ಬೆಲೆ ಕೇವಲ ರೂ. 50 ಸಾವಿರ: 100 ಕಿ.ಮೀ ರೇಂಜ್ ನೀಡುವ ಹೊಸ ಇವಿ ವಿಶೇಷತೆಗಳು!

ಭಾರತದಲ್ಲಿ ಇತ್ತೀಚೆಗೆ ಲೆಕ್ಟ್ರಿಕ್ಸ್ ಎಲ್ಎಕ್ಸ್ಎಸ್ 2.0(Lectrix LXS 2.0) ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ 49,999 ರೂ.ಗೆ ಬಿಡುಗಡೆಯಾಗಿದೆ. 100 ಕಿ.ಮೀ ರೇಂಜ್ ಜೊತೆಗೆ ಗರಿಷ್ಟ ವೇಗವು ಗಂಟೆಗೆ 50 ಕಿ.ಮೀ ಇದ್ದು, ಜೀವಮಾನದ ಬ್ಯಾಟರಿ ವಾರಂಟಿಯೊಂದಿಗೆ ಬರುತ್ತದೆ ಎಂದು ಕಂಪನಿ ತಿಳಿಸಿದ್ದು, ಹೆಚ್ಚಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಭಾರತದಲ್ಲಿ ಪ್ರಸ್ತುತ ಕಡಿಮೆಯೆಂದರೂ ಪೆಟ್ರೋಲ್ ಚಾಲಿತ ಸ್ಕೂಟರ್ ಬೆಲೆ 1 ಲಕ್ಷವಿದೆ. ಇದೇ ಬೆಲೆಗೆ ಇದೀಗ ಬಿಡುಗಡೆಯಾಗಿರುವ ಹೊಸ ಲೆಕ್ಟ್ರಿಕ್ಸ್ ಎಲ್ಎಕ್ಸ್ಎಸ್ 2.0 ಎಲೆಕ್ಟ್ರಿಕ್ ಸ್ಕೂಟರ್‌ಗಳು ಎರಡು ಬರಲಿವೆ. ಜೊತೆಗೆ ಕುತೂಹಲಕಾರಿಯಾಗಿ ಗ್ರಾಹಕರಿಗೆ ಹೊಸ ಲೆಕ್ಟ್ರಿಕ್ಸ್ ಎಲ್ಎಕ್ಸ್ಎಸ್ 2.0-ಸ್ಕೂಟರ್ ಬ್ಯಾಟರಿಗೆ ಸೇವೆ ನೀಡಲಾಗುವುದು. ಇದರರ್ಥ ಗ್ರಾಹಕರು ಚಂದಾದಾರಿಕೆ ಆಧಾರದ ಮೇಲೆ ಬ್ಯಾಟರಿ ಸೇವೆಗಳಿಗೆ ಪಾವತಿಸಬೇಕಾಗುತ್ತದೆ. ಅಲ್ಲದೇ ಬ್ಯಾಟರಿ - ಎ - ಸರ್ವೀಸ್ ಪ್ರೋಗ್ರಾಂನಿಂದಾಗಿ ಲೆಕ್ಟ್ರಿಕ್ಸ್ ಇವಿ ಗ್ರಾಹಕರು ಇಂಧನ ಚಾಲಿತ ಸ್ಕೂಟರ್‌ಗಳಿಗಿಂತ ಶೇ 40 ರಷ್ಟು ಕಡಿಮೆ ಪಾವತಿಸುತ್ತಾರೆ ಎಂದು ಬ್ರಾಂಡ್ ಹೇಳಿಕೊಂಡಿದೆ.

lectrix-lxs-2-0-electric-scooter-price-range-specs-details

ಲೆಕ್ಟ್ರಿಕ್ಸ್ ಇವಿಯ ಇವಿ ಅಧ್ಯಕ್ಷ ಪ್ರೀತೇಶ್ ತಲ್ವಾರ್ ಮಾತನಾಡಿ, ವಾಹನದಿಂದ ಬ್ಯಾಟರಿಯನ್ನು ಡಿಲಿಂಕ್ ಮಾಡಿ ಅದನ್ನು ಸೇವೆಯಾಗಿ ಒದಗಿಸುವ ಮೂಲಕ, ಇವಿ ಅನುಭವವು ಗ್ರಾಹಕರಿಗೆ ಹೆಚ್ಚು ಸುಲಭವಾಗಬಹುದು. ಇವಿ ಅಳವಡಿಕೆಗೆ ಪ್ರಮುಖ ಸವಾಲುಗಳೆಂದರೆ ಅವುಗಳ ಹೆಚ್ಚಿನ ಬೆಲೆ ಮತ್ತು ಬ್ಯಾಟರಿಯ ಸುತ್ತಲಿನ ಅನಿಶ್ಚಿತತೆಯಾಗಿದೆ. ಈ ಎರಡೂ ಸವಾಲುಗಳನ್ನು ಪರಿಹರಿಸಿದ್ದೇವೆ ಎಂದರು.

"ಇಂಧನ ಚಾಲಿತ ವಾಹನವನ್ನು ಖರೀದಿಸುವ ಮುಂಗಡ ವೆಚ್ಚವು 1 ಲಕ್ಷ ರೂ.ಗಳಷ್ಟಿದೆ, ಇದು ನಮ್ಮ ಕೊಡುಗೆಯ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಹೆಚ್ಚುವರಿಯಾಗಿ, ಪೆಟ್ರೋಲ್ ಮೇಲಿನ ಮಾಸಿಕ ಹೂಡಿಕೆ ಹೆಚ್ಚುತ್ತಿದೆ, ಇದು ಇಂಧನ ಚಾಲಿತ ವಾಹನದ ನಿರ್ವಹಣಾ ವೆಚ್ಚದೊಂದಿಗೆ ಸೇರಿ ನಮ್ಮ ಚಂದಾದಾರಿಕೆ ಯೋಜನೆಯನ್ನು ಹೆಚ್ಚು ಆರ್ಥಿಕಗೊಳಿಸುತ್ತಿದೆ" ಎಂದು ತಲ್ವಾರ್ ಹೇಳಿದರು.

ಹೊಸ ಎಲ್ಎಕ್ಸ್ಎಸ್ 2.0 ಗ್ರಾಹಕರ ಮೂರು ನಿರ್ಣಾಯಕ ಅಗತ್ಯಗಳಾದ ರೇಂಜ್, ಗುಣಮಟ್ಟ ಮತ್ತು ಮೌಲ್ಯವನ್ನು ಪೂರೈಸುತ್ತದೆ ಎಂದು ಕಂಪನಿ ಹೇಳಿದೆ. ಲೆಕ್ಟ್ರಿಕ್ಸ್ ಹೊಸ ಎಲ್ಎಕ್ಸ್ಎಸ್ 2.0 ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಮೊದಲ ಬಾರಿಯ ಖರೀದಿದಾರರನ್ನು ಗುರಿಯಾಗಿಸಿಕೊಂಡು 3 ವರ್ಷಗಳ ಅಥವಾ 30,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ. ಈ ಮಾದರಿಯು ಕಳ್ಳತನ ವಿರೋಧಿ ವ್ಯವಸ್ಥೆ, ತುರ್ತು ಎಸ್ಒಎಸ್, ಮನೆ ಬಾಗಿಲಿಗೆ ಸೇವೆ ಮತ್ತು ಇನ್ನೂ ಹೆಚ್ಚಿನ ಅಗತ್ಯ ಸೇವೆಗಳನ್ನು ನೀಡುತ್ತಿದೆ. ದೇಶಾದ್ಯಂತ ಗ್ರಾಹಕರು 10,000 ಕ್ಕೂ ಹೆಚ್ಚು ಲೆಕ್ಟ್ರಿಕ್ಸ್ ಎಲೆಕ್ಟ್ರಿಕ್ ವಾಹನಗಳನ್ನು ಈಗಾಗಲೇ ಬಳಸುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಇದಕ್ಕೂ ಮೊದಲು ಫೆಬ್ರವರಿ 2024 ರಲ್ಲಿ, ಕಂಪನಿಯು ಎಲ್ಎಕ್ಸ್ಎಸ್ 2.0 ಎಲೆಕ್ಟ್ರಿಕ್ ಸ್ಕೂಟರ್‌ನ ಕಡಿಮೆ ರೇಂಜ್ ನೀಡುವ ಆವೃತ್ತಿಯನ್ನು ಅನ್ನು ಬಿಡುಗಡೆ ಮಾಡಿತು, ಇದು ಒಂದು ಬಾರಿ ಚಾರ್ಜ್ ಮಾಡಿದರೆ 98 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. 2.3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಈ ಸ್ಕೂಟರ್ ಬೆಲೆಯು 79,999 ರೂ (ಎಕ್ಸ್ ಶೋರೂಂ) ಇತ್ತು.

ಸದ್ಯ ಇರುವ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಇದು ತುಂಬಾ ಅಗ್ಗವಾಗಿ ಸಿಗುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಒಟ್ಟಾರೆ ಭಾರತದಲ್ಲಿ ಈ ಹೊಸ ಸ್ಕೂಟರ್ ಅಗ್ಗದ ಬೆಲೆಯೊಂದಿಗೆ ಹೊಸ ಅಲೆ ಎಬ್ಬಸಲಿದೆಯೇ ಕಾದುನೋಡಬೇಕಿದೆ. ಹೊಸ Lectrix LXS 2.0 ಸ್ಕೂಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 9, 2024, 14:00 [IST]
English summary
Lectrix lxs 2 0 electric scooter price range specs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+