ಭಾರತದ ತಾಕತ್ತು ವಿಶ್ವದೇಶಗಳಿಗೆ ಗೊತ್ತಾಗಿದೆ... ಹಿಂದೇಟು ಹಾಕಿದವರು ಈಗ ಕ್ಯೂ ಕಟ್ಟಿದ್ದಾರೆ!

ಮೊದಲು ಭಾರತದಲ್ಲಿ ಉನ್ನತ ಕಾರ್ಯಕ್ಷಮತೆಯ ಮೊಟಾರ್‌ಸೈಕಲ್‌ಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದ ಅಂತರಾಷ್ಟ್ರೀಯ ಬ್ರಾಂಡ್‌ಗಳು ಈಗ ತಮ್ಮ ಹೈ-ಪರ್ಫಾಮೆನ್ಸ್ ಬೈಕ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿವೆ. ಹೌದು KTM ಬ್ರಾಂಡ್ ತನ್ನ ಅಂತರಾಷ್ಟ್ರೀಯ ಶ್ರೇಣಿಯ ಉನ್ನತ-ಕಾರ್ಯಕ್ಷಮತೆಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ 1390cc ವರೆಗಿನ KTM ನೇಕೆಡ್, ಟ್ರಾವೆಲ್, ಆಫ್-ರೋಡ್ ಎಂಡ್ಯೂರೋ ಮತ್ತು ಆಫ್-ರೋಡ್ ಮೋಟೋಕ್ರಾಸ್‌ನ ನಾಲ್ಕು ಪ್ರಮುಖ ವಿಭಾಗಗಳನ್ನು ಒಳಗೊಂಡ 10 ಐಕಾನಿಕ್ ಜಾಗತಿಕ ಮಾದರಿಗಳನ್ನು ಅನಾವರಣಗೊಳಿಸಿದೆ. ಎಲ್ಲಾ ಮಾಡೆಲ್‌ಗಳ ಹೆಸರು ಮತ್ತು ಬೆಲೆಗಳನ್ನು ಕೆಳಗೆ ನೋಡೋಣ.

ಯುರೋಪ್‌ನ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ KTM, ನಾಲ್ಕು ವಿಶಿಷ್ಟ ವಿಭಾಗಗಳಲ್ಲಿ 10 ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಮೋಟಾರ್‌ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸಂಪೂರ್ಣ KTM ಅನುಭವವನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸುವ ಮೂಲಕ ಖುಷಿ ಕೊಡಲಿದೆ ಎಂದು ಕಂಪನಿ ಹೇಳಿದೆ.

ktm-launches-high-performance-motorcycles-up-to-1390cc-in-india

ಕೆಟಿಎಂ 1390 ಸೂಪರ್ ಡ್ಯೂಕ್ R ಬೆಲೆಯು ರೂ.22.96 ಲಕ್ಷ, ಕೆಟಿಎಂ 890 ಡ್ಯೂಕ್ R ಬೆಲೆಯು ರೂ.14.50 ಲಕ್ಷ, ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೆಲೆಯು ರೂ.22.74 ಲಕ್ಷ, ಕೆಟಿಎಂ 890 ಅಡ್ವೆಂಚರ್ ಆರ್ ಬೆಲೆಯು ರೂ.15.80 ಲಕ್ಷ, ಕೆಟಿಎಂ 350 EXC-F ಬೆಲೆಯು ರೂ.12.96 ಲಕ್ಷ, ಕೆಟಿಎಂ 450 SX-F ಬೆಲೆಯು ರೂ.10.25 ಲಕ್ಷವಿದೆ.

ಕೆಟಿಎಂ 250 SX-F ಬೆಲೆಯು ರೂ.9.58 ಲಕ್ಷ, ಕೆಟಿಎಂ 85 SX ಬೆಲೆಯು ರೂ.6.69 ಲಕ್ಷ, ಕೆಟಿಎಂ 65 SX ಬೆಲೆಯು ರೂ.5.47 ಲಕ್ಷ, ಕೆಟಿಎಂ 50 SX ಬೆಲೆಯು ರೂ.4.75 ಲಕ್ಷವಿದೆ. ಈ ಬೈಕ್‌ಗಳು ಈಗ ಬೆಂಗಳೂರು ಮತ್ತು ಪುಣೆ ಸೇರಿದಂತೆ 7 ಪ್ರಮುಖ ನಗರಗಳಲ್ಲಿನ ಎಲ್ಲಾ ಹೊಸ KTM ಫ್ಲ್ಯಾಗ್‌ಶಿಪ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.

ktm-launches-high-performance-motorcycles-up-to-1390cc-in-india

ಭಾರತ ಈಗ ಜಾಗತಿಕ ರೇಂಜ್
ನೇಕೆಡ್ ಮತ್ತು ಅಡ್ವೆಂಚರ್: KTM 1390 ಸೂಪರ್ ಡ್ಯೂಕ್ R ಮತ್ತು KTM 890 DUKE R ಮೋಟಾರ್‌ಸೈಕಲ್‌ಗಳು ನೇಕೆಡ್ ಪರ್ಫಾಮೆನ್ಸ್ ಬಯಸುವ ಸವಾರರಿಗಾಗಿ ನಿರ್ಮಿಸಲಾಗಿದೆ. ಅಡ್ವೆಂಚರ್ ವಿಭಾಗದಲ್ಲಿ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಮತ್ತು ಕೆಟಿಎಂ 890 ಅಡ್ವೆಂಚರ್ ಆರ್ ಮೋಟಾರ್‌ಸೈಕಲ್‌ಗಳನ್ನು ಅಡ್ವೆಂಚರ್ ಬಯಸುವವರಿಗಾಗಿ ನಿರ್ಮಿಸಲಾಗಿದೆ.

ಎಂಡ್ಯೂರೋ ಮತ್ತು ಮೋಟೋಕ್ರಾಸ್: ಗಂಭೀರ ಆಫ್ ರೋಡ್ ಉತ್ಸಾಹಿಗಳಿಗೆ KTM 350 EXC-F ಅನ್ನು ನಿರ್ಮಿಸಲಾಗಿದೆ. ಗಂಭೀರ ಮೋಟೋಕ್ರಾಸ್ ರೇಸರ್‌ಗಳಿಗಾಗಿ KTM 450 SX-F ಮತ್ತು KTM 250 SX-F ಬೈಕ್‌ಗಳನ್ನು ನಿರ್ಮಿಸಲಾಗಿದೆ. ಯುವ ಸ್ಪರ್ಧಾತ್ಮಕ ರೇಸರ್‌ಗಳಿಗಾಗಿ KTM 85 SX, KTM 65 SX & KTM 50 SX ಅನ್ನು ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ktm-launches-high-performance-motorcycles-up-to-1390cc-in-india

ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದಂತಹ 7 ನಗರಗಳ ಪ್ರಮುಖ ಶೋರೂಂಗಳಲ್ಲಿ ಪ್ರೀಮಿಯಂ ಅನುಭವವನ್ನು ಪಡೆಯಬಹುದು. ಇದರಲ್ಲಿ ಗ್ರಾಹಕರು KTM PowerParts ಮತ್ತು KTM ಪವರ್‌ವೇರ್‌ಗಳ ಸಮಗ್ರ ಆಯ್ಕೆಯನ್ನು ಅನ್ವೇಷಿಸಬಹುದು, KTM Pro-XP ಅನುಭವಗಳನ್ನು ಆನಂದಿಸಬಹುದು ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 14, 2024, 20:33 [IST]
English summary
Ktm launches high performance motorcycles up to 1390cc in india
Read more on ktm new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+