ಜಾವಾ ಪೆರಾಕ್ VS ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350: ಯಾವುದು ಬೆಸ್ಟ್?
ಭಾರತದಲ್ಲಿ ಮೈಲೇಜ್ ಬೈಕ್‌ಗಳಷ್ಟೇ ಬೇಡಿಕೆ ದೊಡ್ಡ ಘಾತ್ರದ ಎಂಜಿನ್‌ಗಳನ್ನು ಹೊಂದಿರುವ ಮೋಟಾರ್‌ಸೈಕಲ್‌ಗಳಿಗೂ ಇದೆ. ಅದರಲ್ಲೂ ಜಾವಾ ಪೆರಾಕ್ ಮತ್ತು ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕುಗಳು ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಸಖತ್ ಸ್ಟೈಲಿಷ್ 350ಸಿಸಿ ಬೈಕ್‌ಗಳಾಗಿವೆ. ಕೇವಲ 3 ಲಕ್ಷದೊಳಗೆ ಯುವಕರಿಗೆ ಸ್ಟೈಲಿಷ್ ಹಾಗೂ ಪವರ್‌ಫುಲ್ ಮೋಟಾರ್‌ಸೈಕಲ್ ಖರೀದಿಸುವ ಕನಸಿದ್ದರೇ ಈ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಒಂದನ್ನು ಪರಿಶೀಲಿಸಬಹುದು. ಬನ್ನಿ ಎರಡು ಮೋಟಾರ್‌ಸೈಕಲ್‌ಗಳ ನಡುವಿನ ಬೆಲೆ, ಎಂಜಿನ್, ಫೀಚರ್‌ಗಳ ಬಗ್ಗೆ ತಿಳಿಯೋಣ.
ಬೆಲೆ: ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್ ಆಯ್ಕೆಯ ಬಣ್ಣದ ಬೆಲೆ ಸುಮಾರು ರೂ 2,15,187 ಎಕ್ಸ್ ಶೋ ರೂಮ್‌ನಿಂದ ಆರಂಭವಾಗುತ್ತದೆ. ಅದೇ ರೀತಿ ಇದರ ಮತ್ತೊಂದು ಅಲಾಯ್ ವ್ಹೀಲ್ ಆಯ್ಕೆಯಾದ ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್ ಮಾದರಿಯ ಬೆಲೆ ರೂ 2,19,950 ಎಕ್ಸ್ ಶೋ ರೂಮ್ ಆಗಿದೆ.

ಮತ್ತೊಂದೆಡೆ ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.35 ಲಕ್ಷವಾಗಿದೆ. ಈ ಹೊಸ ಬೈಕ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ನಿಮಗೆ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಎಂಜಿನ್: ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕ್ 349 ಸಿಸಿ ಏರ್-ಕೋಲ್ಡ್ ಎಂಜಿನ್ ಅನ್ನು ಹೊಂದಿದ್ದು, 20.2 ಬಿಹೆಚ್ ಪವರ್ ಹಾಗೂ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಜಾವಾ ಪೆರಾಕ್ ಬೈಕಿನಲ್ಲಿ 334 cc ಲಿಕ್ವಿಡ್-ಕೂಲ್ಡ್ ಎಂಜಿನ್, 29.9PS ಪವರ್ ಮತ್ತು 30Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಡಿಸೈನ್: ಫ್ಲೋಟಿಂಗ್ ಸೀಟ್ ಮಾರುಕಟ್ಟೆಯಲ್ಲಿ ಎಲ್ಲಕ್ಕಿಂತ ವಿಶಿಷ್ಟವಾದ ನೋಟವನ್ನು ನೀಡುತ್ತದೆ. ಬಾಬರ್ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ. ಅದರ ಬಾರ್-ಎಂಡ್ ರೌಂಡ್ ಮೀರರ್ ಗಳು, ಫ್ಲೋಟಿಂಗ್ ಶೈಲಿಯ ಸಿಂಗಲ್-ಪೀಸ್ ಸೀಟ್, ಅಂಡರ್ ಸೀಟ್ ಟೈಲ್ ಲ್ಯಾಂಪ್, ಫೆಂಡರ್‌ಗಳು ಮತ್ತು ಡ್ಯುಯಲ್ ಸ್ಲ್ಯಾಷ್-ಕಟ್ ಎಕ್ಸಾಸ್ಟ್ ಅನ್ನು ಹೊಂದಿದೆ.
ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕಿನಲ್ಲಿ ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಅಡ್ಜೆಸ್ಟೇಬಲ್ ಕ್ಲಚ್ & ಬ್ರೇಕ್ ಲಿವರ್‌ಗಳನ್ನು ಹೊಂದಿದೆ. 'ಟಿಯರ್ ಡ್ರಾಪ್' ಹೋಲಿಕೆಯಾಗುವ ಫ್ಯುಯೆಲ್ ಟ್ಯಾಂಕ್, ಕರ್ವ್ ಫೆಂಡರ್‌ಗಳು, 'ಏಪ್-ಹ್ಯಾಂಗರ್' ರೀತಿಯಲ್ಲಿರುವ ಹ್ಯಾಂಡಲ್‌ಬಾರ್‌ಗಳು, ಫ್ಲೋಟಿಂಗ್ ಸೀಟ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಒಳಗೊಂಡಿದೆ.

ಎರಡೂ ಬೈಕ್‌ಗಳು ಈ ವಿಭಾಗದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಆದರೆ ಪವರ್ ವಿಷಯದಲ್ಲಿ ಜಾವಾ 42 ಬಾಬರ್ ತುಸು ಹೆಚ್ಚಾಗಿದೆ. ಡಿಸೈನ್ ವಿಷಯದಲ್ಲಿ ಎರಡಕ್ಕೆರಡೂ ಅದ್ಬುತವಾಗಿವೆ, ಫೀಚರ್‌ಗಳ ವಿಷಯದಲ್ಲು ಅಷ್ಟೂ ಎರಡೂ ಕೂಡ ಕ್ಲಾಸಿಕ್ ಆಗಿವೆ. ಆದ್ರೆ ತುಸು ಹೆಚ್ಚಿನ ಪವರ್ ಬೇಕಾದರೆ ಜಾವಾ 42 ಬಾಬರ್ ಅನ್ನು ನೋಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications