ಭಾರತದಲ್ಲಿ ಬಹುನಿರೀಕ್ಷಿತ ಕವಾಸಕಿ ಎಲಿಮಿನೇಟರ್ 500 ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ನಿಂಜಾ ZX-6R ಬೈಕಿನ ಬಳಿಕ ಮತ್ತೊಂದು ಬಹುನಿರೀಕ್ಷಿತ 2024ರ ಕವಾಸಕಿ ಎಲಿಮಿನೇಟರ್ 500 (Kawasaki Eliminator) ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ 2024ರ ಕವಾಸಕಿ ಎಲಿಮಿನೇಟರ್ 500 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.62 ಲಕ್ಷವಾಗಿದೆ.

ಹೊಸ 2024ರ ಕವಾಸಕಿ ಎಲಿಮಿನೇಟರ್ ಮೆಟಾಲಿಕ್ ಫ್ಲಾಟ್ ಎಂಬ ಬಣ್ಣದಲ್ಲಿ ಲಭ್ಯವಿದೆ. ಕವಾಸಕಿ ಕಂಪನಿಯು ನಿಂಜಾ ZX-6R ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಕೇವಲ ಒಂದು ದಿನದ ನಂತರ ಹೊಸ ಎಲಿಮಿನೇಟರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಕವಾಸಕಿ ಎಲಿಮಿನೇಟರ್ 500, ದುಬಾರಿ ಬೆಲೆಯ ಹೊರತಾಗಿಯೂ, ಮಿಡಲ್‌ವೇಟ್ ಕ್ರೂಸರ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಸೂಪರ್ ಮೆಟಿಯರ್ 650 ನೊಂದಿಗೆ ಡ್ಯೂಕ್ ಬೈಕ್ ಗಳಿಗೆ ಪೈಪೋಟಿ ನೀಡಬಹುದು.

Kawasaki Eliminator 500

2024ರ ಕವಾಸಕಿ ಎಲಿಮಿನೇಟರ್ 500 ಬೈಕಿನಲ್ಲಿ ಹೊಸ 451cc, ಇಂಧನ-ಇಂಜೆಕ್ಟೆಡ್, ಲಿಕ್ವಿಡ್-ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ನಿಂಜಾ 400 ಬೈಕಿನಲ್ಲಿ ನೀಡಲಾಗಿದೆ. ಆದರೆ ಅಲ್ಲಿ 6.8mm ಉದ್ದದ ಸ್ಟ್ರೋಕ್‌ನೊಂದಿಗೆ ನೀಡಿದೆ. ಈ ಹೊಸ ಕವಾಸಕಿ ಎಲಿಮಿನೇಟರ್ ಎಂಜಿನ್ 9,000rpm ನಲ್ಲಿ 44.79bhp ಮತ್ತು 6,000rpm ನಲ್ಲಿ 42.6Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಕವಾಸಕಿಯ ಎಲಿಮಿನೇಟರ್ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ. 500 ಹೈ ಟೆನ್ಸೈಲ್ ಸ್ಟೀಲ್ ಅನ್ನು ಬಳಸಿ ಮಾಡಿದ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಅನ್ನು ಹೊಂದಿದೆ, ಇದು 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್‌ಗಳನ್ನು ಹೊಂದಿದೆ.

Kawasaki Eliminator 500

ಹೊಸ ಎಲಿಮಿನೇಟರ್ ಬೈಕಿನಲ್ಲಿ 18-ಇಂಚಿನ ಮುಂಭಾಗದ ಚಕ್ರ ಮತ್ತು 16-ಇಂಚಿನ ಹಿಂದಿನ ವ್ಹೀಲ್ ಗಳನ್ನು ಹೊಂದಿದೆ. ಈ ಆಫ್‌ಸೆಟ್ ಚಕ್ರಗಳು ಕ್ರಮವಾಗಿ 130/70 ಮತ್ತು 150/80 ವಿಭಾಗದ ಟೈರ್‌ಗಳನ್ನು ಹೊಂದಿವೆ. ಇನ್ನು ಈ ಹೊಸ ಕವಾಸಕಿ ಎಲಿಮಿನೇಟರ್ 500 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಇದರೊಂದಿಗೆ ಹೆಚ್ಚಿನ ಸುರಕ್ಷತೆಗಗಾಗಿ ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳಿಂದ ಜೋಡಿಸಲಾಗಿದೆ. ಹೊಸ 2024 ಕವಾಸಕಿ ಎಲಿಮಿನೇಟರ್ ಬೈಕ್ 2,250mm ಉದ್ದ, 785mm ಅಗಲ ಮತ್ತು 1,100mm ಎತ್ತರವನ್ನು ಹೊಂಂದಿದೆ. ಇನ್ನು ಇದರ ವೀಲ್‌ಬೇಸ್ 1,520 ಎಂಎಂ ಉದ್ದವಾಗಿದೆ. ಇನ್ನು ಈ ಕ್ರೂಸರ್ 176 ಕೆಜಿ ತೂಕವನ್ನು ಹೊಂದಿದೆ. ಸೀಟ್ ಎತ್ತರವು 735 ಮಿಮೀ ಆಗಿದೆ.

Kawasaki Eliminator 500

2024ರ ಕವಾಸಕಿ ಎಲಿಮಿನೇಟರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ತೆಳುವಾದ ಟ್ಯಾಂಕ್ ಮತ್ತು ಟ್ರೆಲ್ಲಿಸ್ ಫ್ರೇಮ್ ಚಾಸಿಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಉದ್ದ ಮತ್ತು ಕಡಿಮೆ ವಿನ್ಯಾಸವು ಎಲಿಮಿನೇಟರ್‌ಗೆ ಹೆಚ್ಚು ಆಕರ್ಷಕ ಲುಕ್ ಅನ್ನು ನೀಡಿದೆ. ಬೈಕಿನ ಬಲಭಾಗದಲ್ಲಿರುವ ಎಕ್ಸಾಸೃ ಲೋ-ಸ್ಲಂಗ್ ಕ್ರೂಸರ್ ಅನ್ನು ಹೊಂದಿದೆ.

ಎಲಿಮಿನೇಟರ್‌ನಲ್ಲಿನ ಲೈಟಿಂಗ್ ಎಲ್ಲಾ ಎಲ್‌ಇಡಿ ಮತ್ತು ಬೈಕು ವೃತ್ತಾಕಾರದ ಎಲ್‌ಸಿಡಿ ಸ್ಕ್ರೀನ್ ಅನ್ನು ಹೊಂದಿದೆ. ಇದು ಕವಾಸಕಿಯ ರೈಡಿಯಾಲಜಿ ಅಪ್ಲಿಕೇಶನ್ ಮೂಲಕ ನಿಮ್ಮ ಫೋನ್‌ಗೆ ಸಂಪರ್ಕಿಸಬಹುದು. ಬೈಕ್ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಹೊಂದಿದೆ. ಇದರೊಂದಿಗೆ ಈ ಬೈಕ್ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, January 3, 2024, 11:38 [IST]
English summary
Kawasaki eliminator launched in india specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+