ಬಜಾಜ್ CNG ಬೈಕ್ ಸೇರಿದಂತೆ ಪ್ರೀಮಿಯಂ ಸ್ಕೂಟರ್ ಬಿಡುಗಡೆಗೆ ಸಜ್ಜು: ವಿಶೇಷತೆಗಳೇನು?

ಭಾರತದಲ್ಲಿ ಅತೀ ಹೆಚ್ಚು ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿರುವ ದ್ವಿಚಕ್ರ ವಾಹನ ಮಾರುಕಟ್ಟೆಯು ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ. ಇದೇ ಜುಲೈ ತಿಂಗಳಲ್ಲಿ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಅಬ್ಬರ ಜೋರಾಗಿರಲಿದೆ. ಬಜಾಜ್ ಸಿಎನ್‌ಜಿ ಬೈಕ್, ರಾಯಲ್ ಎನ್ ಫೀಲ್ಡ್ ಗೆರಿಲ್ಲಾ 450, ಡುಕಾಟಿ ಹೈಪರ್ ಮೋಟರ್ಡ್ 698 ಮೊನೊ ಸೇರಿದಂತೆ BMW CE 04 ನಂತಹ ಪ್ರೀಮಿಯಂ ಸ್ಕೂಟರ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ವಾಹನಗಳ ಬಿಡುಗಡೆ ದಿನಾಂಕ, ಅಂದಾಜು ಬೆಲೆ ಸೇರಿದಂತೆ ಅವುಗಳ ವೈಶಿಷ್ಟ್ಯಗಳ ಕುರಿತು ನಮಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಬಜಾಜ್ ಸಿಎನ್‌ಜಿ: ಬಜಾಜ್ ಕಂಪನಿಯು ತನ್ನ ಸಿಎನ್‌ಜಿ ಬೈಕ್ ಅನ್ನು ಜುಲೈ 5ರಂದು ಜಗತ್ತಿಗೆ ಅನಾವರಣಗೊಳಿಸಲಿದೆ. ಬಿಡುಗಡೆ ಬಳಿಕ ಇದು ವಿಶ್ವದ ಮೊದಲ ಸಿಎನ್‌ಜಿ ಬೈಕ್ ಎಂಬ ಖ್ಯಾತಿ ಪಡೆಯಲಿದೆ. ಬಜಾಜ್ ಸಿಎನ್‌ಜಿ ಬೈಕ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಒಂದು ನಗರ ಪ್ರದೇಶಗಳಿಗಾದರೇ ಮತ್ತೊಂದು ಗ್ರಾಮೀಣ ಪ್ರದೇಶಗಳಿಗಾಗಿ ಒರಟಾದ ಆವೃತ್ತಿಯಾಗಿದೆ. ಬೆಲೆ ಸುಮಾರು 80,000 ರೂ.ಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

july-month-two-wheeler-launches-bajaj-cng-bike-bmw-ce-04-re-guerrilla-450

ರಾಯಲ್ ಎನ್ ಫೀಲ್ಡ್ ಗೆರಿಲ್ಲಾ 450: ಈ ತಿಂಗಳು ಅನಾವರಣಗೊಳ್ಳಲಿರುವ ಎರಡನೇ ಬಹುನಿರೀಕ್ಷಿತ ಬೈಕ್ ಎಂದರೆ ರಾಯಲ್ ಎನ್‌ಫೈಲ್ಡ್ ಗೆರಿಲ್ಲಾ 450 ಆಗಿದೆ. ಇದು 452 ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 39.47 ಬಿಹೆಚ್‌ಪಿ ಪವರ್ ಮತ್ತು 40 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಗೆರಿಲ್ಲಾ 450 ಕನಿಷ್ಠ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ. ಟಾಪ್ ವೇರಿಯೆಂಟ್ ಹಿಮಾಲಯನ್‌ನಲ್ಲಿ ನೋಡಿದಂತೆಯೇ ಅದೇ TFT ಡಿಸ್ಪ್ಲೇ ಹೊಂದಿರಲಿದೆ. ಆದರೆ ಇನ್ನೊಂದು ವೇರಿಯೆಂಟ್ ಸೂಪರ್ ಮೆಟಿಯರ್ 650 ಶೈಲಿಯ ಅನಲಾಗ್ ಡಿಸ್ಪ್ಲೇ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಹೊಂದಿದೆ ಎನ್ನಲಾಗಿದೆ. ಇದರ ಎಕ್ಸ್‌ಶೋ ರೂಂ ಬೆಲೆಯು 2.30 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು.

july-month-two-wheeler-launches-bajaj-cng-bike-bmw-ce-04-re-guerrilla-450

BMW ಕಂಪನಿಯು ಭಾರತದಲ್ಲಿ ತನ್ನ ಮೊದಲ ಬಿಎಂಡಬ್ಲ್ಯು ಸಿಇ 04 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಜುಲೈ 24 ರಂದು ಪರಿಚಯಿಸಲಿದೆ. ಇದು 15kW, ಪರ್ಮನೆಂಟ್ ಮ್ಯಾಗ್ನೆಟ್, ಲಿಕ್ವಿಡ್-ಕೂಲ್ಡ್ ಸಿಂಕ್ರೊನಸ್ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಹಾಗೆಯೇ 8.9kWh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಸ್ಕೂಟರ್ 130 ಕಿ.ಮೀ ಓಡುತ್ತದೆ. ಸುಮಾರು 10 ರಿಂದ 11 ಲಕ್ಷ ರೂ. ಎಕ್ಸ್ ಶೋರೂಂ ಬೆಲೆ ನಿರೀಕ್ಷೆಯಿದೆ.

ಡುಕಾಟಿ ಹೈಪರ್ ಮೋಟರ್ಡ್ 698 ಮೊನೊ: ಡುಕಾಟಿ ಹೈಪರ್‌ಮೋಟಾರ್ಡ್ 698 ಮೊನೊ ಬಿಡುಗಡೆ ಇದೆ ತಿಂಗಳಲ್ಲಿ ಇರಲಿದೆ. ಇದು 659 ಸಿಸಿ, ಲಿಕ್ವಿಡ್ ಕೂಲ್ಡ್ ಸೂಪರ್‌ಕ್ವಾಡ್ರೊ ಮೊನೊ ಎಂಜಿನ್ ಹೊಂದಿದೆ. 77.5bhp ಪವರ್ ಮತ್ತು 63Nm ಟಾರ್ಕ್ ಉತ್ಪಾದಿಸುತ್ತದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿರುವ ಬೈಕ್ ಆಗಿದೆ.

july-month-two-wheeler-launches-bajaj-cng-bike-bmw-ce-04-re-guerrilla-450

ಇದು ವಿವಿಧ ರೈಡ್ ಮೋಡ್‌ಗಳು, ಪವರ್ ಮೋಡ್‌ಗಳು ಮತ್ತು ಟ್ರಾಕ್ಷನ್ ಕಂಟ್ರೋಲ್‌ನಂತಹ ಯೋಗ್ಯವಾದ ಎಲೆಕ್ಟ್ರಾನಿಕ್ಸ್‌ನೊಂದಿಗೆ ಸಜ್ಜುಗೊಂಡಿದೆ . ಬೈಕಿನ ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು, ನಮಗಿರುವ ಮಾಹಿತಿಯ ಪ್ರಕಾರ 9 ಲಕ್ಷದಿಂದ 10 ಲಕ್ಷದವರೆಗೆ (ಎಕ್ಸ್‌ಶೋ ರೂಂ) ಇದರ ಬೆಲೆ ಇರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, July 3, 2024, 15:39 [IST]
English summary
July month two wheeler launches bajaj cng bike bmw ce 04 re guerrilla 450
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+