ಅಗ್ಗದ ಬೆಲೆಗೆ ಹೊಸ ಇವಿ ಸ್ಕೂಟರ್ ಬಿಡುಗಡೆ.. ಆಗಲೇ 10 ಸಾವಿರ ಬುಕಿಂಗ್.. 100 ಕಿ.ಮೀ ರೇಂಜ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾದಂತೆ ಹೊಸ ಇವಿ ತಯಾರಕಾ ಕಂಪನಿಗಳು ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದೀಗ EV ವಿಭಾಗದಲ್ಲಿನ ಟಾಪ್-10 ಇವಿ ಕಂಪನಿಗಳಲ್ಲಿ ಒಂದಾದ ಲೆಕ್ಟ್ರಿಕ್ಸ್ EV, LXS 2.0 ಎಂಬ ಹೊಸ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಹೊಸ LXS 2.0 ದ್ವಿಚಕ್ರ ವಾಹನ ವಿಭಾಗದಲ್ಲಿ ಗ್ರಾಹಕರಿಗೆ 3 ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಏಕೈಕ EV ಆಗಿದೆ. ಇದು ಸರಿಯಾದ ರೇಂಜ್, ಉತ್ತಮ ಗುಣಮಟ್ಟ ಮತ್ತು ಹಣಕ್ಕೆ ಸರಿಯಾದ ಮೌಲ್ಯವನ್ನು ಹೊಂದಿದೆ. LXS 2.0 ಈಗಾಗಲೇ 10,000 ಯುನಿಟ್‌ಗಳ ಪ್ರೀ ಬುಕಿಂಗ್ ಪಡೆದಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

lectrix-ev-launches-e2w-lxs-2-0-with-2-3kw-battery-at-inr-79-999

ಮಾರ್ಚ್ 2024 ರಿಂದ ಡೆಲಿವರಿಗಳು ಪ್ರಾರಂಭವಾಗಲಿವೆ, ಪ್ರೀ ಬುಕಿಂಗ್ ತೆರೆದಿದ್ದು ಆಸಕ್ತ ಗ್ರಾಹಕರು ನಮ್ಮ ಹೊಸ ಉತ್ಪನ್ನವನ್ನು ಬುಕ್‌ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. ನಮ್ಮ ಹೊಸ LXS 2.0 ಉತ್ತಮ ವೈಶಿಷ್ಟ್ಯಗಳು, ಆಕರ್ಷಕ ಡಿಸೈನ್ ಹಾಗೂ ಅದರ ಬ್ಯಾಟರಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿ ರೇಂಜ್ ನೀಡುತ್ತದೆ ಎಂದು ಲೆಕ್ಟ್ರಿಕ್ಸ್ ಹೇಳಿದೆ.

ಹೊಸ LXS 2.0 ಎಲೆಕ್ಟ್ರಿಕ್ ಬ್ಯಾಟರಿ, ರೇಂಜ್ ವಿಶೇಷತೆಗಳ ಬಗ್ಗೆ ಹೇಳುವುದಾದ್ರೆ, ಒಮ್ಮೆ ಸ್ಕೂಟರ್ ಅನ್ನು ಚಾರ್ಜ್ ಮಾಡಿದ್ರೆ ಬರೋಬ್ಬರಿ 98 ಕಿ.ಮೀ ರೇಂಜ್ ನೀಡಲಿದೆ. ಇದರಲ್ಲಿ 2.3KW ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಬರೋಬ್ಬರಿ 1.25 ಲಕ್ಷ ಕಿ.ಮೀ ರಸ್ತೆ ಪರೀಕ್ಷೆ ನಡೆಸಲಾಗಿದೆ. ಸಾಟಿಯಿಲ್ಲದ ಗುಣಮಟ್ಟದೊಂದಿಗೆ ಅಗ್ಗದ ಬೆಲೆ ರೂ. 79,999 (ವರ್ಗದಲ್ಲಿ ಕಡಿಮೆ)ಕ್ಕೆ ಹೊಸ ಇವಿಯನ್ನು ಬಿಡುಗಡೆ ಮಾಡಲಾಗಿದೆ.

ಎಸ್‌ಎಆರ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಂಡಿ ಮತ್ತು ಸಿಇಒಕೆ ವಿಜಯ ಕುಮಾರ್ ಮಾತನಾಡಿ, "ಭಾರತದಲ್ಲಿನ ಮೌಲ್ಯ-ಪ್ರಜ್ಞೆಯ ಗ್ರಾಹಕರ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ವ್ಯಾಪಕವಾದ ಸ್ವೀಕಾರವನ್ನು ಖಚಿತಪಡಿಸಿಕೊಳ್ಳಲು, ನಾವು ಈ ಹೊಸ ಉತ್ಪನ್ನವನ್ನು ಪ್ರಾರಂಭಿಸಿದ್ದೇವೆ ಎಂದರು.

ಇದು ನಾವೀನ್ಯತೆ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 'ಮೌಲ್ಯ' ಮತ್ತು 'ಕೈಗೆಟಕುವ ಸಾಮರ್ಥ್ಯ'ದ ಪರಿಪೂರ್ಣ ಸಮತೋಲನವಾಗಿದೆ. 98km ರೇಂಜ್ ಹಾಗೂ 2.3 KW ಬ್ಯಾಟರಿಯೊಂದಿಗೆ ರೂ. 79,999/- ಕ್ಕೆ ಲಭ್ಯವಿರುವ ಏಕೈಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನಮ್ಮದಾಗಿದೆ ಎಂದು ಎಂಡಿ ಮತ್ತು ಸಿಇಒಕೆ ವಿಜಯ ಕುಮಾರ್ ಹೇಳಿದರು.

ಲೆಕ್ಟ್ರಿಕ್ಸ್ ಇವಿ ಎಸ್‌ಎಆರ್ ಗ್ರೂಪ್‌ನ ಇ-ಮೊಬಿಲಿಟಿಯ ಒಂದು ಭಾಗವಾಗಿದೆ. ಇದನ್ನು 2020 ರಲ್ಲಿ ಪ್ರಾರಂಭಿಸಲಾಯಿತು. ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಸುಧಾರಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಒದಗಿಸುವ ಉತ್ಸಾಹದಿಂದ ಕಂಪನಿಯು ನಡೆಸಲ್ಪಡುತ್ತಿದೆ. ರೂ. 300 ಕೋಟಿಯ ಆರಂಭಿಕ ಹೂಡಿಕೆಯೊಂದಿಗೆ ಮತ್ತು 1.5 ಲಕ್ಷ ಇವಿಗಳ ವಾರ್ಷಿಕ ಸಾಮರ್ಥ್ಯದ ಉತ್ಪಾದನೆಯ ಗುರಿ ಹೊಂದಿರುವುದಾಗಿ ಕಂಪನಿ ಹೇಳಿದೆ.

ಲೆಕ್ಟ್ರಿಕ್ಸ್ ಇವಿ ತನ್ನ ಪೋರ್ಟ್ಫೋಲಿಯೊಗೆ ವ್ಯಾಪಕ ಶ್ರೇಣಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸೇರಿಸಲು ಯೋಜಿಸಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೇಲೆ ತೀವ್ರ ಗಮನಹರಿಸುವುದರೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಒದಗಿಸಲಾದ ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುನ್ನುಗ್ಗುವ ಗುರಿಯನ್ನು ಕಂಪನಿ ಹೊಂದಿರುವುದಾಗಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 9, 2024, 12:58 [IST]
English summary
Lectrix ev launches e2w lxs 2 0 with 2 3kw battery at inr 79 999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+