Kinetic E-Luna: ನಾಳೆ ಕೈನೆಟಿಕ್ ಇ-ಲೂನಾ ಅದ್ದೂರಿಯಾಗಿ ಬಿಡುಗಡೆ, ಬೆಲೆ ಎಷ್ಟಿರಲಿದೆ, ವಿಶೇಷತೆಗಳೇನು?
ದೇಶದಲ್ಲಿ ದಶಕಗಳ ಹಿಂದೆ ಮನೆಮಾತಾಗಿದ್ದ ಕೈನೆಟಿಕ್ ಲೂನಾ (Kinetic Luna), ಎಲೆಕ್ಟ್ರಿಕ್ ರೂಪದಲ್ಲಿ ಬರಲು ಸಿದ್ದವಾಗಿದೆ. ನಾಳೆ (ಫೆ.7) ಸಂಜೆ 5.30ಕ್ಕೆ ಇ-ಲೂನಾ (E-Luna) ಬಿಡುಗಡೆಗೊಳ್ಳಲಿದೆ. ಹೊಚ್ಚ ಹೊಸ ಕೈನೆಟಿಕ್ ಇ-ಲೂನಾ ಹೇಗಿರಲಿದೆ ಬೆಲೆ ಎಷ್ಟಿರಲಿದೆ ಎಂಬುದರ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ನೂತನ ಇ-ಲೂನಾ (E-Luna) ಮೊಪೆಡ್ ಗಾಗಿ ಜನವರಿ 26 ರಿಂದ ಬುಕ್ಕಿಂಗ್ ಶುರು ಮಾಡಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.500 ಮುಂಗಡ ಹಣವನ್ನು ಪಾವತಿಸುವ ಮೂಲಕ ಈ ಎಲೆಕ್ಟ್ರಿಕ್ ಲೂನಾವನ್ನು ಕಾಯ್ದಿರಿಸಬಹುದು.

ಕೆಲವೇ ದಿನಗಳ ಹಿಂದೆ, ಕೈನೆಟಿಕ್ ಗ್ರೀನ್ ಇ-ಲೂನಾ ಸಂಬಂಧ ಟೀಸರ್ ವೊಂದನ್ನು ಬಿಡುಗಡೆಗೊಳಿಸಿತ್ತು. ಅದರಲ್ಲಿ ಎಲೆಕ್ಟ್ರಿಕ್ ಲೂನಾ, ಭರ್ತಿ ಚಾರ್ಜ್ ನಲ್ಲಿ 110 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಜೊತೆಗೆ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, 1 ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆ ಖರ್ಚಾಗುತ್ತದೆ ಎಂಬ ವಿವರವನ್ನು ಬಹಿರಂಗಗೊಳಿಸಿತ್ತು.
ನೂತನ ಕೈನೆಟಿಕ್ ಇ-ಲೂನಾದ ಬ್ಯಾಟರಿ ಆಯ್ಕೆ, ಗರಿಷ್ಠ ವೇಗ (ಟಾಪ್ ಸ್ವೀಡ್) ಮತ್ತು ವೈಶಿಷ್ಟ್ಯಗಳ ಬಗ್ಗೆ ಸದ್ಯಕ್ಕೆ ಯಾವುದೇ ವಿವರಗಳು ಲಭ್ಯವಿಲ್ಲ. ಆದರೆ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಇ-ಲೂನಾ ಮೊಪೆಡ್ 2 ಕೆಡಬ್ಲ್ಯೂಎಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದ್ದು, ಪೂರ್ತಿ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳಲಿದೆ. ಗಂಟೆಗೆ 50 ಕಿ.ಮೀ ವೇಗವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಈ ಕೈನೆಟಿಕ್ ಇ-ಲೂನಾ ಆಕರ್ಷಕ ಎಲ್‌ಸಿಡಿ ಡ್ಯಾಶ್ ಬೋರ್ಡ್ ಹೊಂದಿರಲಿದ್ದು, ಓಷನ್ ಬ್ಲೂ, ಮಲ್ಬೆರಿ ರೆಡ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ದೊರೆಯುವ ನೀರಿಕ್ಷೆಯಿದೆ. ಬೆಲೆ ಕುರಿತು ಯಾವುದೇ ಮಾಹಿತಿ ಪ್ರಸ್ತುತ ಸಿಕ್ಕಿಲ್ಲ. ಆದರೂ ರೂ.50,000 ದಿಂದ ರೂ.70,000 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಕೈನೆಟಿಕ್ ಲೂನಾ ಮೊಪೆಡ್ ಹಿನ್ನೆಲೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯುವುದಾದರೆ, 1970ರ ದಶಕದ ಆರಂಭದಲ್ಲಿ ಭಾರತದದಲ್ಲಿ ಬಿಡುಗಡೆಯಾಗಿದ್ದ ಲೂನಾ, ದ್ವಿಚಕ್ರ ವಾಹನ ಮಾರುಕಟ್ಟೆಯ ಮೊಪೆಡ್ ವಿಭಾಗದಲ್ಲಿ 95% ಪಾಲನ್ನು ಹೊಂದಿತ್ತು. ಆದರೆ, ಬೇರೆ ಕಂಪನಿಗಳಿಂದ ಎದುರಾದ ಭಾರೀ ಪೈಪೋಟಿ, ಕಠಿಣ ಹೊರಸೂಸುವಿಕೆ ನಿಯಮಗಳಿಂದ 2000ರಿಂದ ಲೂನಾ ಮಾರುಕಟ್ಟೆಯಿಂದ ದೂರವಾಗುತ್ತ ಸಾಗಿತು.

ಕೈನೆಟಿಕ್ ಗ್ರೀನ್ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ತಯಾರಿಕಾ ಘಟಕವನ್ನು ಹೊಂದಿದ್ದು, ಪ್ರತಿ ತಿಂಗಳು 5,000 ಯುನಿಟ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವಷ್ಟು ಸಾಮರ್ಥ್ಯವನ್ನು ಪಡೆದಿದೆ. ಇದರಿಂದ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆಲ್ಲ ಕೈನೆಟಿಕ್ ಇ-ಲೂನಾ ಬೇಗನೆ ಸಿಗಬಹುದು. ಈ ಮೊಪೆಡ್ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿರುವುದರಿಂದ ಬಹುತೇಕರ ಆಯ್ಕೆಯ ದ್ವಿಚಕ್ರ ವಾಹನವಾಗಬಹುದು.
ಕಳೆದ ಡಿಸೆಂಬರ್ ತಿಂಗಳು ಕೈನೆಟಿಕ್ ಗ್ರೀನ್, ಜುಲು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.94,990 ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿತ್ತು. ಇದು 27 ಕೆಡಬ್ಲ್ಯೂಎಚ್ (kWh) ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್, ಹಬ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಭರ್ತಿ ಚಾರ್ಜ್ ನಲ್ಲಿ 104 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದ್ದು, 60 ಕೆಎಂಪಿಎಚ್ ಟಾಪ್ ಸ್ವೀಡ್ ಪಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








