Hero Xoom: ಹೊಸ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್ ವಿಶೇಷತೆಗಳು

ಭಾರತದಲ್ಲಿ ಇತ್ತೀಚೆಗೆ ಹೀರೋ ಕಂಪನಿ ಫೈಟರ್ ಜೆಟ್‌ ಹೋಲುವಂತಹ 'ಕಾಂಬ್ಯಾಟ್ ಎಡಿಷನ್' ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೀರೋ ಕಂಪನಿಯು ಈ ಹಿಂದೆ ಬಿಡುಗಡೆ ಮಾಡಿದ್ದ ಕ್ಸೂಮ್ ಸ್ಕೂಟರ್ ಶ್ರೇಣಿಯನ್ನೇ ಈಗ ಕಾಂಬ್ಯಾಟ್ ಎಡಿಷನ್ ರೂಪದಲ್ಲಿ ನವೀಕರಣಗೊಳಿಸಿದೆ. ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾದಂತೆ ಹೊಸ ಅಪ್‌ಡೇಟೆಡ್ ಮಾಡೆಲ್‌ಗಳನ್ನು ಪರಿಚಯಿಸುತ್ತಿರುವ ಹೀರೋ, ಹೊಸ ಕಾಂಬ್ಯಾಟ್ ಎಡಿಷನ್ ಅನ್ನು ರೂ. 80,967 (ದೆಹಲಿ ಎಕ್ಸ್ ಶೋರೂಂ)ಕ್ಕೆ ಪರಿಚಯಿಸಿದೆ. ಹೊಸ ಫೈಟರ್ ಜೆಟ್ ಹೋಲುವ ಹೀರೋ ಕ್ಸೂಮ್ ಕಾಂಬ್ಯಾಟ್ ಎಡಿಷನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೀರೋ ಕ್ಸೂಮ್ ಕಾಂಬ್ಯಾಟ್ ಆವೃತ್ತಿಯು (Combat edition) ಸ್ಪೋರ್ಟಿ ಹೀರೋ ಸ್ಕೂಟರ್‌ನ ಟಾಪ್-ಸ್ಪೆಕ್ ಝಡ್‌ಎಕ್ಸ್ (ZX) ರೂಪಾಂತರವನ್ನು ಆಧರಿಸಿದೆ. ಅಲ್ಲದೇ ಕಾಂಬ್ಯಾಟ್ ಆವೃತ್ತಿಯು ಬೆಸ್ಟ್‌ ಪರ್ಫಾಮೆನ್ಸ್ ಹಾಗೂ ಆಕರ್ಷಕ ಡಿಸೈನ್‌ನಿಂದಾಗಿ ಬೆಲೆ ಹೆಚ್ಚಳವನ್ನು ಪಡೆದಿದೆ. ಸಾಮಾನ್ಯ ಹೀರೋ ಕ್ಸೂಮ್ ಸರಣಿಯ ಮೂಲ ಎಲ್ಎಕ್ಸ್ ವೇರಿಯೆಂಟ್ ಬೆಲೆಗಳು 71,484 ರೂ.ಗಳಿಂದ ಪ್ರಾರಂಭವಾಗುತ್ತವೆ.

new-2024-hero-xoom-combat-edition-price-features-details

ಆದರೆ ಇಲ್ಲಿ ಹೊಸ ಹೀರೋ ಕ್ಸೂಮ್ ಕಾಂಬ್ಯಾಟ್ ಆವೃತ್ತಿಯ ಬೆಲೆಯು 80,967 ರೂ.ಗಳಿದ್ದು, ಈ ಸರಿಣಿಯಲ್ಲಿನ ಬೇಸ್‌ ವೇರಿಯೆಂಟ್ ಸ್ಕೂಟರ್‌ಗಳಿಗಿಂತ ಕ್ಸೂಮ್ ಕಾಂಬ್ಯಾಟ್ ಆವೃತ್ತಿ ಹತ್ತು ಸಾವಿರ ರೂ. ಬೆಲೆ ಹೆಚ್ಚಳವನ್ನು ಪಡೆದಿದೆ. ಅಲ್ಲಿಗೆ ಕ್ಸೂಮ್ ಕಾಂಬ್ಯಾಟ್ ಎಡಿಷನ್, ಪ್ರಸ್ತುತ ಮಾರಾಟವಾಗುತ್ತಿರುವ ಸ್ಪೋರ್ಟಿ ಹೀರೋ ಸ್ಕೂಟರ್‌ನ ಅತ್ಯಂತ ದುಬಾರಿ ವೇರಿಯೆಂಟ್ ಆಗಿದೆ.

ಈ ಟಾಪ್ ವೇರಿಯೆಂಟ್ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಕಾರ್ನರಿಂಗ್ ಲೈಟ್ಸ್ ವೈಶಿಷ್ಟ್ಯದೊಂದಿಗೆ ಎಲ್‌ಇಡಿ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ. ಮುಖ್ಯವಾಗಿ ಇದು 'ಮ್ಯಾಟ್ ಶಾಡೋ ಗ್ರೇ' (Matte Shadow Grey) ಎಂಬ ವಿಶೇಷ ಬಣ್ಣದಲ್ಲಿ ಬರುತ್ತದೆ. ನೋಡಲು ಆಕರ್ಷಕ ಲುಕ್‌ನೊಂದಿಗೆ ಹಳದಿ ಮತ್ತು ಬ್ಲಾಕ್ ಅಕ್ಸೆಂಟ್‌ಗಳಿಂದ ಡಿಸೈನ್ ಮಾಡಲಾದ ಒರಿಜಿನಲ್ ಗ್ರೇ ಕೋಟ್ ಅನ್ನು ಹೊಂದಿದೆ.

new-2024-hero-xoom-combat-edition-price-features-details

ಈ ವಿಶೇಷ ಆವೃತ್ತಿಯ (Special edition) ಬಣ್ಣವನ್ನು ಕೂಡ ಫೈಟರ್ ಜೆಟ್ ವಿಮಾನಗಳಲ್ಲಿ ಕಂಡುಬರುವ ಅದೇ ಬಣ್ಣ ನೆನಪಾಗುವ ಉದ್ದೇಶದಿಂದ ನೀಡಲಾಗಿದೆ. ಈ ಬಣ್ಣವನ್ನು ಹೊರತುಪಡಿಸಿ, ಕ್ಸೂಮ್ ಕಾಂಬ್ಯಾಟ್ ಆವೃತ್ತಿಯು ಯಾಂತ್ರಿಕವಾಗಿ ಟಾಪ್ ವೇರಿಯೆಂಟ್ ಝಡ್ಎಕ್ಸ್ ರೂಪಾಂತರಕ್ಕೆ ಹೋಲುತ್ತದೆ. ಅಂದರೆ ಕಾಂಬ್ಯಾಟ್ ಎಡಿಷನ್ ಕೂಡ ಟಾಪ್ ವೇರಿಯೆಂಟ್ ಎಂದು ಅರ್ಥ.

ಇದರ ಎಂಜಿನ್ ವಿಷಯಕ್ಕೆ ಬಂದರೆ, ಏರ್ ಕೂಲ್ಡ್ 110.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.2 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಝಡ್ಎಕ್ಸ್ ರೂಪಾಂತರದಲ್ಲಿ ಕಂಡುಬರುವ ಅದೇ ಡಿಜಿಟಲ್ ಡಿಸ್ಪ್ಲೇಯನ್ನು ಕ್ಸೂಮ್ ಕಾಂಬ್ಯಾಟ್ ಸ್ಪೆಷಲ್ ಎಡಿಷನ್‌ನಲ್ಲೂ ನೀಡಲಾಗಿದೆ.

new-2024-hero-xoom-combat-edition-price-features-details

ಅಂದರೆ ಇದು ಕರೆ ಮತ್ತು ಎಸ್ಎಂಎಸ್ ಎಚ್ಚರಿಕೆಗಳನ್ನು ಸಕ್ರಿಯಗೊಳಿಸುವ ಬ್ಲೂಟೂತ್ ಸಂಪರ್ಕದೊಂದಿಗೆ ಬರುತ್ತದೆ. ಅಲ್ಲದೇ ಉತ್ತಮ ಬ್ರೇಕಿಂಗ್ ಹಾಗೂ ಅತ್ಯುತ್ತಮ ಸಸ್ಪೆನ್ಷನ್ ಸೆಟಪ್‌ನೊಂದಿಗೆ ಆರಾಮದಾಯಕ ಪ್ರಯಾಣ ಅನುಭವವನ್ನು ನೀಡುತ್ತದೆ. ಇನ್ನು ಕೊನೆಯದಾಗಿ ಹೀರೋ ಕ್ಸೂಮ್‌ನ ಪ್ರಾಥಮಿಕ ಪ್ರತಿಸ್ಪರ್ಧಿ ಹೋಂಡಾ ಡಿಯೋ ಆಗಿದ್ದು, ಇದರ ಬೆಲೆಯು ರೂ.70,211 ರಿಂದ ರೂ.77,712ಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, July 7, 2024, 13:00 [IST]
English summary
New 2024 hero xoom combat edition price features details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+