ಕವಾಸಕಿ ನಿಂಜಾ 400 ಸೂಪರ್‌ಸ್ಪೋರ್ಟ್ ಬೈಕಿನ ಮೇಲೆ ಡಿಸ್ಕೌಂಟ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ (Kawasaki) ತನ್ನ ನಿಂಜಾ 400 ಬೈಕಿನ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ನೀಡಿದೆ. ಕವಾಸಕಿ ನಿಂಜಾ 400 ಸ್ಪೋರ್ಟ್ ಟೂರರ್ ಮೇಲೆ ರೂ.40,000 ವರೆಗೆ ಡಿಸ್ಕೌಂಟ್ ಅನ್ನು ಘೋಷಿಸಿದೆ. ಈ ಬೈಕಿನ ಮೇಲೆ ಮೂಲ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.24 ಲಕ್ಷವಾಗಿದೆ.
ಕವಾಸಕಿ ನಿಂಜಾ 400 (Kawasaki Ninja 400) ಬೈಕಿನ ಮೇಲಿನ ರಿಯಾಯಿತಿಯು 2024ರ ಮಾರ್ಚ್ 31ರ ವರೆಗೆ ಅಥವಾ ಸ್ಟಾಕ್ ಇರುವವರೆಗೆ ಲಭ್ಯವಿರುತ್ತದೆ ಮತ್ತು ಇದು GST ಮೊತ್ತವನ್ನು ಒಳಗೊಂಡಿರುತ್ತದೆ. ಕವಾಸಕಿ ನಿಂಜಾ 500 ಅನ್ನು ಬಿಡುಗಡೆ ಮಾಡಿದ ಬಳಿಕ ಈಗ ಕವಾಸಕಿ ನಿಂಜಾ 400 ಬೈಕಿನ ಮೇಲೆ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಎರಡೂ ಮಾದರಿಗಳು ಇಲ್ಲಿಯವರೆಗೆ ಒಂದೇ ರೀತಿಯ ಬೆಲೆಯನ್ನು ಹೊಂದಿವೆ.

ಹೊಸದಾಗಿ ಬಿಡುಗಡೆಯಾದ ಕವಾಸಕಿ ನಿಂಜಾ 500 ಬೆಲೆಯನ್ನು ಗಮನಿಸಿದರೆ, ಈ ಹೊಸ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ನಿಂಜಾ 400 ಸ್ಥಾನವನ್ನು ಪಡೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಕೆಲವು ವರದಿಗಳ ಪ್ರಕಾರ, ಕವಾಸಕಿ ನಿಂಜಾ 400 ಬೈಕನ್ನು ಸ್ಥಗಿತಗೊಳಿಸಬಹುದು. ಕವಾಸಕಿ ನಿಂಜಾ ಎಚ್2 ನಿಂದ ಕೆಲವು ಸ್ಟೈಲಿಂಗ್ ಬಿಟ್‌ಗಳನ್ನು ಎರವಲು ಪಡೆಯಲಾಗಿದೆ.
ಕೆಲವು ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಲಿಮ್ ಡ್ಯುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸ್ಲೀಕ್ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ. ಇದರೊಂದಿಗೆ ಫ್ರಂಟ್ ಕೌಲ್-ಮೌಂಟೆಡ್ ಫಂಕಿ ರಿಯರ್ ವ್ಯೂ ಮಿರರ್‌ಗಳು, ಕಡಿಮೆ-ಸೆಟ್, ಅಗಲವಾದ ಹ್ಯಾಂಡಲ್‌ಬಾರ್, ಸ್ಕಪಲಟಡ್ ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್-ಸೀಟ್ ವಿನ್ಯಾಸ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸೇರಿವೆ. ಬಾಡಿವರ್ಕ್ ಗಮನಾರ್ಹ ಪರಿಮಾಣವನ್ನು ಸೇರಿಸುತ್ತದೆ.

ಕವಾಸಕಿ ನಿಂಜಾ 400 ಗಾಗಿ ಬಣ್ಣದ ಆಯ್ಕೆಗಳಲ್ಲಿ ಲೈಮ್ ಗ್ರೀನ್ ಮತ್ತು ಮೆಟಾಲಿಕ್ ಕಾರ್ಬನ್ ಗ್ರೇ ಸೇರಿವೆ. ಈ ಎರಡೂ ಬಣ್ಣದ ಥೀಮ್‌ಗಳು ಸಮಾನವಾಗಿ ಆಕರ್ಷಕವಾಗಿವೆ. ಗ್ರೇ ಆವೃತ್ತಿಯು ಹೆಚ್ಚು ಕಾಂತೀಯ ವ್ಯಕ್ತಿತ್ವವನ್ನು ಹೊಂದಿದೆ. ಈ ಬೈಕ್ ಹೆಚ್ಚು ಅಗ್ರೇಸಿವ್, ಪ್ರಾಬಲ್ಯ ಮತ್ತು ರೋಡ್ ಗ್ರಿಪ್ ಅನ್ನು ಹೊಂದಿದೆ. ಎರಡೂ ಬಣ್ಣಗಳ ರೂಪಾಂತರಗಳು ಉತ್ಸಾಹಭರಿತ ಗ್ರಾಫಿಕ್ಸ್ ಅನ್ನು ಹೊಂದಿದ್ದು ಅದು ಹೆಚ್ಚುವರಿ ಸ್ಪೋರ್ಟಿನೆಸ್ ಅನ್ನು ಸೇರಿಸುತ್ತದೆ.
ಈ ಕವಾಸಕಿ ನಿಂಜಾ 400 ಹೈಬ್ರಿಡ್ ಕಾಕ್‌ಪಿಟ್ ಅನ್ನು ಹೊಂದಿದ್ದು, ಮಧ್ಯದಲ್ಲಿ ದೊಡ್ಡ ಅನಲಾಗ್ ಟ್ಯಾಕೋಮೀಟರ್ ಅನ್ನು ಹೊಂದಿದೆ. ಎಡಭಾಗದಲ್ಲಿ ವಾರ್ನಿಂಗ್ ಲ್ಯಾಂಪ್ ಗಳಿವೆ, ಆದರೆ ಬಲಭಾಗದಲ್ಲಿ ಮಲ್ಟಿ-ಫಂಕ್ಷನ್ ಎಲ್ಸಿಡಿ ಸ್ಕ್ರೀನ್ ಹೊಂದಿದೆ. ಸುಲಭವಾದ ವೀಕ್ಷಣೆಗಾಗಿ ಗೇರ್ ಸ್ಥಾನ ಫೋಷಿಸನ್ ಸೆಂಟ್ರಲ್ ಅಲ್ಲಿ ಇರಿಸಲಾಗಿದೆ. ಕವಾಸಕಿ ನಿಂಜಾ 400 ಬೈಕಿನಲ್ಲಿ 399ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್, DOCH, 8 ವಾಲ್ವ್ ಮೋಟಾರ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 45 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಹಿಂಭಾಗದಲ್ಲಿ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ಗ್ಯಾಸ್ ಚಾರ್ಜ್ಡ್ ಮೊನೊಶಾಕ್ ಸಸ್ಪೆಂಕ್ಷನ್ ಅನ್ನು ಹೊಂದಿದೆ.
ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೇಕಿಂಗ್ ಅನ್ನು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 310 ಎಂಎಂ ಮತ್ತು 220 ಎಂಎಂ ಪೆಟಲ್ ಡಿಸ್ಕ್‌ಗಳನ್ನು ಹೊಂದಿದೆ. ಇನ್ನು ಇದರ ಜೊತೆಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








