Kinetic E-Luna: ಹೊಸ ರೂಪದಲ್ಲಿ ಬರಲಿದೆ ಕೈನೆಟಿಕ್ ಇ-ಲೂನಾ, ವಿಶೇಷತೆಗಳೇನು?
ಭಾರತದಲ್ಲಿ 70 - 80ರ ದಶಕದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿದ್ದ ಕೈನೆಟಿಕ್ ಲೂನಾ ಎಲೆಕ್ಟ್ರಿಕ್ ರೂಪಾಂತರದಲ್ಲಿ ಫೆಬ್ರವರಿ 7ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಮೊಪೆಡ್ ಆಗಿದ್ದು, ಗ್ರಾಹಕರು ರೂ.500 ಮುಂಗಡ ಹಣವನ್ನು ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.
ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green) ಇ-ಲೂನಾ (E-Luna) ಲೈನ್ಅಪ್ ವಿಸ್ತರಿಸಲು ಬಯಸಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ. ಮುಂಬರಲಿರುವ ಕೈನೆಟಿಕ್ ಇ-ಲೂನಾದ ಹೊಸ ರೂಪಾಂತರ ಹಿಂಬದಿಯ ಆಸನ (ಪಿಲಿಯನ್ ಸೀಟ್)ದಲ್ಲಿ ಕ್ಯಾರಿ ಬಾಸ್ಕೆಟ್ ಹೊಂದಿರಲಿದ್ದು, ಆ ವಿನ್ಯಾಸಕ್ಕಾಗಿ ಕಂಪನಿಯು ಪೇಟೆಂಟ್ ಕೂಡ ಪಡೆದಿದೆ ಎನ್ನಲಾಗಿದೆ.

ಈ ಕ್ಯಾರಿ ಬಾಸ್ಕೆಟ್ ಆಯ್ಕೆಯೊಂದಿಗೆ ಬರಲಿರುವ ಇ-ಲೂನಾ ಮೊಪೆಡ್, ಹೆಚ್ಚಿನ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರಲಿದೆ. ಅದಕ್ಕಾಗಿ ಶಕ್ತಿಯುವ 3 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಹೀಗಿರುವ ಕೈನೆಟಿಕ್ ಇ-ಲೂನಾ ಬರೋಬ್ಬರಿ 150 ಕೆಜಿ ಭಾರವನ್ನು ಸಾಗಿಸುವ ಶಕ್ತಿಯನ್ನು ಹೊಂದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕೈನೆಟಿಕ್ ಇ-ಲೂನಾ (Kinetic E-Luna) ಮೊಪೆಡ್ ಎಕ್ಸ್1 (X1) ಮತ್ತು ಎಕ್ಸ್2 (X2) ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಕ್ರಮವಾಗಿ ರೂ.69,990 ಮತ್ತು ರೂ.74,900 ಎಕ್ಸ್ ಶೋರೂಂ ದರವನ್ನು ಪಡೆದಿದೆ. 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 110 ಕಿ.ಮೀ ಓಡುತ್ತದೆ.

ಕೈನೆಟಿಕ್ ಇ-ಲೂನಾ ಮೊಪೆಡ್, ಮಲ್ಬೆರಿ ರೆಡ್, ಓಷನ್ ಬ್ಲೂ, ಪರ್ಲ್ ಯೆಲ್ಲೋ ಒಳಗೊಂಡಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದ್ದು, ಗಂಟೆಗೆ 50 ಕಿಲೋಮೀಟರ್ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಹೊಂದಲಿದೆ. ಜೊತೆಗೆ ಡುಯಲ್ ಟ್ಯೂಬ್ಯುಲರ್ ಸ್ಟೀಲ್ ಚಾಸಿಸ್ ಪಡೆದಿದ್ದು, 16 ಇಂಚಿನ ವೀಲ್ಸ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್ ಮತ್ತು ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಈ ಮೊಪೆಡ್ ಮಾಸಿಕ ರೂ.2,000 ಇಎಂಐಗೆ ದೊರೆಯಲಿದ್ದು, ನಿರ್ವಹಣಾ ವೆಚ್ಚ ರೂ.300 ಒಳಗೊಂಡಂತೆ ತಿಂಗಳಿಗೆ ರೂ.2,500 ಕ್ಕಿಂತ ಕಡಿಮೆ ಹಣ ಖರ್ಚಾಗುತ್ತದೆ. ವಿಶೇಷವಾಗಿ ಇ-ಲೂನಾವನ್ನು 1 ಕಿ.ಮೀ ಓಡಿಸಲು ರೂ.10 ಪೈಸೆ ವ್ಯಯಿಸಬೇಕು. ನೀವು ಕೂಡ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಹೊಸ ಇ-ಲೂನಾವನ್ನು ಆರ್ಡರ್ ಮಾಡಬಹುದು.
ಇನ್ನು, ಭಾರತದ ಮಾರುಕಟ್ಟೆಯಲ್ಲಿ ಕೈನೆಟಿಕ್ ಇ-ಲೂನಾಗೆ ಪ್ರತಿಸ್ಪರ್ಧಿಯಾಗಿ ಟಿವಿಎಸ್ (TVS) ಕಂಪನಿಯು ಎಕ್ಸ್ಎಲ್ 100ನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಅದಕ್ಕಾಗಿ ಇ-ಎಕ್ಸ್‌ಎಲ್ ಹಾಗೂ ಎಕ್ಸ್‌ಎಲ್ ಇವಿ ಎಂಬ ಎರಡು ಹೆಸರನ್ನು ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿ ನೋಂದಣಿ ಮಾಡಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








