೋಪಿಕ್ ಸಸ್ಪೆನ್ಷನ್ ಆರಾಮದಾಯಕ ಸವಾರಿಯ ಭರವಸೆ ನೀಡುತ್ತದೆ. iVOOMi ಬ್ಯಾಟರಿಯ ಮೇಲೆ 5-ವರ್ಷದ ವಾರಂಟಿಯನ್ನು ನೀಡುವ ಮೂಲಕ ಹೊಸ ರೂಪಾಂತರದ ಗುಣಮಟ್ಟಕ್ಕೆ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಈ ರೂಪಾಂತರದ ವಿತರಣೆಗಳು ಜುಲೈ ಅಂತ್ಯದಿಂದ ಆಗಸ್ಟ್ ಮಧ್ಯದದಲ್ಲಿ ಪ್ರಾರಂಭವಾಗಲಿವೆ. ಸ್ಕೂಟರ್ ತನ್ನ ಸುಧಾರಿತ ವೈಶಿಷ್ಟ್ಯಗಳು, ಸ್ಪರ್ಧಾತ್ಮಕ ಬೆಲೆ ಮತ್ತು ಅಸಾಧಾರಣ ಶ್ರೇಣಿಯೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮ ಬೀರಲು ಸಿದ್ಧವಾಗಿದೆ. ಆಸಕ್ತ ಗ್ರಾಹಕರು ತಮ್ಮ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಿ ವಿಚಾರಿಸಿ ಎಂದು ಕಂಪನಿ ಹೇಳಿದೆ.

ivoomi-unveils-new-variant-of-jeetx-ze-with-3-kwh-battery

iVOOMi ನ CEO ಮತ್ತು ಸಹ-ಸಂಸ್ಥಾಪಕ ಅಶ್ವಿನ್ ಭಂಡಾರಿ ಮಾತನಾಡಿ, JEET X ZE ಯ 3 KWH ರೂಪಾಂತರವನ್ನು ಪರಿಚಯಿಸುವುದು ನಾವೀನ್ಯತೆ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸುವಲ್ಲಿ ನಮ್ಮ ಗಮನವನ್ನು ಪ್ರತಿಬಿಂಬಿಸುತ್ತದೆ. ಸುಧಾರಿತ ತಂತ್ರಜ್ಞಾನ, ಉತ್ತಮ ಪರ್ಫಾಮೆನ್ಸ್ ಮತ್ತು ಮೌಲ್ಯವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಈ ಮಾದರಿಯು ವಿಸ್ತೃತ ಶ್ರೇಣಿ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ನೀಡುತ್ತದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, July 16, 2024, 8:30 [IST]
English summary
Ivoomi unveils new variant of jeetx ze with 3 kwh battery
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+