ಯುವಕರಿಗೆ ಈ ಬೈಕ್‌ಗಳೆಂದ್ರೆ ಪಂಚಪ್ರಾಣ.. 'ಮನದರಸಿ' ಜೊತೆಯಲ್ಲಿ ಜಾಲಿ ರೈಡ್ ಹೋಗಬಹುದು!
ಹೊಸದೊಂದು 'ಬೈಕ್' ಖರೀದಿಸಬೇಕೆಂಬುದು ಪ್ರತಿಯೊಬ್ಬ ಯುವಕರ ಕನಸಾಗಿರುತ್ತದೆ. ಆದರೆ, ಯಾವ ಮೋಟಾರ್‌ಸೈಕಲ್ ಹೆಚ್ಚು ಉತ್ತಮ.. ಅದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆಯೇ.. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆಯೇ ಎಂಬ ಗೊಂದಲವಿರುತ್ತದೆ. ನೀವು ಕೂಡ ಹೊಚ್ಚ ಹೊಸ ಬೈಕ್‌ವೊಂದನ್ನು ತೆಗೆದುಕೊಳ್ಳಲು ಯೋಚಿಸಿದ್ದೀರಾ.. ಹಾಗಾದರೆ ಹೀರೋ ಕರಿಜ್ಮಾ, ಟಿವಿಎಸ್ ಅಪಾಚೆ ಆರ್‌ಟಿಆರ್ 310 ಹಾಗೂ ಬಜಾಜ್ ಪಲ್ಸರ್ ಎನ್ಎಸ್200 ಮೋಟಾರ್‌ಸೈಕಲ್‌ಗಳು ಹೆಚ್ಚು ಸೂಕ್ತವಾಗಬಲ್ಲವು. ಬನ್ನಿ.. ಬೈಕ್‌ಗಳ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾದ ಮಾಹಿತಿ ತಿಳಿಯೋಣ.
ಮೊದಲಿಗೆ ಹೀರೋ ಕರಿಜ್ಮಾ ಎಕ್ಸ್ಎಂಆರ್ (Hero Karizma XMR) ಬೈಕ್ ಬಗ್ಗೆ ಮಾತನಾಡೋಣ. ಇದು ರೂ.1.81 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 210 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 25.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 20.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಈ ಹೀರೋ ಕರಿಜ್ಮಾ ಬೈಕ್, 41.55 ಕೆಎಂಪಿಎಲ್‌ವರೆಗೂ ಕೊಡುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಎಲ್‌ಸಿಡಿ ಇಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ನ್ನು ಹೊಂದಿದೆ.
ಟಿವಿಎಸ್ ಅಪಾಚೆ ಆರ್‌ಟಿಆರ್ 310 (TVS Apache RTR 310) ಕುರಿತಂತೆ ಹೇಳುವುದಾದರೆ, ಈ ಬೈಕ್ ರೂ.2.50 ರಿಂದ ರೂ.2.72 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. 312.7 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 35.6 ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 28.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್, 35 ಕೆಎಂಪಿಎಲ್‌ವರೆಗೂ ನೀಡುತ್ತದೆ. ಟಿಎಫ್‌ಟಿ ಇಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟ್ರ್ಯಾಕ್, ಅರ್ಬನ್, ರೈನ್, ಸ್ಪೋರ್ಟ್ & ಸೂಪರ್‌ಮೋಟೋ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.
ಬಜಾಜ್ ಪಲ್ಸರ್ ಎನ್ಎಸ್200 (Bajaj Pulsar NS200) ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ರೂ.1.47 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 199.5 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 24.5 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 18.74 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಹೊಸ ಪಲ್ಸರ್ ಎನ್ಎಸ್200 ಮೋಟಾರ್‌ಸೈಕಲ್, 40.36 ಕೆಎಂಪಿಎಲ್‌ವರೆಗೂ ಕೊಡುತ್ತದೆ. ಎಲ್ಇಡಿ ಹೆಡ್‌ಲೈಟ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಫುಲ್-ಎಲ್‌ಸಿಡಿ ಇಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡಬಲ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications