ಆಕರ್ಷಕ ಕವಾಸಕಿ ವರ್ಸಿಸ್ 650 ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಕವಾಸಕಿ ವರ್ಸಿಸ್ 650 ಬೈಕ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಕವಾಸಕಿ ವರ್ಸಿಸ್ 650 ಬೈಕ್ ಮೇಲೆ ಎಕ್ಸ್ ಶೋ ರೂಂ ಬೆಲೆಯಲ್ಲಿ 45,000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯು ಮಾರ್ಚ್ 31 ರವರೆಗೆ ಅಥವಾ ಸ್ಟಾಕ್ ಇರುವವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದು ಜಿಎಸ್‌ಟಿಯನ್ನು ಒಳಗೊಂಡಿದೆ.
ಕವಾಸಕಿ ವರ್ಸಿಸ್ 650 (Kawasaki Versys 650) ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 7,77,000 ಆಗಿದೆ. ಈ ಕವಾಸಕಿ ವರ್ಸಿಸ್ 650 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 649 ಸಿಸಿ, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 65.71 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಎರಡು-ಪಿಸ್ಟನ್ ಕ್ಯಾಲಿಪರ್‌ಗಳಿಂದ ಕ್ಲ್ಯಾಂಪ್ ಮಾಡಲಾದ ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್‌ಗಳು ಮತ್ತು ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಈ ಕವಾಸಕಿ ವರ್ಸಿಸ್ 650 ಬೈಕ್ 120/70 - ZR17 (ಮುಂಭಾಗ) ಮತ್ತು 160/60 - ZR17 (ಹಿಂಭಾಗ) ಟೈರ್‌ಗಳೊಂದಿಗೆ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಿದ್ದಾರೆ.
ಕವಾಸಕಿ ವರ್ಸಿಸ್ 650 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಡೈಮಂಡ್ ಫ್ರೇಮ್ ಸೆಟಪ್ ಅನ್ನು ಶೋವಾದಿಂದ ಮುಂಭಾಗದಲ್ಲಿ 41 ಎಂಎಂ ಇನವರ್ಟಡ್ ಟೆಲಿಸ್ಕೋಪಿಕ್ ಫೋರ್ಕ್ ಜೊತೆಗೆ ಮುಂಭಾಗದಲ್ಲಿ ಸರಿಹೊಂದಿಸಬಹುದಾದ ರೀಬೌಂಡ್ ಡ್ಯಾಂಪಿಂಗ್ ಮತ್ತು ಪೂರ್ವ ಲೋಡ್ ಹೊಂದಾಣಿಕೆಯೊಂದಿಗೆ ಹಿಂಭಾಗದಲ್ಲಿ ಶೋವಾ ಮೊನೊಶಾಕ್ ಅನ್ನು ಒಳಗೊಂಡಿದೆ.

ಈ ಕವಾಸಕಿ ವರ್ಸಿಸ್ 650 ಬೈಕಿನ ವಿನ್ಯಾಸಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾದ ಬದಲಾವಣೆಯನ್ನು ಪಡೆದುಕೊಂಡಿದೆ, ಅದು ಈಗ ಅದರ ದೊಡ್ಡದಾದ ವರ್ಸಿಸ್ 1000 ಸಹೋದರರಿಂದ ಸ್ಫೂರ್ತಿ ಪಡೆದಿದೆ. ಮುಂಭಾಗದಲ್ಲಿ ಅರ್ಧ-ಫೇರಿಂಗ್ ಹೊಸ ಡ್ಯುಯಲ್ LED ಹೆಡ್‌ಲೈಟ್‌ಗಳ ಕೆಳಗೆ ಸಣ್ಣ ಬೀಕ್ ನಂತಹ ಅಂಶವನ್ನು ಹೊಂದಿದೆ.
ಕವಾಸಕಿ ವರ್ಸಿಸ್ 650 ಹೊಸ ನಾಲ್ಕು-ಮಾರ್ಗದ ಹೊಂದಾಣಿಕೆಯ ವಿಂಡ್‌ಸ್ಕ್ರೀನ್ ಅನ್ನು ಸಹ ನೋಡಲಾಗಿದೆ. ಹೊಸ ಬೈಕ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಈ ಕವಾಸಕಿ ವರ್ಸಿಸ್ 650 ಬೈಕ್ ಲೈಮ್ ಗ್ರೀನ್ ಮತ್ತು ಮೆಟಾಲಿಕ್ ಫ್ಯಾಂಟಮ್ ಸಿಲ್ವರ್ ಎಂಬ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಕವಾಸಕಿ ವರ್ಸಿಸ್ 650 ಬೈಕ್ ಎರಡು ವಿಭಿನ್ನ ಮೋಡ್‌ಗಳನ್ನು ಒಳಗೊಂಡಿರುವ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಕೆಟಿಆರ್‌ಸಿ) ಅನ್ನು ಒಳಗೊಂಡಿದೆ.

ಈ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಸಹ ಆಫ್ ಮಾಡಬಹುದು..ಕವಾಸಕಿ ವರ್ಸಿಸ್ 650 ಬೈಕ್ ಸಹ ಹೊಚ್ಚ ಹೊಸ TFT ಡಿಸ್ ಪ್ಲೇಯನ್ನು ಹೊಂದಿದೆ. ಈ TFT ಡಿಸ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಸಹ ನೀಡುತ್ತದೆ. ಈ ಅಡ್ವೆಂಚರ್ ಟೂರರ್ ಬೈಕಿನ ವಿನ್ಯಾಸ ಮತ್ತು ರಕ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಅಕ್ಸೆಸರೀಸ್ ಗಳನ್ನು ಆಯ್ಕೆ ಮಾಡಬಹುದು.
ಇದರಲ್ಲಿ ಲಗೇಜ್ ಪರಿಕರಗಳು, ಒಕ್ಸಲರಿ ಲೈಟ್ಸ್ ಮತ್ತು ಕ್ರ್ಯಾಶ್ ಪ್ರೊಟೆಕ್ಷನ್ ಹಾರ್ಡ್‌ವೇರ್ ಅನ್ನು ಒಳಗೊಂಡಿದೆ. ಅಕ್ಸೆಸರೀಸ್ ಪಟ್ಟಿಯಲ್ಲಿ, ಸ್ಲೈಡರ್, ಟ್ಯಾಂಕ್ ಪ್ಯಾಡ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್‌ನಂತಹ ಅಕ್ಸೆಸರೀಸ್ ಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಹೀಟೆಡ್ ಗ್ರಿಪ್‌ಗಳು, ಹ್ಯಾಂಡ್‌ಗಾರ್ಡ್‌ಗಳು, ಕಂಫರ್ಟ್ ಜೆಲ್ ಸೀಟ್ ಮತ್ತು ಸ್ಪಷ್ಟ ಮತ್ತು ಸ್ಮೋಕ್ ಫಿನಿಶ್‌ನಲ್ಲಿ ಲಭ್ಯವಿರುವ ದೊಡ್ಡ ವಿಂಡ್‌ಸ್ಕ್ರೀನ್‌ನಂತಹ ಆಯ್ಕೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








