ವೈದ್ಯರು-ಎಂಜಿನಿಯರ್‌ಗಳು ಸಹ ಈ ಅಗ್ಗದ ಕಾರನ್ನು ಇಷ್ಟಪಡುತ್ತಾರೆ: 24 ವರ್ಷಗಳಿಂದ ನಂ.1 ಸ್ಥಾನ!
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬಜೆಟ್ ಕಾರುಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ. ಇದರಲ್ಲಿ ಮೊದಲು ಮಾರುತಿ 800, ನಂತರ ವ್ಯಾಗನ್-ಆರ್ (Maruti Wagon-R) ಇವೆ. ಇವು ಸುರಕ್ಷತೆಯಲ್ಲಿ ಹಿಂದುಳಿದಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯತೆ ಪಡೆದಿವೆ. ಮಾರುತಿ ವ್ಯಾಗನ್-ಆರ್ 1999 ರಲ್ಲಿ ಬಿಡುಗಡೆಯಾಗಿ ಇನ್ನೂ ಜನರಲ್ಲಿ ಅಚ್ಚಳಿಯದೇ ಉಳಿದಿದೆ.
ಮಾರುತಿ ವ್ಯಾಗನ್-ಆರ್ (Maruti Wagon-R) ಬಿಡುಗಡೆಯಾಗಿ 24 ವರ್ಷಗಳಾದರೂ ಇಂದಿಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಕಂಪನಿಯು ಪ್ರತಿ ತಿಂಗಳು ಸರಾಸರಿ 15,000 ಯುನಿಟ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚ. ಇದು ಮಧ್ಯಮ ವರ್ಗದ ಜೊತೆಗೆ ಅನೇಕ ವೃತ್ತಿಪರರ ಆಯ್ಕೆಯಾಗಿರುವ ಕಾರಣ ಭಾರತದಲ್ಲಿ ಸಾಮಾನ್ಯ ಜನರಿಂದ ಹಿಡಿದು ವೈದ್ಯರು ಮತ್ತು ಎಂಜಿನಿಯರ್ ಗಳವರೆಗೆ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಎಲ್ಲರ ಹೃದಯ ಗೆಲ್ಲುತ್ತಿರುವ ಮಾರುತಿ ವ್ಯಾಗನ್ - ಆರ್‌ನ ವಿಶೇಷತೆಗಳನ್ನು ಇಲ್ಲಿ ತಿಳಿಯೋಣ.

ಮಾರುತಿ ವ್ಯಾಗನ್-ಆರ್ 6 ರಿಂದ 8 ಲಕ್ಷ ರೂ.ಗಳ ಬಜೆಟ್‌ನಲ್ಲಿ ಸಿಗುತ್ತದೆ. 5 ಜನರಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುವುದರ ಜೊತೆಗೆ ಈ ಕಾರಿನಲ್ಲಿ ಲೆಗ್ ರೂಮ್ ಮತ್ತು ಹೆಡ್ ರೂಮ್ ಉತ್ತಮವಾಗಿರುತ್ತದೆ. ಜೊತೆಗೆ ಬೂಟ್ ಸ್ಪೇಸ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಸಹ ಸಾಕಷ್ಟು ಉತ್ತಮವಾಗಿದೆ. ಡ್ರೈವರ್ ಸೀಟ್ ಕೂಡ ಸರಿಹೊಂದಿಸಿಕೊಳ್ಳಬಹುದು, ಇದರಿಂದ ಸೌಕರ್ಯಯುತ ದೀರ್ಘ ಪ್ರಯಾಣ ಮಾಡಬಹುದು.
ವೈಶಿಷ್ಟ್ಯಗಳು: ಮಾರುತಿ ವ್ಯಾಗನ್-ಆರ್ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ, 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಸ್ಮಾರ್ಟ್ ಫೋನ್ ನ್ಯಾವಿಗೇಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್-ಹೋಲ್ಡ್ ಅಸಿಸ್ಟ್ (ಎಎಂಟಿ ರೂಪಾಂತರ ಮಾತ್ರ) ಇವೆ.

ಎಂಜಿನ್: ಕಂಪನಿಯು ವ್ಯಾಗನ್ - ಆರ್ ಮೂಲ ಮಾದರಿಯಲ್ಲಿ 1.0 - ಲೀಟರ್ ಕೆ-ಸೀರಿಸ್ ಎಂಜಿನ್ ಅನ್ನು ನೀಡುತ್ತದೆ. ಉನ್ನತ ಮಾದರಿಯನ್ನು 1.2 - ಲೀಟರ್ ಎಂಜಿನ್ ನೊಂದಿಗೆ ನೀಡಲಾಗುತ್ತದೆ. ಈ ಕಾರು 1.0 - ಲೀಟರ್ ಎಂಜಿನ್‌ನಲ್ಲಿ ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿದೆ. 1.2 ಲೀಟರಿನ ಪೆಟ್ರೋಲ್ ಎಂಜಿನ್ 88.5 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಮೈಲೇಜ್ ಕೂಡ ಉತ್ತಮವಾಗಿದ್ದು, ಪೆಟ್ರೋಲ್‌ನಲ್ಲಿ 25 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ 35 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಮೈಲೇಜ್ ಅಂಕಿಅಂಶಗಳು ARAI ಪ್ರಮಾಣೀಕೃತವಾಗಿವೆ.
ವ್ಯಾಗನ್ ಆರ್ ಅನ್ನು ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ + ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಟ್ರಿಮ್‌ಗಳು ಕಾರ್ಖಾನೆಯಲ್ಲಿ ಅಳವಡಿಸಿದ ಸಿಎನ್‌ಜಿ ಕಿಟ್ ಆಯ್ಕೆಯೊಂದಿಗೆ ಬರುತ್ತವೆ. ಮಾರುತಿ ವ್ಯಾಗನ್ ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.54 ಲಕ್ಷದಿಂದ ರೂ.7.42 ಲಕ್ಷಗಳಾಗಿದೆ.

1999 ರಲ್ಲಿ ಬಿಡುಗಡೆ: ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ಮೊದಲ ಬಾರಿಗೆ 1999 ರಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಅನೇಕ ವರ್ಷಗಳಿಂದ ಮಾರಾಟವಾಗುತ್ತಿರುವ ಈ ವಾಹನದ ಮರುಮಾರಾಟ ಮೌಲ್ಯವೂ ತುಂಬಾ ಉತ್ತಮವಾಗಿದೆ. ಮಾರುತಿ ವ್ಯಾಗನ್ ಆರ್ ಪೆಟ್ರೋನ್‌ನಲ್ಲಿ 23 - 25 ಕಿ.ಮೀ ಮತ್ತು ಸಿಎನ್‌ಜಿಯಲ್ಲಿ 33 ಕಿ.ಮೀ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications