ಲಗ್ಗೇಜ್ ಆಟೋಗಳ ಪ್ರತಿಸ್ಪರ್ಧಿ ಕೊಮಾಕಿ ಕ್ಯಾಟ್ 2.0 ಮೊಪೆಡ್ ವಿಶೇಷತೆಗಳು: 140 ಕಿ.ಮೀ ರೇಂಜ್!
ಹೊಸ ಸ್ಟಾರ್ಟ್ ಅಪ್ ಎಲೆಕ್ಟ್ರಿಕ್ ಕಂಪನಿಯಾದ 'ಕೋಮಾಕಿ' ತನ್ನ ಕ್ಯಾಟ್ 2.0 ಎನ್ಎಕ್ಸ್‌ಟಿ (Cat 2.0 NXT) ಎಲೆಕ್ಟ್ರಿಕ್ ಮೊಪೆಡ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಸ್ಕೂಟರ್ ವಾಣಿಜ್ಯ ಬಳಕೆ ಸೇರಿದಂತೆ ವೈಯಕ್ತಿಕ ಕೆಲಸಗಳಿಗೂ ಬಳಸಿಕೊಳ್ಳಬಹುದಾಗಿದ್ದು, ಉತ್ತಮ ಫೀಚರ್ಸ್ ಹಾಗೂ ಒಳ್ಳೆಯ ರೇಂಜ್ ಅನ್ನು ನೀಡಲಿದೆ.
ಹೊಸ ಕೋಮಾಕಿ ಕ್ಯಾಟ್ Cat 2.0 NXT ವಿಶೇಷತೆಗಳು: ಹೊಸ ಕೋಮಾಕಿ ಕ್ಯಾಟ್ 2.0 ಎನ್ಎಕ್ಸ್‌ಟಿ ಕನ್ವರ್ಟಿಬಲ್ ಸೀಟಿಂಗ್ ಹೊಂದಿರುವ ಐರನ್ ಫ್ರೇಮ್ ಅನ್ನು ಆಧರಿಸಿದೆ, ಇದರ ಕೊನೆಯ ಮೈಲಿ ವಿತರಣಾ ಕಾರ್ಯಾಚರಣೆಯ ಪಾತ್ರಕ್ಕೆ ಅನುಗುಣವಾಗಿ 350 ಕೆ.ಜಿವರೆಗೆ ಲೋಡ್ ಸಾಮರ್ಥ್ಯವನ್ನು ಸ್ಕೂಟರ್ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ 42 Ah LiPO4 ಬ್ಯಾಟರಿಯನ್ನು ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 110 ಕಿ.ಮೀ ನಿಂದ 140 ಕಿ.ಮೀ ನಡುವಿನ ರೇಂಜ್ ನೀಡುತ್ತದೆ. ಇದರ ಕನ್ವರ್ಟಿಬಲ್ ವಿನ್ಯಾಸವು ತಡೆರಹಿತ ಪರಿವರ್ತನೆಯನ್ನು ಅನುಮತಿಸುತ್ತದೆ.

