ಹೊಸ ಸ್ಕೂಟರ್ ಬಿಡುಗಡೆ: 1 ರೂ. ಖರ್ಚಿಲ್ಲದೆ 150 ಕಿ.ಮೀ ಓಡಾಡಿ: 3 ವರ್ಷ ವಾರಂಟಿ

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಆಗಿರುವ ಕೊಮಾಕಿ ಎಲೆಕ್ಟ್ರಿಕ್ ವೆಹಿಕಲ್ ತನ್ನ ಇತ್ತೀಚಿನ ಮಾದರಿಯಾದ ಎಂಜಿ ಪ್ರೋ (MG PRO) ಲಿಥಿಯಂ ಸರಣಿಯನ್ನು ತನ್ನ 'ಹರ್ ಘರ್ ಕೊಮಾಕಿ' ಅಭಿಯಾನದ ಅಡಿಯಲ್ಲಿ ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆಯು ಕೇವಲ ರೂ. 59,999 ಇದೆ. ಭಾರತೀಯ ಮನೆಗಳ ದೈನಂದಿನ ಅಗತ್ಯಗಳನ್ನು ಪೂರೈಸಲು ಈ ಸರಣಿಯನ್ನು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕೊಮಾಕಿ ಎಲೆಕ್ಟ್ರಿಕ್ ಹೇಳಿಕೊಂಡಿದೆ. ಹೊಸ ಎಂಜಿ ಪ್ರೋ ಲಿಥಿಯಂ ಸರಣಿಯ ಸ್ಕೂಟರ್ ಬ್ಯಾಟರಿ, ರೇಂಜ್ ಕುರಿತ ಮಾಹಿತಿಯನ್ನು ಇಲ್ಲಿ ನೋಡೋಣ.

ಕುಟುಂಬ ಸ್ನೇಹಿ ವಿನ್ಯಾಸವನ್ನು ಹೊಂದಿರುವ ಹೊಸ ಸ್ಕೂಟರ್, ಕೈಗೆಟುಕುವ ಮತ್ತು ದೀರ್ಘ - ಶ್ರೇಣಿಯ ಸಾಮರ್ಥ್ಯಗಳ ಪ್ರಯೋಜನಗಳೊಂದಿಗೆ ಬರುತ್ತದೆ. ಇದು ಬ್ರ್ಯಾಂಡ್‌ನ ಹೈ-ಸ್ಪೀಡ್ ವರ್ಗದ ಒಂದು ಭಾಗವಾಗಿದ್ದು, ಶಕ್ತಿಯುತ ಮತ್ತು ಪರಿಣಾಮಕಾರಿ 2.2 kW ಮತ್ತು 2.7 kW LiFePO4 ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿ 150 ಕಿ.ಮೀ ಪ್ರಭಾವಶಾಲಿ ರೇಂಜ್ ನೀಡುತ್ತದೆ.

komaki-launches-mg-pro-lithium-series-scooter

ಹೊಸ ಎಂಜಿ ಪ್ರೋ ಲಿಥಿಯಂ ಸರಣಿಯ ಸ್ಕೂಟರ್, ಬಿಡುವಿಲ್ಲದ ಕುಟುಂಬಗಳಿಗೆ ಸ್ಮಾರ್ಟ್ ಆಯ್ಕೆಯಾಗಿದ್ದು, ಸ್ವಯಂ ದುರಸ್ತಿ (Self - repair) ವೈಶಿಷ್ಟ್ಯವನ್ನು ಹೊಂದಿದೆ. ಅಂದರೆ ಈ ಸ್ಕೂಟರ್ ಸ್ವಯಂಚಾಲಿತವಾಗಿ ಸಣ್ಣ ಸಮಸ್ಯೆಗಳನ್ನು ತಾನಾಗಿಯೇ ಪರಿಹರಿಸಿಕೊಳ್ಳುತ್ತದೆ. ಬಳಕೆದಾರರಿಗೆ ಗ್ಯಾರೇಜ್ ಹೋಗುವ ಸಮಸ್ಯೆಯನ್ನು ತಪ್ಪಿಸಿ ಸುಗಮ ಮತ್ತು ಸುರಕ್ಷಿತ ಸವಾರಿಯನ್ನು ಖಾತ್ರಿಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.

ಹೊಸ ಎಂಜಿ ಪ್ರೋ ಲಿಥಿಯಂ ಸರಣಿಯ ಸ್ಕೂಟರ್, ತನ್ನ ಮೋಟಾರ್, ಬ್ಯಾಟರಿ ಮತ್ತು ನಿಯಂತ್ರಕದಲ್ಲಿ 3 - ವರ್ಷ ಅಥವಾ 30,000 ಕಿ.ಮೀ ವಾರಂಟಿಯೊಂದಿಗೆ ಬರುತ್ತದೆ. ಜೊತೆಗೆ ಅದರ ಚಾರ್ಜರ್ ಮೇಲೆ 1-ವರ್ಷದ ವಾರಂಟಿ ನೀಡಲಾಗುತ್ತಿದೆ. ಹಾಗಾಗಿ ಗ್ರಾಹಗರು ಎಲೆಕ್ಟ್ರಿಕ್ ಸ್ಕೂಟರ್ ಎಂಬ ಭಯವನ್ನು ಪಕ್ಕಕ್ಕಿಟ್ಟು ಈ ವಾರಂಟಿಯನ್ನು ನೋಡಿ ಚಿಂತೆಯಿಲ್ಲದೇ ಸ್ಕೂಟರ್ ಖರೀದಿಸಬಹುದು ಎಂದು ಕಂಪನಿ ಭರವಸೆ ನೀಡಿದೆ.

ಎಂಜಿ ಪ್ರೋ ಸ್ಕೂಟರ್ ಹೈ - ಪರ್ಫಾಮೆನ್ಸ್ ಮತ್ತು ಅಸಾಧಾರಣ ಮೌಲ್ಯವನ್ನು ನೀಡುತ್ತದೆ. ಸುರಕ್ಷಿತವಾದ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ತಂತ್ರಜ್ಞಾನ ಮತ್ತು ಅಪ್ಲಿಕೇಶನ್ - ಆಧಾರಿತ ಬ್ಯಾಟರಿ ಆರೋಗ್ಯದ (Battery health) ಅಪ್‌ಡೇಟ್‌ಗಳೊಂದಿಗೆ ಬೆಉತ್ತದೆ. ಈ ಮೂಲಕ ಭಾರತದ ಪ್ರತಿ ಮನೆಗೂ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಕೊಮಾಕಿ ಕಂಪನಿ ಅನುವು ಮಾಡಿಕೊಡುತ್ತಿರುವುದಾಗಿ ಹೇಳಿದೆ.

ಕೋಮಕಿ ಎಲೆಕ್ಟ್ರಿಕ್ ಸಹ - ಸಂಸ್ಥಾಪಕಿ ಗುಂಜನ್ ಮಲ್ಹೋತ್ರಾ ಮಾತನಾಡಿ, MG PRO ಲಿಥಿಯಂ ಸರಣಿಯನ್ನು ಪರಿಪೂರ್ಣ ಕುಟುಂಬ ಸ್ಕೂಟರ್ ಆಗಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇದು ಕೇವಲ EV ಮಾತ್ರವಲ್ಲ, ಆರ್ಥಿಕ, ವಿಶ್ವಾಸಾರ್ಹ ಮತ್ತು ಉನ್ನತ-ಕಾರ್ಯಕ್ಷಮತೆಯ ಸವಾರಿಯನ್ನು ಆನಂದಿಸುವ ಜೊತೆಗೆ ನಾಳೆಗೆ ಹಸಿರಿನ ಕೊಡುಗೆ ನೀಡಲು ಬಯಸುವ ಕುಟುಂಬಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಭಾರತೀಯ ಕುಟುಂಬಗಳಿಗೆ ಎಲೆಕ್ಟ್ರಿಕ್ ಮೊಬಿಲಿಟಿಯ ಚಾಂಪಿಯನ್ ಆಗಿ ಮುಂದುವರಿಯಲು ಗುರಿ ಹೊಂದಿರುವ ನಾವು, ನಮ್ಮ ವಾಹನಗಳ ಮೂಲಕ ದೈನಂದಿನ ಪ್ರಯಾಣಕ್ಕೆ ನವೀನ, ಪ್ರಾಯೋಗಿಕ ಮತ್ತು ಸುಸ್ಥಿರ ಪರಿಹಾರಗಳನ್ನು ಒದಗಿಸುತ್ತೇವೆ. ಎಂದು ಕೋಮಕಿ ಎಲೆಕ್ಟ್ರಿಕ್‌ನ ಸಹ - ಸಂಸ್ಥಾಪಕಿ ಗುಂಜನ್ ಮಲ್ಹೋತ್ರಾ ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 26, 2024, 16:54 [IST]
English summary
Komaki launches mg pro lithium series scooter
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+