ಭಾರತೀಯರ ಹೃದಯವನ್ನಷ್ಟೇ ಅಲ್ಲ ಅತ್ಯುತ್ತಮ ಪ್ರಶಸ್ತಿಯನ್ನೂ ಗೆದ್ದ ಬಡವರ ಬಂಡಿ ಕೈನೆಟಿಕ್ ಇ-ಲೂನಾ
80ರ ದಶಕದಲ್ಲಿ ಕೈನೆಟಿಕ್ ಲೂನಾ (Kinetic Luna) ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. ಹೆಚ್ಚಿನ ಜನರ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಗಳಲ್ಲಿ ಒಂದಾಗಿತ್ತು. ಅಷ್ಟರಮಟ್ಟಿಗೆ ಕೈನೆಟಿಕ್ ಲೂನಾ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. ಇದೀಗ ಹಲವು ವರ್ಷಗಳ ಬಳಿಕ ಕೈನೆಟಿಕ್ ಲೂನಾ ಸ್ಕೂಟರ್ ಎಲೆಕ್ಟ್ರಿಕ್ ಅವತಾರದಲ್ಲಿ ದೇಶಕ್ಕೆ ಬಂದಿದೆ.
ಭಾರತದಲ್ಲಿ 30 - 40 ವರ್ಷಗಳ ಹಿಂದೆ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ಕೈನೆಟಿಕ್ ಲೂನಾ (Kinetic Luna), ಎಲೆಕ್ಟ್ರಿಕ್ ರೂಪದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿತು. ಈ ಎಲೆಕ್ಟ್ರಿಕ್ ಮೊಪೆಡ್, ರೂ.69,990 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಗೊಂಡಿತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೈನೆಟಿಕ್ ಇ-ಲೂನಾವನ್ನು (Kinetic E-Luna) ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಅನಾವರಣಗೊಳಿಸಿದ್ದರು.

ಪುಣೆಯಲ್ಲಿ ಇತ್ತೀಚೆಗೆ ನಡೆದ EMOBILITY+ ಸ್ಟೇಟ್ ಲೀಡರ್‌ಶಿಪ್ ಅವಾರ್ಡ್ಸ್ ಮಹಾರಾಷ್ಟ್ರ 2024 ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೈನೆಟಿಕ್ ಇ-ಲೂನಾಗೆ 'ಬೆಸ್ಟ್ ಎಲೆಕ್ಟ್ರಿಕ್ ವೆಹಿಕಲ್ ಮಾಡೆಲ್' ಪ್ರಶಸ್ತಿಯನ್ನು ನೀಡಲಾಗಿದೆ. ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಲಾಂಚ್ ಮಾಡಿರುವ ಹೊಸ ಇ-ಲೂನಾ (E-Luna) ಮೊಪೆಡ್, 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ.
ಎಕ್ಸ್1, ಎಕ್ಸ್2 ಎಂಬ ಎರಡು ರೂಪಾಂತರಗಳೊಂದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 50 ಗರಿಷ್ಠ ವೇಗವನ್ನು ಪಡೆಯಲಿದೆ. ಈ ಹೊಸ ಕೈನೆಟಿಕ್ ಇ-ಲೂನಾ ಬ್ಯಾಟರಿ ಪ್ಯಾಕ್, 4 ಗಂಟೆಗಳಲ್ಲಿ ಚಾರ್ಜ್ ಆಗಲಿದ್ದು, ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಕಾಂಬಿ ಬ್ರೇಕಿಂಗ್ ಸಿಸ್ಟಮ್ ಮತ್ತು 16 - ಇಂಚಿನ ವೀಲ್ಸ್ ಹೊಂದಿದೆ.

ಇದರೊಂದಿಗೆ ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೈಟ್ ಸ್ಟಾಂಡ್ ಸೆನ್ಸರ್, ಸೇಫ್ಟಿ ಲಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಇದರಲ್ಲಿ ಡಿಜಿಟಲ್ ಮೀಟರ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೀರೆ ಗಾರ್ಡ್, ಸುರಕ್ಷತಾ ಲಾಕ್. ಕಾಂಬಿ ಬ್ರೇಕಿಂಗ್ ಸಿಸ್ಟಮ್, ಬ್ಯಾಗ್ ಹುಕ್, ಡಿಟ್ಯಾಚೇಬಲ್ ರಿಯರ್ ಸೀಟ್ ಮತ್ತು ಫ್ರಂಟ್ ಲೆಗ್ ಗಾರ್ಡ್ ಎಂಬ ಫೀಚರ್ಸ್ ಗಳನ್ನು ಹೊಂದಿವೆ.
ಈ ನೂತನ ಕೈನೆಟಿಕ್ ಇ-ಲೂನಾ (Kinetic E-Luna)ದ ಬುಕ್ಕಿಂಗ್ ಆರಂಭವಾಗಿದೆ. ಆಸಕ್ತರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ಕೊಟ್ಟು, 500 ರೂಪಾಯಿ ಮುಂಗಡ ಹಣವನ್ನು ಪಾವತಿಸಿ, ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕಾಯ್ದಿರಿಸಬಹುದು. ಇ-ಲೂನಾ 1 ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆ ಖರ್ಚಾಗುತ್ತದೆ ಎಂದು ಕಂಪನಿ ತಿಳಿಸಿತ್ತು.

ಈ ಕೈನೆಟಿಕ್ ಲೂನಾ ಮೊಪೆಡ್ ಹಿನ್ನೆಲೆಯನ್ನು ನೋಡುವುದಾದರೆ, 1970 ರ ದಶಕದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ 'ಲೂನಾ' ದ್ವಿಚಕ್ರ ವಾಹನ ಮಾರುಕಟ್ಟೆಯ ಮೊಪೆಡ್ ವಿಭಾಗದಲ್ಲಿ ಶೇಕಡ 95% ಗರಿಷ್ಠ ಪಾಲನ್ನು ತನ್ನದಾಗಿಸಿಕೊಂಡಿತ್ತು. ಅವತ್ತಿನ ಕಾಲಘಟ್ಟದಲ್ಲಿ ಕೈನೆಟಿಕ್ ಕಂಪನಿಯು ಪ್ರತಿದಿನ ಸರಿ ಸುಮಾರು 2,000 ಯುನಿಟ್ ಲೂನಾ ಮೊಪೆಡ್ ಮಾರುತ್ತಿತ್ತು.
ಇದರಿಂದಲೇ ಅದು ಎಷ್ಟರಮಟ್ಟಿಗೆ ಗ್ರಾಹಕರಿಗೆ ಬೇಡಿಕೆ ಪಡೆದುಕೊಂಡಿತ್ತು ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಆದರೆ, ದೇಶದಲ್ಲಿ ಜಾರಿಗೊಂಡ ಕಠಿಣ ಹೊರಸೂಸುವಿಕೆ ನಿಯಮ, ಇತರೆ ಕಂಪನಿಗಳಿಂದ ಮಾರುಕಟ್ಟೆಗೆ ಬಂದ ಅತ್ಯಾಧುನಿಕ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳಿಂದ 2000ನೇ ಇಸವಿಯಲ್ಲಿ ಲೂನಾ ಮಾರುಕಟ್ಟೆಯಿಂದ ಕಣ್ಮರೆಯಾಯಿತು. ದಶಕಗಳ ಬಳಿಕ, ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೂಲಕ ಭಾರತದ ಮಾರುಕಟ್ಟೆಗೆ ಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