ವೈವಿಧ್ಯಮಯ ಸಾರಿಗೆ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿ ನಮ್ಯತೆಯನ್ನು ಹೊಂದಿರುವ ಹೊಸ ಕೋಮಾಕಿ ಕ್ಯಾಟ್ Cat 2.0 NXT, 79 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇವಿಷ್ಟೇ ಅಲ್ಲದೆ ಫೋಲ್ಡಬಲ್ ಬ್ಯಾಕ್‌ರೆಸ್ಟ್, ಹೆಚ್ಚುವರಿ ಶೇಖರಣಾ ಸ್ಥಳ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಅಪ್‌ಡೇಟ್‌ಗಳು, ಪ್ರಯಾಣದಲ್ಲಿರುವಾಗ ಸಾಧನಗಳನ್ನು ಚಾರ್ಜ್ ಮಾಡಲು USB ಪೋರ್ಟ್, ಹೆಚ್ಚುವರಿ ಫುಟ್ ರೆಸ್ಟ್‌ಗಳು ಸೇರಿದಂತೆ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬ್ಯಾಟರಿ ಮತ್ತು ಜಾರ್ಜ್: ಸದ್ಯ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆಯೇ ಕೊಮಾಕಿ ಕ್ಯಾಟ್ 2.0 ಎನ್ಎಕ್ಸ್‌ಟಿ (Komaki Cat 2.0 NXT) ಎಲೆಕ್ಟ್ರಿಕ್ ಸ್ಕೂಟರ್, ಪೋರ್ಟಬಲ್ ಚಾರ್ಜರ್ ಅನ್ನು ಪಡೆಯುತ್ತದೆ. ಕಂಪನಿಯ ಹೇಳಿಕೆಗಳ ಪ್ರಕಾರ ಬ್ಯಾಟರಿಯನ್ನು ನಾಲ್ಕರಿಂದ ಐದು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

Komaki Cat 2.0 NXT ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಮ್ಮೆ ಜಾರ್ಜ್ ಮಾಡಿದರೆ 110 ಕಿ.ಮೀ ನಿಂದ 140 ಕಿ.ಮೀ ವರೆಗೆ ನಿರಾಳವಾಗಿ ಓಡಾಡಬಹುದು. ಹೊಸ Komaki Cat 2.0 NXT ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 99,500 ಇದೆ. ಕಂಪನಿಯು ಈ ಮಾದರಿಯೊಂದಿಗೆ ಕೊನೆಯ ಮೈಲಿ ವಿತರಣಾ ಆಪರೇಟರ್‌ಗಳನ್ನು ಗುರಿಯಾಗಿಸಿಕೊಂಡಿದೆ. ಏಪ್ರಿಲ್ 30 ರವರೆಗೆ ಲಭ್ಯವಿರುವ 5,000 ರೂ. ಗಳ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಕೋಮಾಕಿ ಹೊರತಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸ್ಕೂಟರ್ ಕುರಿತು ಹೆಚ್ಚಿನ ವಿವರಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಯಬಹುದು.
ಕೋಮಾಕಿ ಕ್ಯಾಟ್ 2.0 ಎನ್ಎಕ್ಸ್‌ಟಿ ವೈಶಿಷ್ಟ್ಯಗಳು: ಹೊಸ ಕೋಮಾಕಿ ಕ್ಯಾಟ್ 2.0 NXT ಮುಂಭಾಗದಲ್ಲಿ ಎಲ್ಇಡಿ ಲ್ಯಾಂಪ್‌ಗಳು, BLDC ಹಬ್ ಮೋಟಾರ್, ಪಾರ್ಕಿಂಗ್ ಅಸಿಸ್ಟ್, ರಿವರ್ಸ್ ಅಸಿಸ್ಟ್, ಡ್ಯುಯಲ್ ಡಿಸ್ಕ್ ಬ್ರೇಕ್ ಸಿಸ್ಟಮ್ ಮತ್ತು ಆರು ಹೈಡ್ರಾಲಿಕ್ ರಿಯರ್ ಸಸ್ಪೆನ್ಷನ್‌ಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ಕಂಪನಿಯ ಪ್ರಕಾರ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ವಾಣಿಜ್ಯ ಮೊಪೆಡ್‌ಗಳಿಗಿಂತ ಹೆಚ್ಚು ಉಪಯುಕ್ತವಾಗಿದೆ. ಇದನ್ನು ನಾವು ಗೊತ್ತುಪಡಿಸಿದ ತೂಕಕ್ಕೆ ಅನುಗುಣವಾಗಿ ಮನಬಂದಂತೆ ಬಳಸಿಕೊಳ್ಳಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವ ಮೂಲಕ ಇದರ ಸಾಮರ್ಥ್ಯವನ್ನು ನೀವು ಅನುಭವಿಸಬಹುದು ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








