ದಸರಾ ಹಬ್ಬಕ್ಕೆ ಮನೆಗೆ ತನ್ನಿ ಈ ಪಾಕೆಟ್ ರಾಕೆಟ್: ಜನಪ್ರಿಯ ಕವಾಸಕಿ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಕವಾಸಕಿ ನಿಂಜಾ 650 ಬೈಕ್ ಅನ್ನು ಮಾರಾಟ ಮಾಡುತ್ತಿದೆ. ಕವಾಸಕಿ ಕಂಪನಿಯು ಹೈ ಪಾರ್ಫಾಮೆನ್ಸ್ ಮಲ್ಟಿ-ಸಿಲಿಂಡರ್ ಬೈಕುಗಳ ವ್ಯಾಪಕ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇದರಲ್ಲಿ ಕವಾಸಕಿಯು ತನ್ನ ನಿಂಜಾ 650 ಬೈಕಿನ ಮೇಲೆ ಹಬ್ಬದ ಸೀಸನ್ ನಲ್ಲಿ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಬೈಕ್ ಅನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ. ಕವಾಸಕಿ ನಿಂಜಾ 650 (Kawasaki Ninja 650) ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಜನಪ್ರಿಯ ಮಿಡ್ ಸೈಜ್ ಬೈಕುಗಳಲ್ಲಿ ಒಂದಾಗಿದೆ.

ಕವಾಸಕಿ ಕಂಪನಿಯು 2024ರ ಅಕ್ಟೋಬರ್‌ ತಿಂಗಳಿನಲ್ಲಿ ಕವಾಸಕಿ ನಿಂಜಾ 650 ಬೈಕಿನ ಮೇಲೆ ರೂ. 25,000 ರಿಯಾಯಿತಿಯನ್ನು ನೀಡುತ್ತಿದೆ. ಅಕ್ಟೋಬರ್ ಅಂತ್ಯದವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳಿಗೆ ಮಾತ್ರ ಆಫರ್ ಮಾನ್ಯವಾಗಿರುತ್ತದೆ. ಈ ಸೂಪರ್ ಬೈಕ್ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.6.91 ಲಕ್ಷವಾಗಿದೆ. ಈ ಕವಾಸಕಿ ನಿಂಜಾ 650 ಬೈಕ್ ಲೈಮ್ ಗ್ರೀನ್ ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತು.

Kawasaki Ninja 650

ಈ ಹೊಸ ನಿಂಜಾ 650 ಬೈಕಿನ ದೊಡ್ಡ ಬದಲಾವಣೆಯೆಂದರೆ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಕೆಆರ್‌ಟಿಸಿ) ಸೆಟಪ್‌ನ ಸೇರ್ಪಡೆಯಾಗಿದ್ದು ಅದು ಎರಡು ವಿಭಿನ್ನ ಹಂತವನ್ನು ಹೊಂದಿದೆ. ಮೋಡ್ 1 ಹಂತರದಲ್ಲಿ ನಿಂಜಾ 650 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸೆಟಪ್ ಕಡಿಮೆ ಒಳನುಗ್ಗುವಂತಿರುತ್ತದೆ ಆದರೆ ಮೋಡ್ 2 ರಲ್ಲಿ ಇದು ಹೆಚ್ಚು ವೇಗವಾಗಿ ಕಡಿತಗೊಳ್ಳುತ್ತದೆ. ಸಿಸ್ಟಮ್ ಅನ್ನು ಸಹ ಸಂಪೂರ್ಣವಾಗಿ ಆಫ್ ಮಾಡಬಹುದು.

ಈ ಕವಾಸಕಿ ಬೈಕ್ ಸ್ಲೀಕರ್ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮುಂಭಾಗದಲ್ಲಿ ಹೊಂದಿದ್ದು ಅದು ಕಿಟ್‌ಗೆ ಸ್ವಲ್ಪ ತೀಕ್ಷ್ಣವಾದ ನೋಟವನ್ನು ನೀಡುತ್ತದೆ. ಇನ್ನು ಇಂಡಿಕೇಟರ್ಸ್ ಹೊಸ ನಿಂಜಾ 650 ಫೇರಿಂಗ್‌ನಲ್ಲಿ ಸಂಯೋಜಿಸಲಾಗಿದೆ. ಕವಾಸಕಿ ಸೂಪರ್ ಬೈಕಿನಲ್ಲಿ 4.3-ಇಂಚಿನ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Kawasaki Ninja 650

ಈ ಹೊಸ ಪ್ಯಾನೆಲ್ ನಿಮ್ಮ ವಾಹನದ ಮಾಹಿತಿ ಮತ್ತು ಸ್ಥಿತಿಯನ್ನು ವೀಕ್ಷಿಸಲು ನಿಮಗೆ ಅನುಮತಿಸುವ ಕವಾಸಕಿ ರೈಡಿಯಾಲಜಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯನ್ನು ನೀಡುತ್ತದೆ. ಜನಪ್ರಿಯ ಕವಾಸಕಿ ನಿಂಜಾ 650 ಸೂಪರ್ ಬೈಕಿನಲ್ಲಿ 649ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಕವಾಸಕಿ ನಿಂಜಾ 650 ಬೈಕಿನ ಸಸ್ಪೆನ್ಷನ್ ಸೆಟಪ್, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಕ್ರಮವಾಗಿ 125 ಎಂಎಂ ಅನ್ನು ಹೊಂದಿದೆ. ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 120/70 (ಮುಂಭಾಗ) ಮತ್ತು 160/60 (ಹಿಂಭಾಗ) ಡನ್‌ಲಾಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಹೊಂದಿದೆ.

ಇನ್ನು ಕವಾಸಕಿ ನಿಂಜಾ 650 ಬೈಕಿನ ಸಸ್ಪೆನ್ಷನ್ ಸೆಟಪ್, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಕ್ರಮವಾಗಿ 125 ಎಂಎಂ ಅನ್ನು ಹೊಂದಿದೆ. ಬೈಕಿನಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, 120/70 (ಮುಂಭಾಗ) ಮತ್ತು 160/60 (ಹಿಂಭಾಗ) ಡನ್‌ಲಾಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, October 8, 2024, 8:30 [IST]
English summary
Kawasaki ninja 650 gets discount in october 2024 details
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+