Kinetic E-Luna: ಬಹುನೀರಿಕ್ಷಿತ ಕೈನೆಟಿಕ್ ಇ-ಲೂನಾ ಬಿಡುಗಡೆ, ರೂ.69,990 ಬೆಲೆ.. ವಿಶೇಷತೆಗಳೇನು?

ಭಾರತದಲ್ಲಿ 30 - 40 ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಕೈನೆಟಿಕ್ ಲೂನಾ (Kinetic Luna), ಎಲೆಕ್ಟ್ರಿಕ್ ರೂಪದಲ್ಲಿ ಇಂದು (ಫೆ.7) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಎಲೆಕ್ಟ್ರಿಕ್ ಮೊಪೆಡ್, ರೂ.69,990 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೈನೆಟಿಕ್ ಇ-ಲೂನಾವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಅನಾವರಣಗೊಳಿಸಿದರು. ಈ ವೇಳೆ, ಕೈನೆಟಿಕ್ ಗ್ರೂಪ್‌ನ ಅಧ್ಯಕ್ಷ ಅರುಣ್ ಫಿರೋಡಿಯಾ, ಕೈನೆಟಿಕ್ ಗ್ರೀನ್‌ನ ಸಂಸ್ಥಾಪಕಿ & ಸಿಇಒ, ಫಿರೋಡಿಯಾ ಮೋಟ್ವಾನಿ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಲೂನಾ ನಡೆದು ಬಂದ ದಾರಿಯನ್ನು ಪ್ರದರ್ಶಿಸಲಾಯಿತು.

Kinetic E-Luna Launched in India: 69,990 starting price

ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಲಾಂಚ್ ಮಾಡಿರುವ ಹೊಸ ಇ-ಲೂನಾ (E-Luna) ಮೊಪೆಡ್, 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಎಕ್ಸ್1, ಎಕ್ಸ್2 ಎಂಬ ಎರಡು ರೂಪಾಂತರಗಳೊಂದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 50 ಗರಿಷ್ಠ ವೇಗವನ್ನು ಪಡೆಯಲಿದೆ.

ಕೈನೆಟಿಕ್ ಇ-ಲೂನಾ ಬ್ಯಾಟರಿ ಪ್ಯಾಕ್, 4 ಗಂಟೆಗಳಲ್ಲಿ ಚಾರ್ಜ್ ಆಗಲಿದ್ದು, ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಕಾಂಬಿ ಬ್ರೇಕಿಂಗ್ ಸಿಸ್ಟಮ್, 16 - ಇಂಚಿನ ವೀಲ್ಸ್, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೈಟ್ ಸ್ಟಾಂಡ್ ಸೆನ್ಸರ್, ಸೇಫ್ಟಿ ಲಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Kinetic E-Luna Launched in India: 69,990 starting price

ಜನವರಿ 26 ರಿಂದಲೇ ನೂತನ ಕೈನೆಟಿಕ್ ಇ-ಲೂನಾ (Kinetic E-Luna)ದ ಬುಕ್ಕಿಂಗ್ ಆರಂಭವಾಗಿದೆ. ಆಸಕ್ತರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, 500 ರೂಪಾಯಿ ಮುಂಗಡ ಹಣವನ್ನು ಪಾವತಿಸಿ, ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕಾಯ್ದಿರಿಸಬಹುದು. ಕೆಲದಿನಗಳ ಹಿಂದೆ, ಕೈನೆಟಿಕ್ ಗ್ರೀನ್, ಇ-ಲೂನಾ ಕುರಿತ ಟೀಸರ್‌ವೊಂದನ್ನು ಬಿಡುಗಡೆಗೊಳಿಸಿ, ಇದು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ ಎಂಬ ವಿವರವನ್ನು ಬಹಿರಂಗಗೊಳಿಸಿತ್ತು.

ಇ-ಲೂನಾ 1 ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆ ಖರ್ಚಾಗುತ್ತದೆ ಎಂದು ಕಂಪನಿ ತಿಳಿಸಿತ್ತು. ಕೈನೆಟಿಕ್ ಲೂನಾ ಮೊಪೆಡ್ ಹಿನ್ನೆಲೆಯನ್ನು ನೋಡುವುದಾದರೆ, 1970 ರ ದಶಕದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ 'ಲೂನಾ' ದ್ವಿಚಕ್ರ ವಾಹನ ಮಾರುಕಟ್ಟೆಯ ಮೊಪೆಡ್ ವಿಭಾಗದಲ್ಲಿ ಶೇಕಡ 95% ಗರಿಷ್ಠ ಪಾಲನ್ನು ತನ್ನದಾಗಿಸಿಕೊಂಡಿತ್ತು.

Kinetic E-Luna Launched in India: 69,990 starting price

ಅವತ್ತಿನ ಕಾಲಘಟ್ಟದಲ್ಲಿ ಕೈನೆಟಿಕ್ ಕಂಪನಿಯು ಪ್ರತಿದಿನ ಸರಿ ಸುಮಾರು 2,000 ಯುನಿಟ್‌ ಲೂನಾ ಮೊಪೆಡ್ ಮಾರುತ್ತಿತ್ತು. ಇದರಿಂದಲೇ ಅದು ಎಷ್ಟರಮಟ್ಟಿಗೆ ಗ್ರಾಹಕರಿಗೆ ಬೇಡಿಕೆ ಪಡೆದುಕೊಂಡಿತ್ತು ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಆದರೆ, ದೇಶದಲ್ಲಿ ಜಾರಿಗೊಂಡ ಕಠಿಣ ಹೊರಸೂಸುವಿಕೆ ನಿಯಮ, ಇತರೆ ಕಂಪನಿಗಳಿಂದ ಮಾರುಕಟ್ಟೆಗೆ ಬಂದ ಅತ್ಯಾಧುನಿಕ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳಿಂದ 2000ನೇ ಇಸವಿಯಲ್ಲಿ ಲೂನಾ ಮಾರುಕಟ್ಟೆಯಿಂದ ಕಣ್ಮರೆಯಾಯಿತು.

ದಶಕಗಳ ಬಳಿಕ, ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲಕ ಭಾರತದ ಮಾರುಕಟ್ಟೆಗೆ ಬಂದಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ಡಿಸೆಂಬರ್ ತಿಂಗಳು ಕೈನೆಟಿಕ್ ಗ್ರೀನ್, ಜುಲು ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.94,990 ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಿತ್ತು. ಪ್ರಸ್ತುತ, ಸಾಮಾನ್ಯ ಜನರ ದಿನನಿತ್ಯದ ಓಡಾಟಕ್ಕೆ ಇ-ಲೂನಾ ಮೊಪೆಡ್ ಲಾಂಚ್ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 7, 2024, 18:02 [IST]
English summary
Kinetic e luna launched in india 69990 starting price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+