ಈ ದೇಶದಲ್ಲಿ ಕ್ಲಾಸಿಕ್ 350 ಬೆಲೆ 4 ಲಕ್ಷ, ಜಿಟಿ 650 ಬೆಲೆ 6.5 ಲಕ್ಷ: ಆದರೂ ಸುನಾಮಿ ಎಬ್ಬಿಸುತ್ತಿದೆ Royal Enfield
ಕಳೆದ ಕೆಲವು ವರ್ಷಗಳಿಂದ ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳ ಮಾರಾಟವೂ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದು, ಕಂಪನಿಯ ಬ್ರಾಂಡ್ ವ್ಯಾಲ್ಯೂ ಅನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವುದನ್ನು ನಾವು ಕಾಣಬಹುದು.
ಹಲವು ವರ್ಷಗಳ ಹಿಂದೆಯಿಂದಲೇ ರಾಯಲ್ ಎನ್‌ಫೀಲ್ಡ್ ಕಂಪನಿಯನ್ನು ಭಾರತೀಯ ಮೂಲದ ಕಂಪನಿ ತನ್ನ ತೆಕ್ಕೆಗೆ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯ ಪ್ರಸಿದ್ದಿ ಸಪ್ತಸಾಗರದಾಚೆಯೂ ಹರಡಿದ್ದು, ವಿದೇಶಿಗರು ರಾಯಲ್ ಎನ್‌ಫೀಲ್ಡ್ ಕಂಪನಿಯ ಬಗ್ಗೆ ಮಾತಾಡಿರುವ ಮಾತುಗಳು ಎಲ್ಲರನ್ನೂ ಸೆಳೆಯುತ್ತಿದೆ. ಇಂದಿನ ಈ ಲೇಖನದಲ್ಲಿ ಇದರ ಕುರಿತಾಗಿಯೇ ನೋಡಲಿದ್ದೇವೆ.

ನಿಮಗೆಲ್ಲಾ ಗೊತ್ತಿರುವಂತೆ ಭಾರತೀಯ ಮಾರುಕಟ್ಡೆಯಲ್ಲಿ ಮಾತ್ರವಲ್ಲದೇ ರಾಯಲ್ ಎನ್‌ಫೀಲ್ಡ್ ಕಂಪನಿಯು ವಿದೇಶಿಯ ಮಾರುಕಟ್ಟೆಯಲ್ಲೂ ಸಹ ತನ್ನ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಅದರಲ್ಲಿ ಜಪಾನ್ ಸಹ ಹೌದು. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬಗ್ಗೆ ಜಪಾನ್ ವಿದ್ಯಾರ್ಥಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಜಯ್ ಪಾಂಡೆ ಎಂಬ ಯ್ಯೂಟ್ಯೂಬರ್ ಒಬ್ಬ ತನ್ನ ಚಾನಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ವಿಡಿಯೋದಲ್ಲಿ ಜಪಾನ್ ದೇಶದ ವಿದ್ಯಾರ್ಥಿಗಳು ರಾಯಲ್ ಎನ್‌ಫೀಲ್ಡ್ ಬೈಕ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಗಳನ್ನು ನೀಡಿರುವುದನ್ನು ಗಮನಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಜಪಾನ್‌ನ ಬೈಕ್ ರೈಡಿಂಗ್ ಸಂಸ್ಕೃತಿಯ ಕುರಿತಾಗಿಯೂ ಮಾತನಾಡಿದ್ದಾರೆ.

ಜಪಾನ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಹೆದ್ದಾರಿಗಳಲ್ಲಿ ಕಾಣುವಂತೆ ಹೇರಳವಾಗಿ ಕಾಣ ಸಿಗುವುದಿಲ್ಲವಾದರೂ ಅಲ್ಲಲ್ಲಿ ಒಂದೊಂದು ಕಾಣಬಹುದಾಗಿದೆ. ಅಲ್ಲಿನ ರಾಯಲ್ ಎನ್‌ಫೀಲ್ಡ್ ಶೋ ರೂಮ್ ಅನ್ನು ಸಹ ವಿಡಿಯೋದಲ್ಲಿ ತೋರಿಸುತ್ತಿದ್ದು, ಇಲ್ಲಿ ಸಿಗುವ ಬಹುತೇಕ ಎಲ್ಲಾ ಮಾಡೆಲ್‌ಗಳು ಸಹ ಜಪಾನ್‌ನಲ್ಲಿ ಕಾಣಸಿಗುತ್ತದೆ ಎಂಬುದು ಗಮನಿಸಬೇಕಾದ ಮತ್ತೊಂದು ಅಂಶ.
ಇನ್ನು ಶೋರೂಮ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕುರಿತಾಗಿ ಪ್ರಶ್ನೆಗಳನ್ನು ಕೇಳಿದಾಗ ಅಲ್ಲಿನ ವ್ಯಕ್ತಿಗಳು ಸಕಾರಾತ್ಮಕ ರೀತಿಯಲ್ಲಿ ಈ ಬೈಕ್ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಜಪಾನ್‌ನಲ್ಲಿ ಯಾವ ರಾಯಲ್ ಎನ್‌ಫೀಲ್ಡ್ ಬೈಕ್ ಹೆಚ್ಚು ಪ್ರಸಿದ್ದಯಾಗಿದೆ ಎಂದು ಕೇಳಿದಾಗ ಕ್ಲಾಸಿಕ್ ೩೫೦ ಬೈಕ್ ಅಲ್ಲಿ ಹೆಚ್ಚು ಪ್ರಸಿದ್ದಿ ಆಗಿರುವ ಮಾಡೆಲ್ ಎಂದು ತಿಳಿದು ಬರುತ್ತದೆ. ಜಪಾನ್‌ನಲ್ಲಿ ಕ್ಲಾಸಿಕ್ ೩೫೦ ಬೈಕ್‌ನ ಬೆಲೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳು.
ಅದೇ ರೀತಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಮತ್ತೊಂದು ಪ್ರಸಿದ್ದ ಮಾಡಲ್ ಆದ ಕಾಂಟಿನೆಂಟಲ್ ಜಿಟಿ ೬೫೦ ಬೈಕ್‌ನ ಬೆಲೆ ಜಪಾನ್‌ನಲ್ಲಿ ಬರೋಬ್ಬರಿ ೬.೫ ಲಕ್ಷ ರೂಪಾಯಿಗಳು. ಇನ್ನು ಜಪಾನ್‌ನಲ್ಲಿ ಈ ಬೈಕ್‌ಗಳು ಹೆಚ್ಚು ಕಾಣ ಸಿಗದೇ ಇರುವುದರಿಂದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕಂಡಾಗಲೆಲ್ಲಾ ಜಪಾನಿನ ಜನತೆ ಕುತೂಹಲದಿಂದ ಅದನ್ನು ನೊಡುತ್ತಾ ನಿಲ್ಲುತ್ತಾರೆ ಎಂದು ತಿಳಿದು ಬರುತ್ತದೆ.
ಇನ್ನು ಜಪಾನ್‌ನಲ್ಲಿ ಹಲವರು ಹೋಂಡಾ ಸಿಬಿ ೩೫೦ ಬೈಕ್ ಅನ್ನು ಕೊಳ್ಳುವ ಯೋಜನೆಯಲ್ಲಿ ಇರುವವರು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳನ್ನು ಕಂಡ ಕೂಡಲೇ ತಮ್ಮ ಅಭಿಪ್ರಾಯಗಳನ್ನು ಬದಲಿಸಿ ಇದನ್ನೇ ಕೊಳ್ಳುವತ್ತ ಮುಖಮಾಡುತ್ತಿದ್ದಾರೆ ಎಂದು ಅಲ್ಲಿರುವ ವಿದ್ಯಾರ್ಥಿಗಳನ್ನು ಮಾತನಾಡಿಸಿದಾಗ ತಿಳಿದು ಬಂದಿದೆ. ಇದಕ್ಕೆ ಕಾರಣ ಈ ಬೈಕ್‌ನ ನೋಟ. ಅಲ್ಲಿನ ಹಲವರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ರೆಟ್ರೋ ವಿನ್ಯಾಸವನ್ನು ಇಷ್ಟಪಡುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








