ಜನಪ್ರಿಯ ಬ್ರಾಂಡ್‌ನಿಂದ ಹಬ್ಬಕ್ಕೆ ಬಂಪರ್ ಆಫರ್: ಅಗ್ಗದ ಬೆಲೆಯಲ್ಲಿ ಸ್ಕೂಟರ್ ಖರೀದಿಸಿ!
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸಲು ಮೊದಲಿನಿಂದಲೂ ಹಲವು ಆಫರ್‌ಗಳನ್ನು ನೀಡುತ್ತಿರುವ ಇವಿ ಕಂಪನಿಗಳು, ಈ ಹಬ್ಬದ ಸೀಸನ್ ಅನ್ನು ಇನ್ನೂ ಪ್ರತ್ಯೇಕವಾಗಿಸಿವೆ. ಹೌದು ದಸರಾ, ದೀವಾಳಿಯ ಹಬ್ಬದ ಸೀಸನ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಆಫರ್‌ಗಳನ್ನು ನೀಡಲಾಗುತ್ತಿದೆ. ಮುಖ್ಯವಾಗಿ ಈ ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ 'ಜಾಯ್ ಇ - ಬೈಕ್' ಮತ್ತು 'ಜಾಯ್ ಇ - ರಿಕ್' ಬ್ರಾಂಡ್‌ಗಳ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಯಾರಕರಲ್ಲಿ ಒಂದಾದ ವಾರ್ಡ್‌ವಿಜಾರ್ಡ್ ಇನ್ನೋವೇಶನ್ಸ್ & ಮೊಬಿಲಿಟಿ ಲಿಮಿಟೆಡ್, ವಿಶೇಷ ಮತ್ತು ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ.
ಕಂಪನಿಯು ರೂ. 30,000 ವರೆಗಿನ ಪ್ರಯೋಜನಗಳನ್ನು ನೀಡುತ್ತಿದೆ. ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಆಫರ್‌ಗಳು ಭಾರತದಾದ್ಯಂತ ಎಲ್ಲಾ ಅಧಿಕೃತ ಜಾಯ್ ಇ - ಬೈಕ್ ಡೀಲರ್‌ಶಿಪ್‌ಗಳು ಮತ್ತು ಅಮೆಜಾನ್, ಫ್ಲಿಪ್ ಕಾರ್ಟ್‌ನಂತಹ ಜನಪ್ರಿಯ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಲ್ಲಿ 15 ನವೆಂಬರ್ 2024 ರವರೆಗೆ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯು ಬ್ರುಬೆಲ್ ಇನ್ಸೂರನ್ಸ್ ಬ್ರೊಕಿಂಗ್ ಪ್ರೈ.ಲಿ. (Bluebells Insurance Broking Pvt. Ltd) ಪಾಲುದಾರಿಕೆಯಲ್ಲಿ ಹಬ್ಬದ ಅವಧಿಯಲ್ಲಿ ಆಯ್ದ ಖರೀದಿಗಳಿಗೆ ಪೂರಕ ವಿಮೆಯನ್ನು ಸಹ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೆಚ್ಚಿಸಲು, 15 ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಜೊತೆಗೆ ಮಂಗಳಂ ಇಂಡಸ್ಟ್ರಿಯಲ್ ಫೈನಾನ್ಸ್ ಲಿಮಿಟೆಡ್ (ಎಂಐಎಫ್‌ಎಲ್) ಮೂಲಕ ಸುಲಭ ಹಣಕಾಸು ಆಯ್ಕೆಗಳನ್ನು ಸಹ ನೀಡಲಾಗುತ್ತಿದೆ.
ಈ ಹಬ್ಬದ ಕೊಡುಗೆಗಳನ್ನು ಗ್ರಾಹಕರಿಗೆ ಆಕರ್ಷಕ ಬೆಲೆಗಳಲ್ಲಿ ನಮ್ಮ ಸ್ಕೂಟರ್‌ಗಳನ್ನು ಖರೀದಿಸಲು ಅನನ್ಯ ಅವಕಾಶವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಗೆ ಸೂಕ್ತ ಸಮಯವಾಗಿದೆ. ಎಲ್ಲಾ ಜಾಯ್ ಇ - ಬೈಕ್ ಮಾದರಿಗಳಲ್ಲಿ ಅನ್ವಯವಾಗುವ ಡೀಲ್‌ಗಳೊಂದಿಗೆ, ಪರಿಸರ ಸ್ನೇಹಿ ಸಾರಿಗೆಯನ್ನು ಅಳವಡಿಸಿಕೊಳ್ಳಲು ಇದು ಸೂಕ್ತ ಅವಕಾಶವಾಗಿದೆ ಎಂದು ಕಂಪನಿ ಹೇಳಿದೆ.
