ಕವಾಸಕಿ ನಿಂಜಾ 650 ಬೈಕ್‌ಗೆ ಭರ್ಜರಿ ಆಫರ್: ಎಕ್ಸ್‌ಶೋ ರೂಮ್ ಬೆಲೆ ಮತ್ತಷ್ಟು ಅಗ್ಗ ಈಗ!
ಸದ್ಯಕ್ಕೆ ಪ್ರಖ್ಯಾತ ಬೈಕ್ ನಿರ್ಮಾಣ ಕಂಪನಿಯಾದ ಕವಾಸಕಿ ಭಾರತೀಯ ಗ್ರಾಹಕರನ್ನು ಸಾಕಷ್ಟು ರೀತಿಯಲ್ಲಿ ಆಕರ್ಷಿಸುತ್ತಲೇ ಇದೆ. ಈಗಾಗಲೇ ಕವಾಸಕಿ ಭಾರತದಲ್ಲಿ ನಿಂಜಾ 500 ಬೈಕ್ ಅನ್ನು ಲಾಂಚ್ ಮಾಡಿ ಭಾರೀ ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಹೌದು, ಕವಾಸಕಿಯ ಪ್ರಖ್ಯಾತ ಬೈಕ್ ಮಾಡೆಲ್‌ಗೆ ಭಾರೀ ಡಿಸ್ಕೌಂಟ್ ಅನ್ನು ಘೋಷಿಸಿದೆ. ಈ ಮೂಲಕ ಕವಾಸಕಿ ಬೈಕ್ ಪ್ರೇಮಿಗಳ ಮುಖದಲ್ಲಿ ನಗು ಮೂಡಿಸಿದ್ದು, ಇಂದಿನ ಈ ಲೇಖನದಲ್ಲಿ ಅದು ಯಾವ ಬೈಕ್ ಮತ್ತು ಆ ಬೈಕ್‌ನ ವಿಶೇಷತೆಗಳೇನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಹೇಳಲಿದ್ದು, ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

ಕವಾಸಕಿಯ ಪ್ರಸಿದ್ದ ಬೈಕ್ ಮಾಡೆಲ್ ಆದ ನಿಂಜಾ 650 ಬೈಕ್‌ಗೆ (Kawasaki Ninja 650) ಕವಾಸಕಿ ಸುಮಾರು 30000 ಸಾವಿರ ರೂಗಳ ಸೌಲಭ್ಯವನ್ನು ನೀಡುತ್ತಿದೆ. ಕವಾಸಕಿ ಈ ರಿಯಾಯಿತಿಯನ್ನು ಗುಡ್ ಟೈಮ್ ವೌಚರ್ ಬೆನಿಫಿಟ್ ಎಂದು ಕರೆಯುತ್ತಿದ್ದು, ಹಲವಾರು ದಿನಗಳಿಂದ ಈ ಬೈಕ್ ಅನ್ನು ಖರೀದಿಸಬೇಕು ಎಂದುಕೊಂಡವರಿಗೆ ಭರ್ಜರಿ ಆಫರ್ ಇದಾಗಿದೆ. ಬೈಕ್‌ನ ಎಕ್ಸ್ ಶೋರೂಮ್ ಬೆಲೆಗೆ ಈ ವೌಚರ್ ಅನ್ನು ಬಳಸಬಹುದಾಗಿದ್ದು ಈ ಆಪರ್ ಮಾರ್ಚ್ 1 ರಿಂದ 31 ಮಾರ್ಚ್ ವರೆಗೆ ಲಭ್ಯವಿದೆ.
ಇನ್ನು ಈ ಬೈಕ್‌ನ ಇತರ ವಿಶೇಷತೆಗಳನ್ನು ನೋಡುವುದಾದರೆ, ಕವಾಸಕಿ ಕಂಪನಿ ಭಾರತದಲ್ಲಿ ಮಾರಾಟ ಮಾಡುತ್ತಿರುವ ಬೈಕ್ ಮಾದರಿಗಳಲ್ಲಿ ಪ್ರಸಿದ್ದವಾಗಿರುವ ಮಾಡೆಲ್. ಹೊಸ ಮಾದರಿ ನಿಂಜಾ 650 ಬೈಕಿನ ದೊಡ್ಡ ಬದಲಾವಣೆಯೆಂದರೆ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಕೆಆರ್‌ಟಿಸಿ) ಸೆಟಪ್‌ನ ಸೇರ್ಪಡೆಯಾಗಿದ್ದು ಅದು ಎರಡು ವಿಭಿನ್ನ ಹಂತವನ್ನು ಹೊಂದಿದೆ.

ಮೋಡ್ 1 ಹಂತರದಲ್ಲಿ ನಿಂಜಾ 650 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸೆಟಪ್ ಕಡಿಮೆ ಒಳನುಗ್ಗುವಂತಿರುತ್ತದೆ ಆದರೆ ಮೋಡ್ 2 ರಲ್ಲಿ ಇದು ಹೆಚ್ಚು ವೇಗವಾಗಿ ಕಡಿತಗೊಳ್ಳುತ್ತದೆ. ಸಿಸ್ಟಮ್ ಅನ್ನು ಸಹ ಸಂಪೂರ್ಣವಾಗಿ ಆಫ್ ಮಾಡಬಹುದು. ನಿಂಜಾ 650 ಬೈಕಿನಲ್ಲಿ ಹಿಂದಿನ 649ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಉಳಿಸಿಕೊಂಡಿದೆ. ಈ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಹಿಂದಿನ ನಿಂಜಾ 650 ಬೈಕಿನ ಸಸ್ಪೆನ್ಷನ್ ಸೆಟಪ್ ಅನ್ನು ಉಳಿಸಿಕೊಳ್ಳಲಾಗಿದೆ ಮತ್ತು ಹೊಸ ಬೈಕ್ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಅನ್ನು ಮುಂದುವರೆಸಿದೆ. 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಕ್ರಮವಾಗಿ 125 ಎಂಎಂ ಅನ್ನು ಹೊಂದಿದೆ.

ವಿನ್ಯಾಸದ ವಿಷಯದಲ್ಲಿ ಬೈಕ್ ಈಗ ಸ್ಲೀಕರ್ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮುಂಭಾಗದಲ್ಲಿ ಹೊಂದಿದ್ದು ಅದು ಕಿಟ್‌ಗೆ ಸ್ವಲ್ಪ ತೀಕ್ಷ್ಣವಾದ ನೋಟವನ್ನು ನೀಡುತ್ತದೆ. ಇನ್ನು ಇಂಡಿಕೇಟರ್ಸ್ ಹೊಸ ನಿಂಜಾ 650 ಫೇರಿಂಗ್‌ನಲ್ಲಿ ಸಂಯೋಜಿಸಲಾಗಿದೆ. ಕವಾಸಕಿ ಸೂಪರ್ ಬೈಕಿನಲ್ಲಿ 4.3-ಇಂಚಿನ TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಹೊಸ ಪ್ಯಾನೆಲ್ ನಿಮ್ಮ ವಾಹನದ ಮಾಹಿತಿಗಳನ್ನು ವೀಕ್ಷಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications