ಮತ್ತಷ್ಟು ಕಲರ್‌ಫುಲ್‌ ಆದ ಕವಾಸಕಿ ನಿಂಜಾ ZX-6R ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ 2024ರ ಕವಾಸಕಿ ನಿಂಜಾ ZX-6R (Kawasaki Ninja ZX-6R) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಿಡುಗಡೆಗೊಳಿಸಿಸಲಾಗಿದೆ. 2024ರ ಕವಾಸಕಿ ನಿಂಜಾ ZX-6R ಬೈಕನ್ನು 2023ರ EICMA ರಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದ ಕೇವಲ ಒಂದು ತಿಂಗಳ ನಂತರ ಡಿಸೆಂಬರ್‌ನಲ್ಲಿ 2023ರ ಇಂಡಿಯಾ ಬೈಕ್ ವೀಕ್ ನಲ್ಲಿ ಪ್ರದರ್ಶಿಸಿದ್ದರು. 2024ರ ಕವಾಸಕಿ ನಿಂಜಾ ZX-6R ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.09 ಲಕ್ಷಕೆಕ್ ಬಿಡುಗಡೆಗೊಂಡಿತು, ಬೆಲೆ ಏರಿಕೆ ಬಳಿಕ ಇದೀಗ ರೂ.11.20 ಲಕ್ಷವಾಗಿದೆ.

ಇದೀಗ ಅಂತಾರಾಷ್ಟ್ರೀಯವಾಗಿ ಲಭ್ಯವಿರುವ ಕವಾಸಕಿ ನಿಂಜಾ ZX-6R ಬೈಕ್ ಗಾಗಿ ರಡು ಹೊಸ ಬಣ್ಣಗಳ ಆಯ್ಕೆಯನ್ನು ನೀಡಿದೆ. ಇದು ಪರ್ಲ್ ರೋಬೋಟಿಕ್ ವೈಟ್/ಮೆಟಾಲಿಕ್ ಗ್ರ್ಯಾಫೈಟ್ ಗ್ರೇ ಮತ್ತು ಮೆಟಾಲಿಕ್ ಮ್ಯಾಟ್ ಡಾರ್ಕ್ ಗ್ರೇ/ಎಬೊನಿ ಆಗಿದೆ. ಸದ್ಯ ಭಾರತದಲ್ಲಿ ಕವಾಸಕಿ ನಿಂಜಾ ZX-6R ಬೈಕ್ ಗ್ರೇ/ಬ್ಲ್ಯಾಕ್ ಮತ್ತು ಲೈಮ್ ಗ್ರೀನ್/ಬ್ಲಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿವೆ. ಭಾರತದಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸಬಹುದು.

Kawasaki Ninja ZX-6R

ಭಾರತದಲ್ಲಿ ಕವಾಸಕಿ ನಿಂಜಾ ZX-6R ಬೈಕ್ ನವೀಕರಿಸಿದ ವಿನ್ಯಾಸ, ಹೊಸ ತಂತ್ರಜ್ಞಾನ ಮತ್ತು ಹೊರಸೂಸುವಿಕೆ-ಕಂಪ್ಲೈಂಟ್ ಎಂಜಿನ್ ರೂಪದಲ್ಲಿ ಕೆಲವು ನವೀಕರಣಗಳೊಂದಿಗೆ ಬಂದಿತು. ಈ ಪವರ್‌ಫುಲ್‌ ಕವಾಸಕಿ ನಿಂಜಾ ZX-6R ಪವರ್ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕವಾಸಕಿ ನಿಂಜಾ ZX-6R ಬೈಕ್ ವಿನ್ಯಾಸ ಬದಲಾವಣೆಗಳ ಬಗ್ಗೆ ಹೇಳುವುದಾದರೆ, ಹೊಸ ಫ್ರಂಟ್ ಕೌಲ್, LED ಹೆಡ್‌ಲೈಟ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ಮತ್ತು ನವೀಕರಿಸಿದ ಫೇರಿಂಗ್‌ನೊಂದಿಗೆ ನವೀಕರಿಸಿದ ಮುಂಭಾಗದ ಫಾಸಿಕ ರೂಪದಲ್ಲಿ ಬರುತ್ತವೆ.

ಕವಾಸಕಿ ನಿಂಜಾ ZX-6R ಬೈಕಿನ ಟೆಕ್ ಅಪ್‌ಗ್ರೇಡ್‌ಗಳು ಹೊಸ 4.3-ಇಂಚಿನ TFT ಫುಲ್ ಕಲರ್ ಡಿಸ್‌ಪ್ಲೇ ರೂಪದಲ್ಲಿದೆ.ಇದು ರೈಡಿಯಾಲಜಿ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕವನ್ನು ನೀಡುತ್ತದೆ. ಡಿಸ್‌ಪ್ಲೇ ನೀವು ರೈಡಿಂಗ್ ಮೋಡ್‌ಗಳು ಮತ್ತು ಸಂಪೂರ್ಣ ಸಲಕರಣೆಗಳ ಬದಲಾವಣೆಯನ್ನು ನೋಡಬಹುದಾಗಿದೆ. ಈ ಹೊಸ ಕವಾಸಕಿ ನಿಂಜಾ ZX-6R ಬೈಕಿನಲ್ಲಿಸ್ಪೋರ್ಟ್, ರೋಡ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

Kawasaki Ninja ZX-6R

ಈ ನಿಂಜಾ ZX-6R ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (KTRC) ಸಿಸ್ಟಂ ಸಹ ಹೊಂದಿದೆ. ಕವಾಸಕಿ ನಿಂಜಾ ZX-6R ಬೈಕಿನಲ್ಲಿ 636cc, ಇನ್‌ಲೈನ್ ನಾಲ್ಕು ಸಿಲಿಂಡರ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000rpm ನಲ್ಲಿ 127.6bhp ಮತ್ತು 11,000rpm ನಲ್ಲಿ 69Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. BS-VI ಎಮಿಷನ್ ನಾರ್ಮ್ಸ್-ಕಂಪ್ಲೈಂಟ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಕವಾಸಕಿ ನಿಂಜಾ ZX-6R ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಜೊತೆಗೆ ಕ್ವಿಕ್-ಶಿಫ್ಟರ್ ಅನ್ನು ಹೊಂದಿದೆ, ಇದು ಅಲ್ಟ್ರಾ-ಕ್ವಿಕ್, ಫುಲ್ ಪವರ್ ಅಪ್‌ಶಿಫ್ಟ್‌ಗಳು ಮತ್ತು ತಡೆರಹಿತ ಆಕ್ಸೆಲೇರೆಷನ್ ಅನುಮತಿಸುತ್ತದೆ ಎಂದು ಕವಾಸಕಿ ಹೇಳುತ್ತದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಶೋವಾ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದ್ದು, ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ.

Kawasaki Ninja ZX-6R

ಈ ಕವಾಸಕಿ ನಿಂಜಾ ZX-6R 17 ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಡ್ಯುಯಲ್ ರೇಡಿಯಲ್-ಮೌಂಟೆಡ್ 4-ಪಿಸ್ಟನ್ ಮೊನೊಬ್ಲಾಕ್ ಕ್ಯಾಲಿಪರ್‌ಗಳಿಂದ ಕೆಳಗೆ ಜೋಡಿಸಲಾದ ಮುಂಭಾಗದಲ್ಲಿ ಟ್ವಿನ್ 320 ಎಂಎಂ ಡಿಸ್ಕ್‌ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನಿಂದ ಕ್ಲ್ಯಾಂಪ್ ಮಾಡಲಾದ 220 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರ ಜೊತೆ ಹೆಚ್ಚಿನ ಸುರಕ್ಷತೆಗಾಗಿ ನವೀಕರಿಸಿದ ಡ್ಯುಯಲ್-ಚಾನೆಲ್ ABS ಸಿಸ್ಟಮ್‌ ಅನ್ನು ನೀಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್

More from DriveSpark

Article Published On: Sunday, June 9, 2024, 15:00 [IST]
English summary
Kawasaki ninja zx 6r bike gets new colours details
Read more on kawasaki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+