Kinetic E-Luna: ಬಹುನಿರೀಕ್ಷಿತ ಕೈನೆಟಿಕ್ ಇ-ಲೂನಾ ಬಿಡುಗಡೆಗೆ ದಿನಾಂಕ ಘೋಷಣೆ, ಬೆಲೆ ಎಷ್ಟಿರಲಿದೆ?

ಭಾರತದಲ್ಲಿ 80ರ ದಶಕದಲ್ಲಿ ಜನಮನ್ನಣೆ ಗಳಿಸಿದ್ದ ಕೈನೆಟಿಕ್ ಲೂನಾ (Kinetic Luna), ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಸದ್ಯ ಕೈನೆಟಿಕ್ ಇ-ಲೂನಾ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಕೆಲವೇ ದಿನಗಳಲ್ಲಿ ಈ ಮೊಪೆಡ್ ನಿಮ್ಮ ಮನೆ ಸೇರಲಿದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ.

ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಹೊಸ ಇ-ಲೂನಾ (E-Luna) ಮೊಪೆಡ್ ಲಾಂಚ್ ದಿನಾಂಕವನ್ನು ಘೋಷಣೆ ಮಾಡಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ನೂತನ ಕೈನೆಟಿಕ್ ಇ-ಲೂನಾ (Kinetic E-Luna), ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಜನವರಿ 26 ರಿಂದ ಈ ಮೊಪೆಡ್ ಬುಕ್ಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ರೂ.500 ಮುಂಗಡ ಹಣ ಪಾವತಿಸುವ ಮೂಲಕ ಕಾಯ್ದಿರಿಸಬಹುದು.

Kinetic E-Luna Launch At February 7, 2024

ಹೊಸ ಕೈನೆಟಿಕ್ ಇ-ಲೂನಾ ಬೆಲೆ ಬಗ್ಗೆ ಕಂಪನಿಯು ಎಲ್ಲಿಯೂ ವಿವರವನ್ನು ಬಹಿರಂಗಪಡಿಸಿಲ್ಲ. ರೂ.50,000 ದಿಂದ ರೂ.70,000 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಶುಕ್ರವಾರವೇ ಇ-ಕಾಮರ್ಸ್ ದೈತ್ಯ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮುಂಬರುವ ಇ-ಲೂನಾ ಬೆಲೆಗಳು ಸೋರಿಕೆಯಾಗಿತ್ತು. ಕೆಲವೇ ಗಂಟೆಗಳ ಬಳಿಕ ಅದನ್ನು ತೆಗೆಯಲಾಗಿತ್ತು.

ನೂತನ ಕೈನೆಟಿಕ್ ಇ-ಲೂನಾ (Kinetic E-Luna), ಹೇಗಿರಲಿದೆ, ಭರ್ತಿ ಚಾರ್ಜ್ ನಲ್ಲಿ ಎಷ್ಟು ದೂರ ಕ್ರಮಿಸಲಿದೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಆದರೂ ಮೂಲಗಳ ಪ್ರಕಾರ, ಈ ಮೊಪೆಡ್ ಸಂಪೂರ್ಣ ಚಾರ್ಜ್ ನಲ್ಲಿ 110 ಕಿಲೋಮೀಟರ್ (ಮೈಲೇಜ್) ನೀಡಲಿದೆ. ಗಂಟೆಗೆ 50 ಕಿ.ಮೀ ವೇಗವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

Kinetic E-Luna Launch At February 7, 2024

ಇದಿಷ್ಟೇ ಅಲ್ಲದೆ, ಇ-ಲೂನಾ ಟ್ಯೂಬ್ ಟೈಯರ್ ಆಯ್ಕೆಯನ್ನು ಹೊಂದಿರಲಿದ್ದು, 2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪೂರ್ತಿ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಜೊತೆಗೆ ಅತ್ಯಾಧುನಿಕ ಎಲ್‌ಸಿಡಿ ಡ್ಯಾಶ್ ಬೋರ್ಡ್ ಪಡೆದಿರಲಿದ್ದು, ಓಷನ್ ಬ್ಲೂ, ಮಲ್ಬೆರಿ ರೆಡ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೆ ದೊರೆಯಲಿದೆ ಎಂಬ ನೀರಿಕ್ಷೆಯಿದೆ.

ಕೈನೆಟಿಕ್ ಲೂನಾ ಮೊಪೆಡ್ ಹಿನ್ನೆಲೆಯನ್ನು ನೋಡುವುದಾದರೆ, 1970ರ ದಶಕದ ಪ್ರಾರಂಭದಲ್ಲಿ ಬಿಡುಗಡೆಯಾಗಿದ್ದ ಲೂನಾ ದ್ವಿಚಕ್ರ ವಾಹನ ಮಾರುಕಟ್ಟೆಯ ಮೊಪೆಡ್ ವಿಭಾಗದಲ್ಲಿ 95% ಪಾಲನ್ನು ಹೊಂದಿತ್ತು. ಆಗಿನ ದಿನಮಾನಗಳಲ್ಲಿ ಕಂಪನಿಯು ಪ್ರತಿದಿನ ಸರಿಸುಮಾರು 2,000 ಯುನಿಟ್‌ ಲೂನಾ ಮೊಪೆಡ್ ಮಾರಾಟಗೊಳಿಸುತ್ತಿತ್ತು. ಆದರೆ, ಹೊರಸೂಸುವಿಕೆ ಮಾನದಂಡಗಳು ಹಾಗೂ ಮಾರುಕಟ್ಟೆಯಲ್ಲಿ ಬೇರೆ ಕಂಪನಿಗಳಿಂದ ಎದುರಾದ ವಿಪರೀತ ಪೈಪೋಟಿಯಿಂದ 2000ದಲ್ಲಿ ಲೂನಾ ಮಾರುಕಟ್ಟೆಯಿಂದ ದೂರವಾಯಿತು.

Kinetic E-Luna Launch At February 7, 2024

ಸುಮಾರು 20 ವರ್ಷದ ನಂತರ ಅದೇ ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ಅವತಾರದಲ್ಲಿ ಬರಲು ಸಿದ್ಧವಾಗಿದ್ದು, ಗ್ರಾಹಕರಿಂದಲೂ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಕೈನೆಟಿಕ್ ಗ್ರೀನ್ ಸಹ ಖರೀದಿದಾರರ ಆಶೋತ್ತರವನ್ನು ಪೂರೈಸಲು ಮುಂದಾಗಿದೆ. ಕಂಪನಿಯು ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ಪ್ರತಿ ತಿಂಗಳು 5,000 ಯುನಿಟ್‌ ದ್ವಿಚಕ್ರ ವಾಹನಗಳನ್ನು ತಯಾರಿಸುವಷ್ಟು ಶಕ್ತವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 29, 2024, 14:37 [IST]
English summary
Kinetic e luna launch at february 7 2024 expected price features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+