ವಿಜಾರ್ಡ್ ಮೊಬಿಲಿಟಿ ಲಿಮಿಟೆಡ್ ಹಾಗೂ ಜಾಯ್ ಇ - ಬೈಕ್ ಮತ್ತು ಜಾಯ್ ಇ - ರಿಕ್ ಬ್ರಾಂಡ್‌ನ ಅಡಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ವಿಭಾಗದಲ್ಲಿ ಭಾರತದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ BSE ಯಲ್ಲಿ ಮೊದಲ ಪಟ್ಟಿ ಮಾಡಲಾದ ಘಟಕವಾಗಿರುವುದರಿಂದ, ಭವಿಷ್ಯದಲ್ಲಿ ಧನಾತ್ಮಕ ಪರಿಣಾಮ ಬೀರಲು ಭಾರತೀಯ EV ವಿಭಾಗದಲ್ಲಿ ಬೆಳವಣಿಗೆಯ ಸಾಮರ್ಥ್ಯದ ಮೇಲೆ ಮುಖ್ಯವಾಗಿ ಕೇಂದ್ರೀಕರಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಪರಿಸರದ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ, ಇಂಧನ ಚಾಲಿತ ವಾಹನಗಳು ಹೆಚ್ಚಿನ ಪ್ರಮಾಣದ ಇಂಗಾಲದ ಹೊರಸೂಸುವಿಕೆಗೆ ಕಾರಣವಾಗಿವೆ, ಕಂಪನಿಯು ಯಾವುದೇ ಹೊರಸೂಸುವಿಕೆಯನ್ನು ಉತ್ಪಾದಿಸದ ಸ್ವಚ್ಛ, ಹಸಿರು ಆಯ್ಕೆಗಳನ್ನು ನೀಡುವ ಮೂಲಕ ಸುಧಾರಣೆಯನ್ನು ಉತ್ತೇಜಿಸುತ್ತಿದೆ. ಹೆಚ್ಚಿನ ಮತ್ತು ಕಡಿಮೆ ವೇಗದ ವಿಭಾಗಗಳಲ್ಲಿ 10 ಕ್ಕೂ ಹೆಚ್ಚು ವಾಹನಗಳೊಂದಿಗೆ ತನ್ನ ಪೋರ್ಟ್‌ಫೋಲಿಯೊದಲ್ಲಿ, ಕಂಪನಿಯು ಭಾರತದಾದ್ಯಂತ 400 ಕ್ಕೂ ಹೆಚ್ಚು ನಗರಗಳಲ್ಲಿ ಬಲವಾದ ಅಸ್ತಿತ್ವವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದೆ.
ಭಾರತದಲ್ಲಿ ಈ ಹಿಂದೆ ಇವಿಗಳಲ್ಲಿನ ಬ್ಯಾಟರಿ ಸಮಸ್ಯೆಗಳು ಹಾಗೂ ಸರ್ವಿಸ್ ವಿಚಾರವಾಗಿ ಕಂಪನಿಗಳಿಂದ ಜನ ಎದುರಿಸುತ್ತಿದ್ದ ಸವಾಲುಗಳಿಂದ ಎಲೆಕ್ಟ್ರಿಕ್ ವಾಹನ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದರು. ಆದ್ರೆ ಈಗ ಬಹುತೇಕ ಸಮಸ್ಯೆಗಳನ್ನು ಕಂಪನಿಗಳು ಪರಿಹರಿಸಿವೆ. ಇವಿಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅಗ್ಗದ ಬೆಲೆ ಹಾಗೂ ಆಫರ್‌ಗಳನ್ನು ನೀಡುತ್ತಿದ್ದು, ಮಾರಾಟದಲ್ಲಿ ಏರಿಕೆ ಕಾಣುವ ಸಾಧ್ಯತೆಗಳು ಹೆಚ್ಚಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








