ಯುವಕರ ಹೃದಯ ಕದಿಯಲು ಆಕರ್ಷಕ ವಿನ್ಯಾಸದಲ್ಲಿ ರಸ್ತೆಗಿಳಿದ ಎಪ್ರಿಲಿಯಾ RS 457 ಬೈಕ್ ವಿಡಿಯೋ ರಿವ್ಯೂ
ಎಪ್ರಿಲಿಯಾ ದೇಶದ ಹೊರಗೆ ಸೂಪರ್ ಬೈಕ್‍ಗಳಿಗೆ ಹೆಸರುವಾಸಿಯಾಗಿದ್ದು, ದೊಡ್ಡ ದೊಡ್ಡ ರೇಸ್ ಗಳಲ್ಲಿ ಕಾಣಸಿಗುತ್ತದೆ. ಉದಾಹರಾಣೆಗೆ ಮೋಟೋಜಿಪಿ ಸ್ಫರ್ಧೆಯಲ್ಲಿ ನೋಡಬಹುದು. ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ (ರೇಸ್)ಗೂ ಸ್ವಲ್ಪ ಮೊದಲು ಹೊಸ ಎಪ್ರಿಲಿಯಾ ಆರ್‍ಎಸ್ 457 (Aprilia RS 457) ಬೈಕ್‍ನ್ನು ಜಾಗತಿಕವಾಗಿ ಅನಾವರಣಗೊಳಿಸಲಾಯಿತು.
ಎಪ್ರಿಲಿಯಾ ತನ್ನ ಬಹುನಿರೀಕ್ಷಿತ ಎಪ್ರಿಲಿಯಾ RS 457 ಬೈಕ್ ಅನ್ನು 2023ರ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಗೊಳಿಸಿತು. ಬಹುನಿರೀಕ್ಷಿತ ಎಪ್ರಿಲಿಯಾ ಆರ್‌ಎಸ್ 457 ಮಿಡಲ್‌ವೇಟ್ ಸ್ಪೋರ್ಟ್ಸ್ ಬೈಕ್ ಭಾರತದಲ್ಲಿ ತಯಾರಾಗಲಿದೆ. ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇಯಲ್ಲಿ ನಾವು ಈ ಎಪ್ರಿಲಿಯಾ ಆರ್‌ಎಸ್ 457 ಬೈಕ್ ರೈಡ್ ಮಾಡಿದ್ದೇವೆ. ಈ ಬೈಕಿನ ರೈಡಿಂಗ್ ಅನುಭವ, ವಿನ್ಯಾಸ, ಫೀಚರ್ಸ್ ಮತ್ತು ಇತರ ಮಾಹಿತಿಗಳ ತಿಳಿಯಲು ವೀಡಿಯೋ ನೋಡಿ.
ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಮಾದರಿಯು ಎಪ್ರಿಲಿಯಾ RSV4 ಬೈಕಿನ ವಿನ್ಯಾಸ ಶೈಲಿಯನ್ನು ಪಡೆದುಕೊಂಡಿದೆ. ಹೊಸ ಎಪ್ರಿಲಿಯಾ RS 457 ಹೆಚ್ಚು ಶಕ್ತಿಶಾಲಿ RS 660 ಸ್ಪೋರ್ಟ್ಸ್ ಬೈಕ್‌ನ ಚಿಕ್ಕ ಆವೃತ್ತಿಯಂತೆ ಕಾಣುತ್ತದೆ. ಈ ಬೈಕ್ ಸಿಗ್ನೇಚರ್ ಟ್ರಿಪಲ್ ಎಲ್‌ಇಡಿ ಹೆಡ್‌ಲೈಟ್ ಸೆಟಪ್‌ನೊಂದಿಗೆ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್ ವಿಭಾಗಗಳನ್ನು ಇದರ ಮುಂಭಾಗದಲ್ಲಿದೆ.
