ಹೊಸ ಸ್ಕೂಟರ್ ಬಿಡುಗಡೆಗೆ ಸಜ್ಜು: ಆಕರ್ಷಕ ಡಿಸೈನ್, ಹಲವು ವೈಶಿಷ್ಟ್ಯಗಳೊಂದಿಗೆ ಬರಲಿದೆ!

ನಾಸಿಕ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ 'ಜಿತೇಂದ್ರ EV' ತನ್ನ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ದೃಢವಾದ ಪೋರ್ಟ್‌ಫೋಲಿಯೊಗೆ 'Yunik' ಎಂಬ ಹೊಸ ಸ್ಕೂಟರ್ ಸೇರ್ಪಡೆಯೊಂದಿಗೆ ಈ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಸದ್ಯಕ್ಕೆ ಹೊಸ ಸ್ಕೂಟರ್ ಕುರಿತ ಕೆಲವು ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ಯುನಿಕ್ ಅತ್ಯಾಧುನಿಕ ತಂತ್ರಜ್ಞಾನ, ಪ್ರಭಾವಶಾಲಿ ವೇಗ ಮತ್ತು ಪವರ್‌ನೊಂದಿಗೆ ಬರುವುದಾಗಿ ಕಂಪನಿ ಭರವಸೆ ನೀಡಿದೆ. ಸವಾರರು ಈ ಸ್ಕೂಟರ್‌ನಿಂದ ಕಮಾಂಡಿಂಗ್ ಪ್ರೆಸೆನ್ಸ್ ನಿರೀಕ್ಷಿಸಬಹುದು, ಹಾಗೆಯೇ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಪ್ರತಿ ಪ್ರಯಾಣವು ಅವಿಸ್ಮರಣೀಯವಾಗಲಿದೆ ಎಂದು ಕಂಪನಿ ಹೇಳಿದೆ.

ಸ್ಕೂಟರ್‌ನ ಸ್ಟೈಲಿಷ್ ವಿನ್ಯಾಸದ ಜೊತೆಗೆ ಅದರ ಕಾರ್ಯಕ್ಷಮತೆಯ ಸಾಮರ್ಥ್ಯಗಳು ಇವಿ ವಿಭಾಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಯಾಗಲಿದೆ. ಯುನಿಕ್ ತನ್ನ ಆಕರ್ಷಕ ಬಣ್ಣಗಳಿಂದ ತನ್ನನ್ನು ತಾನೇ ಪ್ರತ್ಯೇಕಿಸಿಕೊಳ್ಳುತ್ತದೆ. "ಬಿ ಡಿಫರೆಂಟ್, ಬಿ ಯುನಿಕ್!" ಎಂಬ ಅದರ ಅಡಿಬರಹಕ್ಕೆ ಸರಿಯಾಗಿ ಈ ಸ್ಕೂಟರ್ ತನ್ನ ವಿಶಿಷ್ಟತೆಯನ್ನು ಹೊಂದಿದೆ. ಧೈರ್ಯವನ್ನು ಪ್ರತಿಬಿಂಬಿಸುವ ವಾಹನವನ್ನು ಬಯಸುವವರಿಗೆ ಇದು ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ.

jitendra-evs-bold-and-masculine-scooter-set-for-debut-soon

ಜಿತೇಂದ್ರ EV ಸಹ-ಸಂಸ್ಥಾಪಕ ಸಮ್ಕಿತ್ ಷಾ ಮಾತನಾಡಿ, ''ನಾವೀನ್ಯತೆ ಮತ್ತು ಪ್ರತ್ಯೇಕತೆಯ ನಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ಸೆರೆಹಿಡಿಯುವ ಯುನಿಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ನಾವು ರೋಮಾಂಚನಗೊಂಡಿದ್ದೇವೆ. ಜಿತೇಂದ್ರ EV ಯಲ್ಲಿ, ಹೊಸ 'ಯುನಿಕ್ ಸ್ಕೂಟರ್' ತನ್ನ ಅದ್ಭುತ ವಿನ್ಯಾಸ ಮತ್ತು ಅಸಾಧಾರಣ ಕಾರ್ಯಕ್ಷಮತೆಯೊಂದಿಗೆ ಆ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದರು.

Yunik ಜೊತೆಗೆ, ಪ್ರತಿ ಪ್ರಯಾಣವು ಸ್ಮರಣೀಯವಾಗಲಿದೆ, ಆಕರ್ಷಕ ಡಿಸೈನ್‌ನೊಂದಿಗೆ ಸುಧಾರಿತ ತಂತ್ರಜ್ಞಾನದ ರೋಮಾಂಚಕ ಅನುಭವವನ್ನು ಸವಾರರನ್ನು ಪಡೆಯಬಹುದು. ನಾವು ಹೇಳಲು ಇಷ್ಟಪಡುವಂತೆ, 'ಬಿ ಡಿಫರೆಂಟ್, ಬಿ ಯುನಿಕ್!' ಹೆಸರಿಗೆ ತಕ್ಕಂತೆ ಈ ಎಲೆಕ್ಟ್ರಿಕ್ ವಾಹನವು ಭೂದೃಶ್ಯವನ್ನು ಮರು ವ್ಯಾಖ್ಯಾನಿಸುವ ನಮ್ಮ ಮಿಷನ್‌ನಲ್ಲಿ ಮಹತ್ವದ ಹೆಜ್ಜೆಯನ್ನು ಹೊಂದಿದೆ ಎಂದರು.

jitendra-evs-bold-and-masculine-scooter-set-for-debut-soon

ಗ್ರಾಹಕರು ತಮ್ಮ ಹತ್ತಿರದ ಜಿತೇಂದ್ರ EV ಡೀಲರ್‌ಶಿಪ್‌ನಲ್ಲಿ ಯುನಿಕ್ ಅನ್ನು ಮುಂಗಡವಾಗಿ ಬುಕ್ ಮಾಡಬಹುದು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಜೀತೇಂದ್ರ ಇವಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಜಿತೇಂದ್ರ ಜೆಎಂಟಿ 1000ಹೆಚ್ಎಸ್ ರೂ.97,224 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಫುಲ್ ಚಾರ್ಜ್‌ನಲ್ಲಿ 80 ಕಿ.ಮೀ ಓಡುತ್ತದೆ. ಹಾಗೆಯೇ 52 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ.

ಜಿತೇಂದ್ರ ಜೆಇಟಿ 1000 3ಕೆ ಎಲೆಕ್ಟ್ರಿಕ್ ಸ್ಕೂಟರ್ ರೂ.1.28 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು ಫುಲ್ ಚಾರ್ಜ್ ನಲ್ಲಿ 126 ಕಿ.ಮೀ ರೇಂಜ್ ನೀಡುತ್ತದೆ. 98 ಕೆಜಿ ತೂಕವಿದ್ದು, ಬ್ಲ್ಯಾಕ್, ರೆಡ್ ಮತ್ತು ವೈಟ್ ಬಣ್ಣಗಳೊಂದಿಗೆ ಲಭ್ಯವಿದೆ. ಇದು ಜಿತೇಂದ್ರ ಕಂಪನಿಯಲ್ಲಿ ಉತ್ತಮ ಮಾರಾಟ ಕಾಣುತ್ತಿದೆ.

jitendra-evs-bold-and-masculine-scooter-set-for-debut-soon

ಜಿತೇಂದ್ರ ಜೆಇಟಿ 320 ಎಲೆಕ್ಟ್ರಿಕ್ ಸ್ಕೂಟರ್ ರೂ.73,780 ದಿಂದ ರೂ.75,950 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದು ಫುಲ್ ಚಾರ್ಜ್ ನಲ್ಲಿ 60 ರಿಂದ 70 ಕಿಲೋಮೀಟರ್ ಕ್ರಮಿಸುತ್ತದೆ. ಬ್ಲ್ಯಾಕ್, ರೆಡ್ ಹಾಗೂ ವೈಟ್ ಬಣ್ಣಗಳ ಆಯ್ಕೆಯಲ್ಲಿ ಸಿಗುವ ಈ ಸ್ಕೂಟರ್, ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಡಿಸ್ಕ್, ಹಿಂಭಾಗ (ರೇರ್) ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 16, 2024, 9:51 [IST]
English summary
Jitendra evs bold and masculine scooter set for debut soon
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+