ತೀರಾ ಅಗ್ಗದ ಬೆಲೆಗೆ ಬಿಡುಗಡೆಯಾದ ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಎಲ್ಲಾ ಫೀಚರ್‌ಗಳನ್ನು ನೀಡಲಾಗುತ್ತಿದೆ. ಇದೀಗ ಕೊಮಾಕಿ ತನ್ನ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಪ್‌ಗ್ರೇಡ್ ಮಾಡಿ ಮರುಬಿಡುಗಡೆ ಮಾಡಲಾಗಿದೆ. ಹೊಸ ಸ್ಕೂಟರ್ ಈಗ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ರೂ. 69,000 ಕ್ಕೆ ಖರೀದಿಗೆ ಲಭ್ಯವಿದೆ.
ಹೊಸ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ (Komaki Flora electric scooter) ಲಿಥಿಯಂ ಐಯಾನ್ ಫೆರ್ರೊ ಫಾಸ್ಫೇಟ್ (LiFePO4) ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದ್ದು, ಇದನ್ನು ತೆಗೆದು ಮರಳಿ ಹಾಕಬಹುದಾಗಿದೆ. ಇ ಮೂಲಕ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು ತುಂಬಾ ಸುಲಭ ಹಾಗೂ ಅನುಕೂಲಕರವಾಗಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ 85 ರಿಂದ 100 ಕಿ.ಮೀ ರೇಂಜ್ ನೀಡುತ್ತದೆ.

ನವೀಕರಿಸಿದ ಹೊಸ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಡ್ಯಾಶ್‌ಬೋರ್ಡ್, ಸ್ವಯಂ - ಡಯಾಗ್ನೋಸ್ಟಿಕ್ ಮೀಟರ್, ಪಾರ್ಕಿಂಗ್ ಮತ್ತು ಕ್ರೂಸ್ ಕಂಟ್ರೋಲ್, ಹೆಚ್ಚುವರಿ ಬ್ಯಾಕ್‌ರೆಸ್ಟ್ ಮತ್ತು ಬೂಟ್ ಸ್ಪೇಸ್‌ನೊಂದಿಗೆ ಆರಾಮದಾಯಕ ಆಸನವನ್ನು ಒಳಗೊಂಡಿದೆ. ಈ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆ ಕೊಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ (Komaki Flora electric scooter) ಕೂಡ ಆಧುನಿಕ ಫೀಚರ್‌ಗಳೊಂದಿಗೆ ಬರುತ್ತದೆ. ಇನ್ನು ಇದರ ಬಣ್ಣಗಳ ವಿಷಯಕ್ಕೆ ಬಂದರೆ ಜೆಟ್ ಬ್ಲ್ಯಾಕ್, ಗಾರ್ನೆಟ್ ರೆಡ್, ಸ್ಟೀಲ್ ಗ್ರೇ ಮತ್ತು ಸ್ಯಾಕ್ರಮೆಂಟೊ ಗ್ರೀನ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಸ್ಕೂಟರ್ ಅನ್ನು ಸ್ಟೀಲ್ ಚಾಸಿಸ್ ನಿಂದ ನಿರ್ಮಿಸಲಾಗಿದ್ದು, ಗಟ್ಟಿಮುಟ್ಟಾದ ಬಾಡಿಯನ್ನು ಹೊಂದಿದೆ.

ಕೊಮಾಕಿ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕಿ ಗುಂಜನ್ ಮಲ್ಹೋತ್ರಾ ಅವರು ಫ್ಲೋರಾ ಮರು-ಬಿಡುಗಡೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, "ನಮ್ಮ ಸುಧಾರಿತ ಎಲೆಕ್ಟ್ರಿಕ್ ಸ್ಕೂಟರ್ ಫ್ಲೋರಾವನ್ನು ಮತ್ತೆ ಬಿಡುಗಡೆ ಮಾಡುವುದರಿಂದ ದೇಶದ ಶುದ್ಧ ಚಲನಶೀಲತೆ ಮಾರುಕಟ್ಟೆಯಲ್ಲಿ ಕ್ರಾಂತಿಯಾಗಲಿದೆ, ಸ್ಥಿರವಾದ ಇಂಧನ ಪರಿವರ್ತನೆಗೆ ಗಮನಾರ್ಹ ಕೊಡುಗೆ ನೀಡುತ್ತದೆ" ಎಂದು ಹೇಳಿದರು.
"ನಾವು ಸುಸ್ಥಿರ ಸಾರಿಗೆಯಲ್ಲಿ ನಾವೀನ್ಯತೆ ಮತ್ತು ನಾಯಕತ್ವವನ್ನು ಮುಂದುವರಿಸುತ್ತಿದ್ದಂತೆ, ಫ್ಲೋರಾ ಇವಿ ಸ್ಕೂಟರ್ ಮಾದರಿಯು ಎಲೆಕ್ಟ್ರಿಕ್ ಚಲನಶೀಲತೆಯ ಭವಿಷ್ಯವನ್ನು ಮರುವ್ಯಾಖ್ಯಾನಿಸುವುದು ಮಾತ್ರವಲ್ಲದೆ ರಾಷ್ಟ್ರವ್ಯಾಪಿ ಪರಿಸರ ಪ್ರಜ್ಞೆಯ ಆಯ್ಕೆಗಳತ್ತ ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುತ್ತದೆ ಎಂದು ನಾವು ನಂಬುತ್ತೇವೆ" ಎಂದು ಗುಂಜನ್ ಮಲ್ಹೋತ್ರಾ ಹೇಳಿದರು.

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ, ಎಥರ್, ಟಿವಿಎಸ್ ಐಕ್ಯೂಬ್ ನಂತಹ ಮಾದರಿಗಳು ಹೆಚ್ಚಿನ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿವೆ. ಸದ್ಯ ಮರು ಬಿಡುಗಡೆಯಾಗಿರುವ ಕೋಮಾಕಿ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಮಾರಾಟ ಕಾಣುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಈ ಸ್ಕೂಟರ್ ಸದ್ದು ಮಾಡಲಿದೆ ಎಂಬುದನ್ನು ಕಾದು ನೊಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








