ಭರ್ಜರಿ ಸಿಹಿಸುದ್ದಿ: ಕವಾಸಕಿ ಬೈಕ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್‌ಫೋಲಿಯೊದಲ್ಲಿ ಇರುವ ಆಯ್ದ ಮಾಡೆಲ್‌ಗಳಲ್ಲಿ ಗ್ರಾಹಕರಿಗೆ ವೋಚರ್‌ಗಳ ರೂಪದಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ. 2023ರ ಡಿಸೆಂಬರ್ ತಿಂಗಳಿನಲ್ಲಿ ಕವಾಸಕಿ ಇಂಡಿಯಾ ಕಂಪನಿಯು ಈ ರಿಯಾಯಿತಿಗಳನ್ನು ವಿಸ್ತರಿಸಲು ನಿರ್ಧರಿಸಿದೆ.

ಕವಾಸಕಿ ಇಂಡಿಯಾ ಕಂಪನಿಯು ತನ್ನ Ninja 400 , Vulcan S , Ninja 650 ಮತ್ತು Versys 650 ಗಾಗಿ ವೋಚರ್‌ಗಳು ಲಭ್ಯವಿವೆ. ಈ ಪ್ರಯೋಜನಗಳನ್ನು ಮೇಲೆ ತಿಳಿಸಿದ ಮಾದರಿಗಳ ಎಕ್ಸ್ ಶೋರೂಂ ಬೆಲೆಗಳ ಮೇಲೆ ಪಡೆಯಬಹುದು. ಈ ರಿಯಾಯಿತಿಗಳು 2024ರ ಜನವರಿ 31 ವರೆಗೆ ಲಭ್ಯವಿರುತ್ತದೆ. ಸೀಮಿತ ಸ್ಟಾಕ್‌ಗೆ ಮಾತ್ರ ಅಥವಾ MY23 ಸ್ಟಾಕ್ ಇರುವವರೆಗೆ ಮಾತ್ರ್ ಆಗಿರುತ್ತದೆ.

Kawasaki

ರಿಯಾಯಿತಿಗಳಿಗೆ ಸಂಬಂಧಿಸಿದಂತೆ, Ninja 400 ಖರೀದಿದಾರರು ವೋಚರ್ ಅನ್ನು ಬಳಸಿಕೊಂಡು 40,000 ರೂಪಾಯಿಗಳನ್ನು ಉಳಿಸಬಹುದು. ವಲ್ಕನ್ ಎಸ್ ಕ್ರೂಸರ್ ಮತ್ತು ನಿಂಜಾ 650 ಅನ್ನು ಕ್ರಮವಾಗಿ ರೂ.60,000 ಮತ್ತು ರೂ.30,000 ರಿಯಾಯಿತಿಯಲ್ಲಿ ಖರೀದಿಸಬಹುದು. ಕೊನೆಯದಾಗಿ, ಬ್ರ್ಯಾಂಡ್‌ನ ಅಡ್ವೆಚರ್ ಟೂರರ್ ವೆರ್ಸಿಸ್ 650 ರೂ. 20,000 ವೋಚರ್ ಪ್ರಯೋಜನದೊಂದಿಗೆ ಲಭ್ಯವಿದೆ. ಈ ವೋಚರ್ ಮೊತ್ತಗಳು GST ಒಳಗೊಂಡಿವೆ.

ಇದರಲ್ಲಿ ಕವಾಸಕಿ ನಿಂಜಾ 650 ಬೈಕ್ ಲೈಮ್ ಗ್ರೀನ್ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ 2023ರ ಕವಾಸಕಿ ನಿಂಜಾ 650 ಬೈಕ್ ಅನ್ನು ಈ ತಿಂಗಳ ಮಧ್ಯದಲ್ಲಿ ವಿತರಣೆಯನ್ನು ಪ್ರಾರಂಭಿಸಲಿದೆ. ಈ ಹೊಸ 2023ರ ಮಾದರಿ ನಿಂಜಾ 650 ಬೈಕಿನ ದೊಡ್ಡ ಬದಲಾವಣೆಯೆಂದರೆ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಕೆಆರ್‌ಟಿಸಿ) ಸೆಟಪ್‌ನ ಸೇರ್ಪಡೆಯಾಗಿದ್ದು ಅದು ಎರಡು ವಿಭಿನ್ನ ಹಂತವನ್ನು ಹೊಂದಿದೆ.

Kawasaki

ಮೋಡ್ 1 ಹಂತರದಲ್ಲಿ 2023ನಿಂಜಾ 650 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸೆಟಪ್ ಕಡಿಮೆ ಒಳನುಗ್ಗುವಂತಿರುತ್ತದೆ ಆದರೆ ಮೋಡ್ 2 ರಲ್ಲಿ ಇದು ಹೆಚ್ಚು ವೇಗವಾಗಿ ಕಡಿತಗೊಳ್ಳುತ್ತದೆ. ಸಿಸ್ಟಮ್ ಅನ್ನು ಸಹ ಸಂಪೂರ್ಣವಾಗಿ ಆಫ್ ಮಾಡಬಹುದು. ಕವಾಸಕಿ ನಿಂಜಾ 650 ಬೈಕಿನಲ್ಲಿ ಹಿಂದಿನ 649ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಉಳಿಸಿಕೊಂಡಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಹಿಂದಿನ ನಿಂಜಾ 650 ಬೈಕಿನ ಸಸ್ಪೆನ್ಷನ್ ಸೆಟಪ್ ಅನ್ನು ಉಳಿಸಿಕೊಳ್ಳಲಾಗಿದೆ ಮತ್ತು ಹೊಸ ಬೈಕ್ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಅನ್ನು ಮುಂದುವರೆಸಿದೆ. 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಕ್ರಮವಾಗಿ 125 ಎಂಎಂ ಅನ್ನು ಹೊಂದಿದೆ.

ಕವಾಸಕಿ ನಿಂಜಾ 650 ಸ್ಪೋರ್ಟ್ಸ್ ಡ್ಯುಯಲ್ 300mm ಫ್ರಂಟ್ ಪೆಟಲ್ ಡಿಸ್ಕ್‌ಗಳು ಮುಂಭಾಗದಲ್ಲಿ ಡ್ಯುಯಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಸಿಂಗಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ 220m ಪೆಟಲ್ ಡಿಸ್ಕ್‌ನಲ್ಲಿ ಬ್ರೇಕಿಂಗ್ ಗಳನ್ನು ಹೊಂದಿದೆ. ಕವಾಸಕಿ ನಿಂಜಾ 650 ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 120/70 (ಮುಂಭಾಗ) ಮತ್ತು 160/60 (ಹಿಂಭಾಗ) ಡನ್‌ಲಾಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಹೊಂದಿದೆ.

ವಿನ್ಯಾಸದ ವಿಷಯದಲ್ಲಿ, 2023ರ ಕವಾಸಕಿ ನಿಂಜಾ 650 ಬೈಕಿನಲ್ಲಿ ಹೆಚ್ಚಾಗಿ ಬದಲಾಗದೆ ಉಳಿದಿದೆ. ಬೈಕ್ ಈಗ ಸ್ಲೀಕರ್ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮುಂಭಾಗದಲ್ಲಿ ಹೊಂದಿದ್ದು ಅದು ಕಿಟ್‌ಗೆ ಸ್ವಲ್ಪ ತೀಕ್ಷ್ಣವಾದ ನೋಟವನ್ನು ನೀಡುತ್ತದೆ. ಇನ್ನು ಇಂಡಿಕೇಟರ್ಸ್ ಹೊಸ ನಿಂಜಾ 650 ಫೇರಿಂಗ್‌ನಲ್ಲಿ ಸಂಯೋಜಿಸಲಾಗಿದೆ. ಕವಾಸಕಿ ಸೂಪರ್ ಬೈಕಿನಲ್ಲಿ 4.3-ಇಂಚಿನ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಹೊಸ ಪ್ಯಾನೆಲ್ ನಿಮ್ಮ ವಾಹನದ ಮಾಹಿತಿಗಳನ್ನು ವೀಕ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, January 7, 2024, 14:00 [IST]
English summary
Kawasaki extends discounts on select models details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+