ಹೊಸ RS 457 ಬೈಕಿನಲ್ಲಿ ಅಲ್ಯೂಮಿನಿಯಂ ಫ್ರೇಮ್‌ನ ಸುತ್ತಲೂ ಡಬಲ್ ಫೇರಿಂಗ್ ಸೆಟಪ್ ಸಹಾಯವನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಶಾರ್ಪ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದು, ಒಟ್ಟಾರೆ ಹೊಸ ಎಪ್ರಿಲಿಯಾ RS 457 ನ ತೀಕ್ಷ್ಣವಾದ ಏರೋಡೈನಾಮಿಕ್ ಲುಕ್ ಅನ್ನು ಹೊಂದಿದೆ. ಹೊಸ ಸ್ಪೋರ್ಟ್ಸ್ ಬೈಕ್‌ನ ಬೆಲ್ಲಿ ಪ್ಯಾನ್‌ನೊಂದಿಗೆ ಸಂಯೋಜಿಸಲ್ಪಟ್ಟಿರುವ ಅಂಡರ್‌ಬೆಲ್ಲಿ ಸೈಲೆನ್ಸರ್ ಮಾಡುತ್ತದೆ.

ಇನ್ನು ಶಾರ್ಪ್ ಚಿಕ್ಕದಾದ ಟೈಲ್ ವಿಭಾಗವು LED ಟೈಲ್‌ಲೈಟ್‌ನಿಂದ ಮತ್ತಷ್ಟು ಎದ್ದುಕಾಣುತ್ತದೆ. ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಪ್ರಿಸ್ಮಾಟಿಕ್ ಡಾರ್ಕ್, ಓಪಲೆಸೆಂಟ್ ವೈಟ್ ಮತ್ತು ರೇಸಿಂಗ್ ಸ್ಟ್ರೈಪ್ಸ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇನ್ನು ಎಪ್ರಿಲಿಯಾ RS 457 ಬೈಕ್ ಹಲವು ತಂತ್ರಜ್ಞಾನದೊಂದಿಗೆ ಲೋಡ್ ಆದ ಸ್ಪೋರ್ಟ್ಸ್ ಬೈಕ್ ಆಗಿದೆ.
ಈ ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕಿನಲ್ಲಿ 5 ಇಂಚಿನ ಬಣ್ಣದ TFT ಡಿಸ್ ಪ್ಲೇಯನ್ನು ನೀಡಲಾಗಿದೆ. ಈ ಡಿಸ್ ಪ್ಲೇಯು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಇನ್ನು ಇದು ಎಪ್ರಿಲಿಯಾ ಅಪ್ಲಿಕೇಶನ್‌ನೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಎಪ್ರಿಲಿಯಾ RS 457 ನ ಡಿಸ್ಪ್ಲೇಯನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ರೈಡಿಂಗ್ ಮೋಡ್, ಗೇರ್ ಬದಲಾಯಿಸುವುದು, ಸ್ಪೀಡ್, ಸರ್ವಿಸ್ ಮಾಹಿತಿ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.
ಹೊಸ ಎಪ್ರಿಲಿಯಾ RS 457 ಸ್ಪೋರ್ಟ್ಸ್ ಬೈಕ್ ಹೊಸ 457cc ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿದೆ. ಲಿಕ್ವಿಡ್-ಕೂಲ್ಡ್, ನಾಲ್ಕು-ವಾಲ್ವ್ ಎಂಜಿನ್ ಡ್ಯುಯಲ್-ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳು ಮತ್ತು ಫಾರ್ವರ್ಡ್-ಫೇಸಿಂಗ್ ಸಿಲಿಂಡರ್‌ಗಳನ್ನು ಒಳಗೊಂಡಿದೆ. ಈ ಎಪ್ರಿಲಿಯಾ RS 457 ಬೈಕಿನಲ್ಲಿ ಪ್ಯಾರಲಲ್ ಟ್ವಿನ್ ಎಂಜಿನ್ 9,400rpm ನಲ್ಲಿ 46.93bhp ಮತ್ತು 6,700rpm ನಲ್ಲಿ 43.5Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications








