ಈಗಲೇ ಮನೆಗೆ ತನ್ನಿ.. ಕಡಿಮೆ ಬೆಲೆಗೆ ಸಿಗುತ್ತವೆ ಜನಪ್ರಿಯ ಕಂಪನಿಗಳ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಭಾರತದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ಆದರೆ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದರಿಂದ ಸ್ಕೂಟರ್ ಅಥವಾ ಬೈಕ್‌ಗಳನ್ನು ನಿರ್ವಹಣೆ ಮಾಡುವುದು ತುಂಬಾ ಕಷ್ಟದ ಕೆಲಸವಾಗಿದೆ. ನೀವು ಒಮ್ಮೆ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿಸಿದರೆ ಸಾಕು, ಅತ್ಯಂತ ಕಡಿಮೆ ಖರ್ಚಿನಲ್ಲಿ ದೀರ್ಘ ಕಾಲದವರೆಗೆ ಅದನ್ನು ಓಡಿಸಬಹುದು. ಹಲವರು ಹೆಚ್ಚಿನ ದರವಿರುವುದರಿಂದ ಇ-ಸ್ಕೂಟರ್‌ಗಳನ್ನು ಮನೆಗೆ ತರಲು ಹಿಂದೇಟು ಹಾಕುತ್ತಾರೆ. ಇಲ್ಲಿ ನಾವು ಬಜೆಟ್ ಬೆಲೆಗೆ ಲಭ್ಯವಿರುವ ಜನಪ್ರಿಯ ಕಂಪನಿಗಳಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಮೊದಲಿಗೆ ಓಲಾ ಎಸ್1 ಎಕ್ಸ್ (Ola S1 X) ಬಗ್ಗೆ ಮಾತನಾಡೋಣ. ಈ ಎಲೆಕ್ಟ್ರಿಕ್ ಸ್ಕೂಟರ್ ಹಲವು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರ 2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ರೂ.74,999 ಎಕ್ಸ್ ಶೋರೂಂ ದರವನ್ನು ಪಡೆದಿದೆ ಭರ್ತಿ ಚಾರ್ಜ್ ನಲ್ಲಿ 91 ಕಿ.ಮೀ ಓಡುತ್ತದೆ.

Low Price Electric Scooters In India Ola S1x Ather Rizta Bajaj Chetak 2901

ಓಲಾ ಎಸ್1 ಎಕ್ಸ್‌ನ 3 ಕೆಡಬ್ಲ್ಯೂಹೆಚ್ ಬ್ಯಾಟರಿ ಪಡೆದಿರುವ ಆವೃತ್ತಿಯು ರೂ.89,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದೆ. 4 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ರೂಪಾಂತರವು ರೂ.99,999 ಬೆಲೆಯನ್ನು (ಎಕ್ಸ್ ಶೋರೂಂ) ದರವನ್ನು ಒಳಗೊಂಡಿದ್ದು, ಪೂರ್ತಿ ಚಾರ್ಜ್ ನಲ್ಲಿ 190 ಕಿಲೋಮೀಟರ್ ಕ್ರಮಿಸುತ್ತದೆ.

ಜೂನ್.7ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಬಜಾಜ್ ಚೇತಕ್ 2901 (Bajaj Chetak 2901) ಇ-ಸ್ಕೂಟರ್ ಸಹ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ರೂ.95,998 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 2.88 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

Low Price Electric Scooters In India Ola S1x Ather Rizta Bajaj Chetak 2901

ಈ ಚೇತಕ್ 2901 ಎಲೆಕ್ಟ್ರಿಕ್ ಸ್ಕೂಟರ್ 63 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೆಡ್, ವೈಟ್ ಲೈಮ್ ಯೆಲ್ಲೋ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಲಿದ್ದು, ಜೂನ್ 15ರಿಂದ ಗ್ರಾಹಕರಿಗೆ ವಿತರಣೆಗಳು ಶುರುವಾಗಲಿದೆ ಎಂದು ತಿಳಿದುಬಂದಿದೆ.

ಎಥರ್ ರಿಜ್ಟಾ (Ather Rizta) ಎಲೆಕ್ಟ್ರಿಕ್ ಸ್ಕೂಟರ್ ಕೂಡ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ರೂ.1.10 ಲಕ್ಷದಿಂದ ರೂ.1.45 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಸಿಯಾಚಿನ್ ವೈಟ್ ಮೊನೊ, ಡೆಕ್ಕನ್ ಗ್ರೇ ಮೊನೊ, ಪ್ಯಾಂಗೊಂಗ್ ಬ್ಲೂ ಡ್ಯುಯೊ ಸೇರಿದಂತೆ 7 ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ. 2.9 ಮತ್ತು 3.7 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, 123 ರಿಂದ 160 ಕಿಲೋಮೀಟರ್ ಕ್ರಮಿಸುತ್ತದೆ.

Low Price Electric Scooters In India Ola S1x Ather Rizta Bajaj Chetak 2901

ಈ ಎಥರ್ ರಿಜ್ಟಾ ಇ-ಸ್ಕೂಟರ್ ಸ್ಮಾರ್ಟ್, ಇಕೋ ಮತ್ತು ಜಿಪ್ ಎಂಬ ರೈಡಿಂಗ್ ಮೋಡ್‌ನ್ನು ಪಡೆದಿದ್ದು, 80 ಕೆಎಂಪಿಹೆಚ್ ಟಾಪ್ ಸ್ಪೀಡ್ ಒಳಗೊಂಡಿದೆ. 7-ಇಂಚಿನ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಶೇಕಡ 0 ರಿಂದ 80% ಚಾರ್ಜ್ ಆಗಲು 4 ಗಂಟೆ 30 ನಿಮಿಷ ಬೇಕಾಗುತ್ತದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 9, 2024, 10:30 [IST]
English summary
Low price electric scooter india ola s1x ather rizta bajaj chetak 2901
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+